ವಿವಿಧ ನಾಲೆಗಳಿಗೆ ನೀರು ಹರಿಸಲು ಚಾಲನೆ

KannadaprabhaNewsNetwork | Published : Jul 13, 2024 1:30 AM

ಸಾರಾಂಶ

ರೈತರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಿ ಅವರ ಜಮೀನಿನ ಕೊನೆಯ ಭಾಗದವರೆಗೆ ನೀರು ಸರಾಗವಾಗಿ ಹರಿಯುವಂತೆ ಗಮನ ಹರಿಸಬೇಕೆಂದು

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ರೈತರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಿ ಅವರ ಜಮೀನಿನ ಕೊನೆಯ ಭಾಗದವರೆಗೆ ನೀರು ಸರಾಗವಾಗಿ ಹರಿಯುವಂತೆ ಗಮನ ಹರಿಸಬೇಕೆಂದು ಶಾಸಕ ಡಿ. ರವಿಶಂಕರ್ ಹೇಳಿದರು.

ಸಾಲಿಗ್ರಾಮ ತಾಲೂಕಿನ ಬಳ್ಳೂರು ಅಣೆಕಟ್ಟೆಯಿಂದ ಚಾಮರಾಜ, ರಾಮಸಮುದ್ರ ಎಡ ಮತ್ತು ಬಲದಂಡೆ ಹಾಗೂ ಮಿರ್ಲೆ ಶ್ರೇಣಿಯ ನಾಲೆಗಳಿಗೆ ನೀರು ಹರಿಯ ಬಿಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಮೊದಲ ಹಂತದಲ್ಲಿ ಕೆರೆ ಮತ್ತು ಕಟ್ಟೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಮಾಡಲಾಗುವುದು, ಆನಂತರ ರೈತರು ಬೆಳೆಯುವ ಬೆಳೆಗಳಿಗೆ ನೀರಿನ ಸೌಲಭ್ಯ ಒದಗಿಸಲಿದ್ದು, ಇದನ್ನು ಅರಿತು ಸಹಕಾರ ನೀಡಬೇಕು ಎಂದರು.

ಮೈದುಂಬಿ ಹರಿಯುತ್ತಿರುವ ಕಾವೇರಿ ನದಿಗೆ ಬಳ್ಳೂರು ಅಣೆಕಟ್ಟೆಯ ಬಳಿ ಆಷಾಡ ಶುಕ್ರವಾರವಾದ ವಿಶೇಷ ಪೂಜೆ ಸಲ್ಲಿಸಿದ್ದು, ರೈತರ ಬಾಳು ಹಸನಾಗಿ ಅನ್ನದಾತನಿಗೆ ಶುಭವಾಗಲೆಂದು ದೇವರಲ್ಲಿ ಪ್ರಾರ್ಥಿಸಿ ಬಾಗಿನ ಅರ್ಪಿಸಲಾಗಿದೆ ಎಂದರು.

ಹವಾಮಾನ ಇಲಾಖೆ ವಾಡಿಕೆ ಮಳೆಗಿಂತ ಈ ಬಾರಿ ಹೆಚ್ಚು ಮಳೆ ಬೀಳುತ್ತದೆ ಎಂದು ಹೇಳಿದ್ದು, ರೈತರು ಯಾವುದೇ ಆತಂಕಕ್ಕೆ ಒಳಗಾಗದೆ ಕೃಷಿ ಚಟುವಟಿಕೆ ಹಾಗೂ ಬಿತ್ತನೆ ಕಾರ್ಯ ಆರಂಭಿಸಬಹುದಾಗಿದೆ. ಮುಂಗಾರು ಹಂಗಾಮಿನ ಕೃಷಿಗೆ ಯಾವುದೇ ರೀತಿಯಲ್ಲಿ ರೈತರಿಗೆ ತೊಂದರೆಯಾಗದಂತೆ ಅವರ ಅಗತ್ಯತೆಯ ಕೃಷಿ ಚಟುವಟಿಕೆ ಸಂಬಂಧಸಿದ ಪರಿಕರಗಳು, ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರಗಳನ್ನು ಸಕಾಲದಲ್ಲಿ ರೈತರಿಗೆ ಪೂರೈಸಲು ಈಗಾಗಲೇ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಲಕ್ಷೀಪುರ ಗ್ರಾಪಂ ಅಧ್ಯಕ್ಷೆ ಮಣಿಲಾ ಮಂಜುನಾಥ್, ಸದಸ್ಯರಾದ ಹುಚ್ಚೇಗೌಡ, ನಾಗೇಂದ್ರ, ನಿತಿನ್, ರಂಗೇಗೌಡ, ಪಾಪಣ್ಣ, ತಾಪಂ ಮಾಜಿ ಅಧ್ಯಕ್ಷ ಎಚ್.ಟಿ. ಮಂಜಪ್ಪ, ಮಾಜಿ ಸದಸ್ಯ ಸಣ್ಣಪ್ಪ, ವಿ.ಎಸ್.ಎಸ್.ಬಿ.ಎನ್. ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ದೇವರಾಜು, ಪುರಸಭಾ ಮಾಜಿ ಅಧ್ಯಕ್ಷರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಎಸ್.ಸಿ. ಘಟಕದ ಘಟಕದ ಅಧ್ಯಕ್ಷ ಕಂಠಿಕುಮಾರ್, ನಗರಾಧ್ಯಕ್ಷ ಪ್ರಭಾಕರ್, ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಮಹಮ್ಮದ್, ಶೌಕತ್, ಮುಖಂಡರಾದ ಪ್ರಭಾಕರ್, ಹರೀಶ್, ನರೇಂದ್ರ, ರಘು, ಹೇಮಂತ್ ಕುಮಾರ್, ಬಲರಾಮೇಗೌಡ, ಗುಣಪಾಲ್ ಜೈನ್, ತೋಟಪ್ಪನಾಯಕ, ತಿಪ್ಪೂರು ಮಹದೇವನಾಯಕ, ಶ್ರೀನಿವಾಸ್, ಎಇಇ ಕುಶುಕುಮಾರ್, ಎಇ

ಆಯಾಜ್ ಪಾಷ, ಎಂಜಿನಿಯರ್ ಗಳಾದ ಕಿರಣ್, ಉದಯ್, ಈಶ್ವರ್ ಇದ್ದರು.

Share this article