ಚಿಕ್ಕಬಳ್ಳಾಪುರ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

KannadaprabhaNewsNetwork |  
Published : Mar 16, 2026, 12:15 AM IST
    ಸಿಕೆಬಿ-3 ಹೆಚ್.ಎನ್. ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ಧೀಕರಣಕ್ಕೆ ಆಗ್ರಹಿಸಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆ        ಸಿಕೆಬಿ-4  ಕೆ.ಎಸ್.ಆರ್.ಟಿ.ಸಿ  ಬಸ್ ನಿಲ್ದಾಣದಲ್ಲಿ ಬಸ್ ಗಳ ಸಂಚಾರ  ಸಾಮಾನ್ಯಾವಾಗಿತ್ತು ಬಂದ್ ನಿಂದಾಗಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು              | Kannada Prabha

ಸಾರಾಂಶ

ಬಿಬಿ ರಸ್ತೆ ಮತ್ತು ಎಂಜಿ ರಸ್ತೆಯಲ್ಲೂ ಸಹಾ ಇದೇ ರೀತಿ ಇದ್ದರೆ, ರಸ್ತೆ ಬದಿ ವ್ಯಾಪಾರಿಗಳ ಮಾತ್ರ ತಮ್ಮ ವ್ಯಾಪಾರ ಮಾಡುತ್ತಿದ್ದರು. ಕಾಂಗ್ರೆಸ್ ಬೆಂಬಲಿತ ವ್ಯಾಪಾರಿಗಳು ಯಾರು ಬಂದ್‌ಗೆ ಸಹ ಮತ ವ್ಯಕ್ತಪಡಿಸದೇ ತಮ್ಮ ಅಂಗಡಿ ಮುಂಗಟ್ಟು, ಹೋಟೆಲ್ ತೆರದು ವ್ಯಾಪಾರ ಮಾಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕೋಲಾರ, ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಸುತ್ತಿರುವ ಎಚ್.ಎನ್. ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ಧೀಕರಣಕ್ಕೆ ಆಗ್ರಹಿಸಿ ಭಗತ್ ಸಿಂಗ್ ಚಾರಿಟಬಲ್ ಆಧ್ಯಕ್ಷ ಸಂದೀಪ್ ಬಿ.ರೆಡ್ಡಿ ಮತ್ತು ವಿವಿಧ ಸಂಘಟನೆಗಳು ಕರೆ ನೀಡಿದ್ದ ಭಾನುವಾರದ ಚಿಕ್ಕಬಳ್ಳಾಪುರ ನಗರ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದ ಬಜಾರ್ ಮತ್ತು ಗಂಗಮ್ಮ ಗುಡಿ ರಸ್ತೆಯಲ್ಲಿ ಬೆರಳೆಣಿಕೆ ಅಂಗಡಿಗಳನ್ನು ತೆರೆದಿದ್ದು ಬಿಟ್ಟರೆ ಭಾಗಶಃ ಬಂದ್ ಮಾಡಿದ್ದರು. ಬಿಬಿ ರಸ್ತೆ ಮತ್ತು ಎಂಜಿ ರಸ್ತೆಯಲ್ಲೂ ಸಹಾ ಇದೇ ರೀತಿ ಇದ್ದರೆ, ರಸ್ತೆ ಬದಿ ವ್ಯಾಪಾರಿಗಳ ಮಾತ್ರ ತಮ್ಮ ವ್ಯಾಪಾರ ಮಾಡುತ್ತಿದ್ದರು. ಕಾಂಗ್ರೆಸ್ ಬೆಂಬಲಿತ ವ್ಯಾಪಾರಿಗಳು ಯಾರು ಬಂದ್‌ಗೆ ಸಹ ಮತ ವ್ಯಕ್ತಪಡಿಸದೇ ತಮ್ಮ ಅಂಗಡಿ ಮುಂಗಟ್ಟು, ಹೋಟೆಲ್ ತೆರದು ವ್ಯಾಪಾರ ಮಾಡಿದರು. ಕೆಎಸ್ಆರ್‌ಟಿಸಿ ಮತ್ತು ಖಾಸಗಿ ಬಸ್ ಆಟೋ ಸೇರಿದಂತೆ ಎಲ್ಲಾ ಸಾರಿಗೆ ವಾಹನಗಳ ಸಂಚಾರ ಸಾಮಾನ್ಯಾವಾಗಿತ್ತು. ಆದರೆ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಮತ್ತು ರಸ್ತೆಯಲ್ಲಿ ಜನರ ಸಂಚಾರವೂ ವಿರಳವಾಗಿತ್ತು.

ಪ್ರತಿಭಟನೆಯಲ್ಲಿ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ, ಈ ಭಾಗದ ಶಾಸಕ ಪ್ರದೀಪ್ ಈಶ್ವರ್ ಅವರು ನನ್ನ ಲೆವೆಲ್ ಏನಿದ್ರೂ ಮೋದಿ ಎಂದು ಹೇಳುತ್ತಾರೆ. ಆದ್ದರಿಂದ ಅವರ ಬಗ್ಗೆ ಮಾತನಾಡಲು ನನ್ನ ಲೆವೆಲ್ ಸಾಲದು. ನಾನೇನಿದ್ದರೂ ನಿಮ್ಮ ಲೆವಲ್ ಎಂದು ಕುಟುಕಿದರು.

ಸುಮಾರು ಎಂಟು ವರ್ಷಗಳ ಹಿಂದೆ ಡಾ.ಕೆ.ಸುಧಾಕರ್ ಕಾಂಗ್ರೆಸ್‌ನಲ್ಲಿ ಶಾಸಕರಾಗಿದ್ದ ಸಮಯದಲ್ಲಿ ಚಿಕ್ಕಬಳ್ಳಾಪುರಕ್ಕೆ ಅಂತರ್ಜಲ ವೃದ್ಧಿಗೆ ಎಂದು ಬೆಂಗಳೂರಿನ ಕೊಳಚೆ ಮತ್ತು ಚರಂಡಿ ನೀರನ್ನು ತಂದು ಇದೀಗ ಅದೇ ನೀರು ಅಂತರ್ಜಲ ಸೇರಿ ಎಲ್ಲಾ ರೈತರ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿರುವುದು ಸತ್ಯ. ಆದರೆ ಆ ನೀರನ್ನು ಜನರು ಕುಡಿಯುವುದರಿಂದ ಆರೋಗ್ಯದಲ್ಲಿ ಏರುಪೇರು ಆಗುತ್ತಿರುವುದು ಅದರಲ್ಲೂ ಕ್ಯಾನ್ಸರ್ ಮತ್ತು ಕಿಡ್ನಿ ಸಮಸ್ಯೆ ಎದುರಿಸುತ್ತಿರುವ ಕ್ಷೇತ್ರದ ಜನರಿಗೆ ಶುದ್ಧ ಕುಡಿಯುವ ನೀರನ್ನು ಕೊಡಲಾಗದ ಜನಪ್ರತಿನಿಧಿಗಳು ಮತ್ತು ಸರ್ಕಾರಗಳು ವಿಫಲವಾಗಿವೆ ಎಂದರು,ಇಂದು ಸ್ವಯಂಘೋಷಿತ ಬಂದ್ ಮಾಡುವ ಮುಖಾಂತರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯವನ್ನು ಸಂದೀಪ್ ರೆಡ್ಡಿ ರವರ ನೇತೃತ್ವದಲ್ಲಿ ನಡೆದಿದ್ದು ಉತ್ತಮ ಬೆಳವಣಿಗೆಯಾಗಿದೆ. ಮಾಜಿ ಸ್ವೀಕರ್ ರಮೇಶ್ ಕುಮಾರ್ ಅವರು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಕೊಡಿ ಎಂದು ಹೇಳಿದರು. ಆದರೆ ಅವರು ಈಗ ಪಶ್ವಾತಪ್ಪಪಡುತ್ತಿದ್ದಾರೆ. ರಾಸಯನಿಕ ಅಂಶ ಪತ್ತೆಯಾಗಿದೆ. ಕೆಲ ಸಂಸ್ಥೆಗಳು ನೀರು ಪರೀಕ್ಷೆ ಮಾಡಿದರು. ಈ ನೀರಿನಿಂದ ಕ್ಯಾನ್ಸರ್, ಕಿಡ್ನಿ ಇನ್ನೂ ಬೇರೆ ಬೇರೆ ರೀತಿಯ ಕಾಯಿಲೆಗಳು ಬರುತ್ತವೆ ಎಂದಿದ್ದಾರೆ ಎಂದರು.

ಸಂದೀಪ್ ರೆಡ್ಡಿ ಮಾತನಾಡಿ, ಶಾಶ್ವತ ಗ್ಯಾರಂಟಿಯಾಗಿ ಡಯಾಲಿಸಿಸ್ ಬಳುವಳಿಯಾಗಿ ಕೊಟ್ಟ ಈ ಕೆಟ್ಟ ಸರ್ಕಾರದ ವಿರುದ್ಧ ಧ್ವನಿಯೆತ್ತಿದ್ದೇವೆ. ಈ ಕ್ಷೇತ್ರದ ಶಾಸಕರು ಈ ವಿಷಯದ ಬಗ್ಗೆ ಮಾತನಾಡಲು ಪವರ್ ಬೇಕಂತೆ. ಆದರೆ ಜನಗಳು ಈಗ ಕೊಟ್ಟಿರುವ ಪವರ್ ಸಾಕಾಗಿಲ್ವಾ. ಅದೇ ಶಾಸಕರಾಗಿ ಯಲಹಂಕ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಎಸ್ ಆರ್ ವಿಶ್ವನಾಥ್ ರವರು ಕ್ಷೇತ್ರವನ್ನು ಅಭಿವೃದ್ಧಿಪಡಿಸಿರುವುದು ಸಾಕ್ಷಿಯಾಗಿ ಕಾಣುತ್ತಿದೆ ಎಂದು ಶಾಸಕ ಪ್ರದೀಪ್ ಈಶ್ವರ್‌ ಗೆ ತಿರುಗೇಟು ನೀಡಿದರು. ಈ ನೀರನ್ನು ಕುಡಿದ ಎಷ್ಟೋ ಜನ ಹೆಣ್ಣುಮಕ್ಕಳಿಗೆ ಗರ್ಭ ಧರಿಸಲು ಸಾಧ್ಯವಾಗುತ್ತಿಲ್ಲ. ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿರುವ ಇವರ ಕಷ್ಟ ನೋಡಲು ನಿಮಗೆ ಸಾಧ್ಯವಿಲ್ಲ ಎಂದು ಸಾಲು ಸಾಲು ಆರೋಪಗಳನ್ನು ಮಾಡುವ ಮೂಲಕ ಶಾಸಕರಿಗೆ ಈ ನಮ್ಮ ಕೂಗು ತಿಳಿಯಲಿ ಎಂದರು.

ನೆರೆಯ ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಮತ್ತು ನೆಲಮಂಗಲದ ಕಾಂಗ್ರೆಸ್‌ನ ದಲಿತ ಶಾಸಕ ನಮ್ಮ ಕ್ಷೇತ್ರಕ್ಕೆ ಈ ಕೊಳಚೆ ನೀರು ಬೇಡ ಕರ ಖಂಡಿತವಾಗಿ ಹೇಳಿರುವ ದಿಟ್ಟತನವನಾದರೂ ನೋಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿಯಲ್ಲಿ ನೀವು ಮಾತನಾಡಬೇಕಾಗಿತ್ತು. ಈ ಶಾಸಕರು ಕೇವಲ ವ್ಯೂವ್ಸ್ ಮತ್ತು ಲೈಕುಗಳಿಗೆ ಮಾತ್ರ ಸೀಮಿತವಾಗಿ ಮಾತನಾಡುವುದರಲ್ಲಿ ಕಾಲ ಕಳೆದಿದ್ದಾರೆ. ಆದ್ದರಿಂದ ಅವರಿಗೆ ಧಿಕ್ಕಾರ ಪ್ರದೀಪ್ ಈಶ್ವರ್ ಗೆ ಧಿಕ್ಕಾರ ಎಂಬ ಮಾತುಗಳು ಮತ್ತು ಆಕ್ರೋಶ ಭರಿತವಾಗಿ ಜನರು ಕೂಗುವ ಮುಖಾಂತರ ಶಾಸಕರಿಗೆ ಈಗಲಾದರೂ ನಮ್ಮ ಗೋಳು ಕೇಳಿಸಲಿ ಎಂಬಂತೆ ಆಕ್ರೋಶವಾಗಿ ಮಾತನಾಡಿದರು.

ಪ್ರತಿಭಟನೆಗೆ ಪರಿಸರವಾದಿ ಚೌಡಪ್ಪ, ಶಾಶ್ವತ ನೀರಾವರಿ ಹೋರಾಟ ಸಮಿತಿಯ ಸದಸ್ಯರು, ದಲಿತ ಸಂಘಟನೆ, ಕನ್ನಡ ಪರ ಹೋರಾಟಗಾರರು, ಹಸಿರು ಸೇನೆ ರೈತರು.ಹಾಗೂ ಕರ್ನಾಟಕ ರೈತ ಸಂಘ ಗಳು ಸದಸ್ಯರು, ಸಂದೀಪ್ ರೆಡ್ಡಿ ಅಭಿಮಾನಿಗಳು ಸಾಥ್ ನೀಡಿದರು.

ಸಿಕೆಬಿ-3 ಹೆಚ್.ಎನ್. ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ಧೀಕರಣಕ್ಕೆ ಆಗ್ರಹಿಸಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆ

ಸಿಕೆಬಿ-4 ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬಸ್ ಗಳ ಸಂಚಾರ ಸಾಮಾನ್ಯಾವಾಗಿತ್ತು ಬಂದ್ ನಿಂದಾಗಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು

ರೇ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಸಿ ವ್ಯಾಲಿ, ಎಚ್ಎನ್ ವ್ಯಾಲಿ ನೀರು ನೇರ ಬಳಕೆಗಲ್ಲ
ಲಾರಿಗೆ ಕಾರು ಡಿಕ್ಕಿ: ಮೂವರು ಆರ್‌ಎಸ್‌ಐಗಳ ಸಾವು