ಕನ್ನಡಪ್ರಭ ವಾರ್ತೆ ವಿಜಯಪುರ
ವಿದ್ಯಾರ್ಥಿಗಳ ಪರದಾಟ
ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಸರಿಯಾದ ಬಸ್ ವ್ಯವಸ್ಥೆ ಸಿಗದೆ ಕೇಂದ್ರ ಬಸ್ ನಿಲ್ದಾಣದಲ್ಲಿ ಪರದಾಡಿದರು. ಪ್ರಯಾಣಿಕರು ತಮ್ಮ ತಮ್ಮ ಸ್ಥಳಗಳಿಗೆ ಹೋಗಲು ಬಸ್ ಬಾರದ ಕಾರಣ ಖಾಸಗಿ ವಾಹನಗಳ ಮೊರೆ ಹೋಗಿದ್ದರು. ನಿತ್ಯ ಬಸ್‌ಗಳಿಂದ ಕೂಡಿರುತ್ತಿದ್ದ ಬಸ್ ನಿಲ್ದಾಣ ಇಂದು ಖಾಸಗಿ ವಾಹನಗಳಿಂದ ತುಂಬಿತ್ತು. ಇನ್ನೊಂದೆಡೆ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾಲು ಸಾಲಾಗಿ ಬಸ್‌ಗಳು ನಿಂತಿದ್ದರೆ, ಬಸ್ ನಿಲ್ದಾಣವೆಲ್ಲ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು.ತಾಲೂಕುಗಳಿಗೆ ಸಂಚಾರ:
ಬೆಳಗ್ಗೆ ಕೆಲಕಾಲ ಸಂಚರಿಸದ ಬಸ್‌ಗಳು 10ಗಂಟೆ ಬಳಿಕ ವಿವಿಧ ತಾಲೂಕುಗಳಿಗೆ ಸಂಚರಿಸಲು ಆರಂಭಗೊಂಡವು. ಈ ವೇಳೆ ಬಸ್‌ಗಳು ರಸ್ತೆಯಲ್ಲಿ ಕಂಡಕೂಡಲೇ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ಹೋಗಲು ಅಣಿಯಾದರು. ಸಂಜೆಯ ವೇಳೆಗೆ ಎಲ್ಲ ಬಸ್ ಸಂಚಾರವು ಎಂದಿನಂತೆ ಸುಗಮವಾಗಿ ಆರಂಭವಾಗಿತ್ತು.ಕೋಟ್:ಜಿಲ್ಲಾ ಕೇಂದ್ರದಿಂದ ಬೇರೆ ಬೇರೆ ತಾಲೂಕುಗಳಿಗೆ 147 ಬಸ್‌ಗಳನ್ನು ಬಿಡಲಾಗಿದೆ. ನಗರದಲ್ಲಿ ಸಂಚರಿಸುವವರಿಗೆ ಅಷ್ಟೇನು ಸಮಸ್ಯೆಯಾಗಿಲ್ಲ. ಒಟ್ಟಿನಲ್ಲಿ ಪ್ರಯಾಣಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗಿದೆ. ಎಲ್ಲಿಯೂ ಯಾವುದೇ ರೀತಿಯ ಸಮಸ್ಯೆಗಳು ಅಥವಾ ಗಲಾಟೆಗಳು ಆಗದಂತೆ ನೋಡಿಕೊಳ್ಳಲಾಗಿದೆ. ಸಂಜೆಯ ವೇಳೆಗೆ ಎಲ್ಲ ಬಸ್‌ಗಳು ಆರಂಭವಾಗಿವೆ.ನಾರಾಯಣಪ್ಪ ಕುರುಬರ, ಕೆಎಸ್‌ಆರ್‌ಟಿಸಿ ಡಿಸಿ