ಆರ್‌ಸಿಬಿ ಅಭಿಮಾನಿಗಳ ಜತೆ ಕುಣಿದು ಕುಪ್ಪಳಿಸಿದ ಶಾಸಕ

KannadaprabhaNewsNetwork |  
Published : Jun 02, 2026, 01:30 AM IST
ಶಿರ್ಷಿಕೆ-೧ಕೆ.ಎಂ.ಎಲ್.ಆರ್.೨-ಮಾಲೂರಿನ ಹೋಂಡ ಸ್ಟೇಡಿಯಂನಲ್ಲಿ ಯುವ ಕಾಂಗ್ರೆಸ್‌ ನೇತೃತ್ವದಲ್ಲಿ ಐಪಿಎಲ್‌ ಅಂತಿಮ ಪಂದ್ಯಾವಳಿಯ ವಿಕ್ಷಣೆಗಾಗಿ ಆಳವಡಿಸಲಾಗಿದ್ದ ಬೃಹತ್‌ ಎಲೀಡಿ ಪರದೆಯನ್ನು ಶಾಸಕ ನಂಜೇಗೌಡ ಚಾಲನೆ ನೀಡಿ ಮಾತನಾಡಿದರು. | Kannada Prabha

ಸಾರಾಂಶ

ಮಳೆಯ ನಡುವೆ ಸಹ್ರಸಾರು ಸಂಖ್ಯೆಯಲ್ಲಿ ಆರ್ಸಿಬಿ ಅಭಿಮಾನಿಗಳು ಜಮಾಯಿಸಿ ಪಂದ್ಯಾವಳಿಯ ಕ್ಷಣಗಳನ್ನು ಅನುಭವಿಸಿದರು.

ಕನ್ನಡಪ್ರಭ ವಾರ್ತೆ ಮಾಲೂರು

ಐಪಿಎಲ್‌ ಫೈನಲ್ಸ್‌ನಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದ ಹಿನ್ನೆಲೆ ಶಾಸಕ ನಂಜೇಗೌಡ ಸಹ ಅಭಿಮಾನಿಗಳ ಜತೆ ವಿಜೇಯೋತ್ಸವದಲ್ಲಿ ಭಾಗವಹಿಸಿ ಕುಣಿದು ಕುಪ್ಪಳಿಸಿದರು.

ರಾಜ್ಯ ಯುವ ಕಾಂಗ್ರಸ್‌ ಪ್ರಧಾನ ಕಾರ್ಯದರ್ಶಿ ಸುನೀಲ್‌ ನಂಜೇಗೌಡ ನೇತ್ರತ್ವದಲ್ಲಿ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೋಂಡ ಕ್ರೀಡಾಂಗಣದಲ್ಲಿ ಐಪಿಎಲ್‌ ಫೈನಲ್‌ ಪಂದ್ಯ ವಿಕ್ಷಣೆಗಾಗಿ ಬೃಹತ್‌ ಎಲ್‌ ಇಡಿ ಪರದೆಯ ವ್ಯವಸ್ಥೆ ಮಾಡಲಾಗಿತ್ತು.ಮಳೆಯ ನಡುವೆ ಸಹ್ರಸಾರು ಸಂಖ್ಯೆಯಲ್ಲಿ ಆರ್ಸಿಬಿ ಅಭಿಮಾನಿಗಳು ಜಮಾಯಿಸಿ ಪಂದ್ಯಾವಳಿಯ ಕ್ಷಣಗಳನ್ನು ಅನುಭವಿಸಿದರು. ಪಂದ್ಯಕ್ಕೂ ಮುಂಚೆ ಸುರಿದ ಬಾರಿ ಬಿರುಗಾಳಿ ಮಳೆಗೆ ಆಳವಡಿಸಲಾಗಿದ್ದ ಬೃಹತ್‌ ಪರದೆ ನೆಲಕ್ಕುರಳಿ ಹಾಳಾಗಿ ಹೋಗಿತ್ತು. ಆದರೆ ಮಳೆ ನಿಂತ ಮೇಲೆ ಮತ್ತೇ ಬೃಹತ್‌ ಪರದೆ ತರಿಸಿ ಆಳವಡಿಸಲಾಯಿತು.

ಪಂದ್ಯದ ಪ್ರಾರಂಭದಿಂದ ಜನರ ಮಧ್ಯೆ ಕುಳಿತು ನೋಡಿದ ಶಾಸಕ ನಂಜೇಗೌಡ ಅವರು ಪಂದ್ಯದ ವಿರಾಮ ವೇಳೆಯಲ್ಲಿ ಮಾತನಾಡಿ, ಸಂಘಟಿತ ಹೋರಾಟದಿಂದ ನಮ್ಮ ಆರ್‌ಸಿಬಿ ಎರಡನೇ ಬಾರಿ ಚಾಂಪಿಯನ್‌ ಆಗಿದೆ. ಕಳೆದ ವರ್ಷ ಸಹ ಯುವ ಕಾಂಗ್ರೆಸಿಗರು ಮಾಲೂರಿನ ಜನತೆಗಾಗಿ ಇದೇ ರೀತಿ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಿದ್ದರು. ಈ ದಿನ ಇಲ್ಲಿಗೆ ಬಂದು ಸೇರಿರುವ ಅಭಿಮಾನಿಗಳನ್ನು ಕಂಡರೆ ಸಂತೋಷ ವಾಗುತ್ತಿದೆ. ಈ ವ್ಯವಸ್ಥೆ ಮಾಡಿದ್ದಕ್ಕೂ ಸಾರ್ಥಕವಾಗಿದೆ. ಈ ಸಂಬಂಧ ಯುವ ಕಾಂಗ್ರೆಸ್‌ ಮುಖಂಡರುಗಳನ್ನು ಅಭಿನಂದಿಸುತ್ತೇನೆ ಎಂದರು.

ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸುನೀಲ್‌ ನಂಜೇಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಕೃಷ್ಣಪ್ಪ, ರಾಮಮೂರ್ತಿ, ಪಿಎಲ್ಡಿ ಬ್ಯಾಂಕ್‌ ಅಧ್ಯಕ್ಷ ಶ್ರೀನಿವಾಸ್‌, ಕೋಚಿಮುಲ್‌ ನಿರ್ದೇಶಕ ಶ್ರೀನಿವಾಸ್‌, ಓಬಿಸಿ ರಾಜ್ಯ ಉಪಾಧ್ಯಕ್ಷ ಮುರಳಿ, ಕಸಾಪ ಅಧ್ಯಕ್ಷ ಎಂ.ವಿ.ಹನುಮಂತಯ್ಯ, ಹಿರಿಯ ಕ್ರೀಡಾಪಟು ಗ್ರೇಶನ್‌ ಆಲ್ಮೇಡಾ, ಹನುಮಂತ ರೆಡ್ಡಿ, ಹರೀಶ್‌ ನಂಜೇಗೌಡ, ಎಂ.ವಿ.ಚೇತನ್‌, ಜಾಕಿ, ಶಬ್ಬೀರ್‌, ತನ್ವೀರ್‌, ವಸಂತ್‌ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಟ್ಟುಹಬ್ಬಗಳು ಸಾರ್ವಜನಿಕರಿಂದ ಆಚರಣೆಗೊಂಡಾಗ ಸಾರ್ಥಕತೆ
ಸರ್ಕಾರಿ ಶಾಲೆಯಲ್ಲೂ ಎಲ್‌ಕೆಜಿ ಆರಂಭ: ಮಂಜುಳಾ