ಹುಬ್ಬಳ್ಳಿ:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಹು-ಧಾ ಮಹಾನಗರ ಪಾಲಿಕೆಯ 73ನೇ ವಾರ್ಡಿನ ಇಂಡಿಪಂಪ್, ಹಳೇ ಹುಬ್ಬಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.19ರ ನೂತನ ಕಟ್ಟಡ ನಿರ್ಮಾಣದ (₹2.50 ಕೋಟಿ ವೆಚ್ಚ) ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ದೊರೆಯುವಂತೆ ಮಾಡುವುದೇ ನನ್ನ ಪ್ರಮುಖ ಆದ್ಯತೆ. ಕ್ಷೇತ್ರದ ಶೈಕ್ಷಣಿಕ ಅಭಿವೃದ್ಧಿಗಾಗಿ ಈಗಾಗಲೇ ಕೋಟ್ಯಂತರ ರುಪಾಯಿ ಅನುದಾನ ಒದಗಿಸಲಾಗಿದೆ. ಬಿಡ್ನಾಳದ ಆರ್.ಕೆ. ಪಾಟೀಲ ಶಾಲೆ, ಎಸ್.ಎಂ. ಕೃಷ್ಣ ನಗರ, ಬೀರಬಂದ ಓಣಿ, ಘಂಟಿಕೇರಿ, ಬಿ.ಡಿ. ಕಾರ್ಮಿಕ ನಗರ, ಸದಾಶಿವ ನಗರ ಸೇರಿದಂತೆ ಅನೇಕ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ ಎಂದರು.ಬಿಇಒ ಹನುಮಂತ ಪಡ್ನೇಶಿ, ಪಾಲಿಕೆ ಸದಸ್ಯರಾದ ಶೀಲಾ ಕಾಟ್ಕರ್, ಸಂತೋಷ ಪೂಜಾರ, ಶ್ರೀನಿವಾಸ ಬೆಳದಡಿ, ರವಿ ಯಾವಗಲ್ಲ, ಶೇಕಣ್ಣ ಬತ್ತಿ, ಬಸವರಾಜ ಸಿರಿಗೆರೆ, ವಿಠೋಬಾ ಹಿಂಡಿ, ಗಣೇಶ ಕುಂಬಾರ, ರತ್ನವ್ವ ಪಾಟೀಲ, ನಾಗರತ್ನ ಕಾಟೆ, ಪ್ರೇಮಲತಾ ಗೊಣಗಿ, ಪ್ರತಿಮಾ ಶೆಟ್ಟಿ, ಕೀರ್ತಿ, ಆರತಿ ಕೋಟಿ, ಚಂದ್ರಶೇಖರ ಹೊಸಮನಿ ಸೇರಿ ಹಲವರಿದ್ದರು.