ಮಿಕ್ಸ್‌ ಬಾಕ್ಸಿಂಗ್‌ ಚಾಂಪಿಯನ್‌ ಶಿಪ್‌: ಕೊಳ್ಳೇಗಾಲದ ಅನುಶ್ರೀಗೆ ಬಂಗಾರ

KannadaprabhaNewsNetwork |  
Published : Aug 06, 2026, 01:45 AM IST
ಚಿನ್ನದ ಪದಕ ಗೆದ್ದು ಹೆಮ್ಮೆ ತಂದ ಅನುಶ್ರೀ | Kannada Prabha

ಸಾರಾಂಶ

ಇತ್ತೀಚೆಗೆ ನಡೆದ ವರ್ಲ್ಡ್‌ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕುರುಬನಕಟ್ಟೆ ಗ್ರಾಮದ ಅನುಶ್ರೀ ಚಿನ್ನದ ಪದಕಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.

ನೇಪಾಳದಲ್ಲಿ ನಡೆದ ಪಂದ್ಯಾವಳಿಯಲ್ಲಿ ರಾಜ್ಯಕ್ಕೆ ಕೀರ್ತಿ

ಅಭಿನಂದನೆ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಇತ್ತೀಚೆಗೆ ನಡೆದ ವರ್ಲ್ಡ್‌ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕುರುಬನಕಟ್ಟೆ ಗ್ರಾಮದ ಅನುಶ್ರೀ ಚಿನ್ನದ ಪದಕಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.ಅನುಶ್ರೀ ಎಸ್‌ ಕುರುಬನ ಕಟ್ಟೆ ಅವರು ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ದಶರಥ್ ಶ್ಲಾಘಿಸಿದ್ದಾರೆ.ಈಗಾಗಲೇ ಅನುಶ್ರೀ ಸಾಧನೆಗೆ ಬಸವೇಶ್ವರ ರಾಷ್ಟ್ರೀಯ ಪುರಸ್ಕಾರ, ಬೆಂಗಳೂರಿನ ನಿಸರ್ಗ ಅಂಗವಿಕಲ ಚೇತನ ಟ್ರಸ್ಟ್ ನೀಡುವ ರಾಷ್ಟ್ರೀಯ ಪುರಸ್ಕಾರ, ಖಾಸಗಿ ಸಂಘ ಸಂಸ್ಧೆಗಳು ನೀಡುವ ನಾಲ್ವಡಿ ರಾಜಶ್ರೀ ಪುರಸ್ಕಾರ, ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಸೇರಿದಂತೆ ಅನೇಕ ಗೌರವ ಸಂದಿದ್ದು, ಕರಾಟೆ ಹಾಗೂ ಮಿಕ್ಸ್ ಬಾಕ್ಸಿಂಗ್‌ನಲ್ಲೂ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅನೇಕ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದು, ಇತ್ತೀಚೆಗೆ ನೇಪಾಳದಲ್ಲಿ ನಡೆದ ವರ್ಲ್ಡ್ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಅನುಶ್ರೀ ಚಿನ್ನದ ಪದಕ ಗಳಿಸಿರುವುದು ಹೆಮ್ಮೆ ತಂದಿದೆ ಎನ್ನುತ್ತಾರೆ ರಾಜ್ಯಾಧ್ಯಕ್ಷ ಚಂದ್ರು.--5ಕೆಜಿಎಲ್ 8

ನೇಪಾಳದಲ್ಲಿ ಚಿನ್ನದ ಪದಕ ಸ್ವೀಕರಿಸುತ್ತಿರುವ ಅನುಶ್ರೀ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಬ್ಬಾರೆಡ್ಡಿಗೆ ಸಿಗದ ಸಚಿವ ಸ್ಥಾನ: ಗುಡಿಬಂಡೆ ಬಂದ್ ಯಶಸ್ವಿ
ಪ್ರಮುಖ 4 ರೈಲ್ವೆ ಬೇಡಿಕೆ ಈಡೇರಿಸಲು ಕೇಂದ್ರಕ್ಕೆ ಸಂಸದೆ ಮನವಿ