ಸಮಿಪದ ಆಲೂರುಸಿದ್ದಾಪುರ ಸಾಯಿ ಎಜುಕೇಶನ್ ಟ್ರಸ್ಟ್ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಮಕ್ಕಳ ಸಂತೆಯನ್ನು ಹಮ್ಮಿಕೊಳ್ಳಲಾಯಿತು. ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆಯಲ್ಲಿ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಯಲ್ಲಿ ಬೆಳೆದ ವಿವಿಧ ತರಕಾರಿ, ಸೊಪ್ಪು, ಹಣ್ಣು ಹಂಪಲನ್ನು ತಂದು ಮಾರಾಟ ಮಾಡಿದರು.
ಶನಿವಾರಸಂತೆ ; ಸಮಿಪದ ಆಲೂರುಸಿದ್ದಾಪುರ ಸಾಯಿ ಎಜುಕೇಶನ್ ಟ್ರಸ್ಟ್ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಮಕ್ಕಳ ಸಂತೆಯನ್ನು ಹಮ್ಮಿಕೊಳ್ಳಲಾಯಿತು. ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆಯಲ್ಲಿ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಯಲ್ಲಿ ಬೆಳೆದ ವಿವಿಧ ತರಕಾರಿ, ಸೊಪ್ಪು, ಹಣ್ಣು ಹಂಪಲನ್ನು ತಂದು ಮಾರಾಟ ಮಾಡಿದರು.
ಮಕ್ಕಳ ಸಂತೆಯಲ್ಲಿ ಲಭ್ಯವಿದ್ದ ತರಕಾರಿ ಗೆಡ್ಡೆ ಗೆಣಸು, ಬೀನ್ಸ್, ನೂಲ್ಕೋಲ್, ಟೋಮೆಟೊ, ಕ್ಯಾಬಿಜ್, ಆಲೂಗೆಡ್ಡೆ, ಕೆಸದ ಗೆಡ್ಡೆ, ಸಿಹಿ ಗೆಣಸು, ಸೌತೆ ಕಾಯಿ, ಹಸಿ ಮೆಣಸು, ಶುಂಠಿ, ತೆಂಗಿನ ಕಾಯಿ, ನೆಲ್ಲಿಕಾಯಿ ಮತ್ತು ವಿವಿಧ ಸೊಪ್ಪು ಬಾಳೆ ಹಣ್ಣು ಮುಂತಾದ ಹಣ್ಣು ಹಂಪಲನ್ನು ತಂದು ಮಾರಾಟ ಮಾಡಿದರು. ಮಕ್ಕಳ ಸಂತೆಯಲ್ಲಿ ಪೋಷಕರು ಮತ್ತು ಸಾರ್ವಜನಿಕರು ಆಗಮಿಸಿ ತಮಗೆ ಬೇಕಾದ ವಸ್ತುಗಳನ್ನು ಖರಿದಿಸಿದರು ಮಕ್ಕಳು ಉತ್ಸಾಹದಿಂದ ವ್ಯಾಪಾರ ಮಾಡಿದರು.ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ಸರಿತಾ ಶಿಕ್ಷಕಿಯರಾದ ಜಯಂತಿ, ಪೂಜಾ, ರಕ್ಷಿತ, ಪ್ರಪುಲ್ಲ, ಮಲ್ಲಿಕಾ, ಶಿಲ್ಪ, ತನುಶ್ರೀ, ಕವನ, ಸ್ವಾತಿ, ಸ್ಮಿತಾ, ಸೋನಿಕ ಶಾಲಾ ಸಿಬ್ಬಂದಿ ಹಾಜರಿದ್ದರು.