ಸಿದ್ದಾಪುರ: ತಾಲೂಕಿನ ಕಾನಗೋಡ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ಚಂದ್ರಗುತ್ತಿ ಮುಖ್ಯ ರಸ್ತೆಯಿಂದ ಮಾರಿಗುಡಿ ಮಾರ್ಗದ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಭೀಮಣ್ಣ ನಾಯ್ಕ ಭೂಮಿಪೂಜೆ ನೆರವೇರಿಸಿದರು.ಕಾನಗೋಡ ಗ್ರಾಪಂ ವ್ಯಾಪ್ತಿಯ ಚಂದ್ರಗುತ್ತಿ ಮುಖ್ಯ ರಸ್ತೆಯಿಂದ ಹಳ್ಳಿಬೈಲ್, ಮಾರಿಗುಡಿ ಮಾರ್ಗವಾಗಿ ಬಾಸಿಂಗ್ ಕಟ್ಟೆಯವರೆಗಿನ ರಸ್ತೆ ಕಳೆದ ಅನೇಕ ವರ್ಷಗಳಿಂದ ದುರಸ್ತಿ ಕಾಣದೇ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಭಟ್ಕಳ: ವಾಹನಾ ಚಾಲನಾ ಪರವಾನಗಿ ಹೊಂದಿರದೇ, ಹೆಲ್ಮೇಟ್ ಧರಿಸದೇ, ಮದ್ಯ ಸೇವನೆ ಮಾಡಿ ಬೈಕ್ ಚಲಾಯಿಸಿದ್ದು ಅಲ್ಲದೇ ಪೊಲೀಸರ ಜತೆ ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂದಿಸಿದಂತೆ ಬುಧವಾರ ವಿಚಾರಣೆ ನಡೆಸಿದ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ ಬೈಕ್ ಸವಾರನಿಗೆ ₹೨೨೫೦೦ ದಂಡ ವಿಧಿಸಿ ಆದೇಶಿಸಿದೆ.ಕಳೆದ ಡಿ. ೩೧ರಂದು ಭಟ್ಕಳ ನಗರ ಠಾಣಾ ಪಿಎಸ್‌ಐ ನವೀನ್ ನಾಯ್ಕ ಅವರು ನಗರದ ಪಿಎಲ್‌ಡಿ ಬ್ಯಾಂಕ್ ಬಳಿ ವಾಹನಾ ತಪಾಸಣಾ ನಡೆಸುತ್ತಿರುವಾಗ ಜಾಲಿ ನಿವಾಸಿ ಬೋರಾ ಸಿಂಗ್ ಅವರ ಬೈಕ್‌ನ್ನು ತಡೆಹಿಡಿದು ತಪಾಸಣೆ ಮಾಡುತ್ತಿರುವ ಸಂದರ್ಭದಲ್ಲಿ ಆತನ ಬಳಿ ವಾಹನ ಚಾಲನಾ ಪರವಾನಗಿ ಇರಲಿಲ್ಲ. ಹೆಲ್ಮೆಟ್ ಕೂಡ ಧರಿಸಿರಲಿಲ್ಲ ಹಾಗೂ ಮದ್ಯ ಸೇವನೆ ಮಾಡಿ ದ್ವಿಚಕ್ರ ವಾಹನ ಚಲಾವಣೆ ಮಾಡಿರುವುದು ಕೂಡಾ ಖಾತ್ರಿಯಾಗಿತ್ತು.ಈ ಬಗ್ಗೆ ದಂಡ ತುಂಬುವಂತೆ ಪಿಎಸ್‌ಐ ನವೀನ ಅವರು ಬೋರಾಸಿಂಗ್ ಬಳಿ ಹೇಳಿದಾಗ ಅವರು ಮದ್ಯ ಸೇವನೆಯ ಅಮಲಿನಲ್ಲಿ ಪೊಲೀಸರ ಜತೆ ಅನುಚಿತವಾಗಿ ವರ್ತಿಸಿದ್ದರು. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅಪರಾಧಿಗೆ ದಂಡ ವಿಧಿಸಿ ತೀರ್ಪು ನೀಡಿದೆ.