ಶಿಕ್ಷಕರ ದಿನಾಚರಣೆಗೆ ಶಾಸಕರು ಗೈರು: ಹಾಲಪ್ಪ ತೀವ್ರ ಖಂಡನೆ

KannadaprabhaNewsNetwork |  
Published : Sep 07, 2026, 01:30 AM IST
ಹಾಲಪ್ಪ ಮಾತನಾಡಿದರು | Kannada Prabha

ಸಾರಾಂಶ

ಕ್ಷೇತ್ರ ವ್ಯಾಪ್ತಿಯಲ್ಲಿ ಇದ್ದರೂ ಶಿಕ್ಷಕರ ದಿನಾಚರಣೆಗೆ ಗೈರಾಗಿರುವ ಶಾಸಕ ಗೋಪಾಲಕೃಷ್ಣ ಬೇಳೂರು ಶಿಕ್ಷಕ ಸಮೂಹದ ಬೇಷರತ್ತು ಕ್ಷಮೆಯಾಚನೆ ಮಾಡಬೇಕು ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಒತ್ತಾಯಿಸಿದ್ದಾರೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಕಾರ್ಯಕ್ರಮಕ್ಕೆ ಶಾಸಕರು ಬಾರದಿರುವುದನ್ನು ಶಿಕ್ಷಕ ಸಮೂಹ ಗಂಭೀರವಾಗಿ ಪರಿಗಣಿಸಬೇಕು ಎಂದರು.

ಸಾಗರ: ಕ್ಷೇತ್ರ ವ್ಯಾಪ್ತಿಯಲ್ಲಿ ಇದ್ದರೂ ಶಿಕ್ಷಕರ ದಿನಾಚರಣೆಗೆ ಗೈರಾಗಿರುವ ಶಾಸಕ ಗೋಪಾಲಕೃಷ್ಣ ಬೇಳೂರು ಶಿಕ್ಷಕ ಸಮೂಹದ ಬೇಷರತ್ತು ಕ್ಷಮೆಯಾಚನೆ ಮಾಡಬೇಕು ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಒತ್ತಾಯಿಸಿದ್ದಾರೆ.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಕಾರ್ಯಕ್ರಮಕ್ಕೆ ಶಾಸಕರು ಬಾರದಿರುವುದನ್ನು ಶಿಕ್ಷಕ ಸಮೂಹ ಗಂಭೀರವಾಗಿ ಪರಿಗಣಿಸಬೇಕು ಎಂದರು.ಕೇಂದ್ರ ಸರ್ಕಾರದ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ೮೨ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿದ್ದಾರೆ. ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿ ಶಿವಕುಮಾರ್ ಕೂಡ್ಲಿಗೆಯಲ್ಲಿ ಶಿಕ್ಷಕ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳ ಜೊತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಸಂಸದರು, ಶಾಸಕರು ಶಿಕ್ಷಕ ದಿನಾಚರಣೆ ಉದ್ಘಾಟಿಸಿದ್ದಾರೆ. ಆದರೆ ಸಾಗರ-ಹೊಸನಗರ ಎರಡೂ ಕಡೆಗಳಲ್ಲಿ ಶಿಕ್ಷಕ ದಿನಾಚರಣೆ ಉದ್ಘಾಟಿಸುವ ಜೊತೆಗೆ ನಿವೃತ್ತ, ಸಾಧಕ ಶಿಕ್ಷಕರನ್ನು ಸನ್ಮಾನಿಸಬೇಕಾಗಿದ್ದ ಶಾಸಕರು ಕಸ್ತೂರಿ ರಂಗನ್ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಸಾಗರದಲ್ಲಿ ಶಿಕ್ಷಕ ದಿನಾಚರಣೆ ಕಾರ್ಯಕ್ರಮ ಸಂಜೆ ೪.-೩೦ರವರೆಗೂ ನಡೆದಿದ್ದು, ಮಧ್ಯಾಹ್ನ ೨ ಗಂಟೆಗೆ ಸಾಗರಕ್ಕೆ ಬಂದರೂ ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಶಿಕ್ಷಕ ಸಮೂಹಕ್ಕೆ ಅವಮಾನ ಮಾಡಿದ್ದಾರೆ ಎಂದು ದೂರಿದರು.ಸತ್ಪçಜೆಗಳನ್ನು ರೂಪಿಸುವ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಗೌರವ ಕೊಡುವುದು ಜನಪ್ರತಿನಿಧಿಯಾದವರ ಕರ್ತವ್ಯ. ನಾನಾಗಲೀ, ಕಾಗೋಡು ತಿಮ್ಮಪ್ಪನವರಾಗಲಿ ಶಾಸಕರಾಗಿದ್ದ ಸಂದರ್ಭದಲ್ಲಿ ಸಾಗರ ಮತ್ತು ಹೊಸನಗರ ಎರಡೂ ಕಡೆಗಳಲ್ಲಿ ಶಿಕ್ಷಕ ದಿನಾಚರಣೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುತ್ತಾ ಬಂದಿದ್ದೆವು. ಇದು ಕ್ಷೇತ್ರದ ಶಾಸಕನಾದವನ ಆದ್ಯತೆ ಕರ್ತವ್ಯ ಸಹ ಆಗಿರುತ್ತದೆ. ನಾನು ಶಿಕ್ಷಕ ದಿನಾಚರಣೆ ಹಿನ್ನೆಲೆಯಲ್ಲಿ ನನಗೆ ಕಲಿಸಿದ ಗುರುಗಳು ಹರಿಹರದಲ್ಲಿದ್ದಾರೆ. ಅವರನ್ನು ಸನ್ಮಾನಿಸಿದ್ದೇನೆ. ಬೆಂಗಳೂರಿನಲ್ಲಿ ಧರ್ಮಪ್ಪ ಎಂಬ ಶಿಕ್ಷಕರು ಇದ್ದಾರೆ. ಅವರ ಮನೆ ಹುಡುಕಿಕೊಂಡು ಹೋಗಿ ಗೌರವ ಸಲ್ಲಿಸಿ ಬರುವ ಸಂಪ್ರದಾಯ ಉಳಿಸಿಕೊಂಡಿದ್ದೇನೆ. ಆದರೆ ಕ್ಷೇತ್ರದಲ್ಲಿಯೇ ಇದ್ದು ಶಿಕ್ಷಕ ದಿನಾಚರಣೆಯಲ್ಲಿ ಪಾಲ್ಗೊಳ್ಳದ ಶಾಸಕರ ನಡೆಯನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದರು.ಗಣೇಶ್ ಪ್ರಸಾದ್, ದೇವೇಂದ್ರಪ್ಪ, ಶ್ರೀನಿವಾಸ್ ಮೇಸ್ತಿ, ವಿ.,ಮಹೇಶ್, ಸತೀಶ್ ಕೆ. ಸಂತೋಷ್ ಶೇಟ್, ರವೀಂದ್ರ ಬಿ.ಟಿ.,ಪರಶುರಾಮ್, ಅರುಣ ಕುಗ್ವೆ ಇನ್ನಿತರರು ಹಾಜರಿದ್ದರು.೬ಕೆ.ಎಸ್.ಎ.ಜಿ.೨ಸುದ್ದಿಗೋಷ್ಠಿಯಲ್ಲಿ ಹಾಲಪ್ಪ ಮಾತನಾಡಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿನಾಚರಣೆಗೆ ಗೈರಾದ ಶಾಸಕರು ಶಿಕ್ಷಕರಲ್ಲಿ ಕ್ಷಮೆಯಾಚನೆಗೆ ಆಗ್ರಹ: ರತ್ನಾಕರ
ಗ್ರಾಮೀಣ ಮಕ್ಕಳಿಗೂ ಇಂಗ್ಲಿಷ್ ಶಿಕ್ಷಣ ಸಿಗಲಿ: ಸುನಿಲ್‌ಗೌಡ