ಕನ್ನಡಪ್ರಭ ವಾರ್ತೆ ಪಾಂಡವಪುರ
ಶ್ರೀಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆ ಸಾರ್ವಜನಿಕರಿಗೆ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಪಟ್ಟಣದ ಐದು ದೀಪದ ವೃತ್ತದಲ್ಲಿ ಹಮ್ಮಿಕೊಂಡಿದ್ದ ಮ್ಯಾರಥಾನ್‌ಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ ನೀಡಿದರು.
ಭಾರತ್ ಕ್ಯಾನ್ಸ್‌ರ್ ಆಸ್ಪತ್ರೆ ಹಾಗೂ ಎಸ್‌ಬಿಐ ಸಂಸ್ಥೆಗಳ ಸಹಕಾರದೊಂದಿಗೆ ಏರ್ಪಡಿಸಿದ್ದ ಮ್ಯಾರಥಾನ್‌ನಲ್ಲಿ ನೂರಾರು ಸಂಖ್ಯೆಯಲ್ಲಿ ಯುವಕ-ಯುವತಿಯರು, ಮಹಿಳೆಯರು, ಜನಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದರು.14, 18 ಹಾಗೂ 30 ವರ್ಷಗಳ ಪುರುಷ ಮತ್ತು ಮಹಿಳಾ ಮೂರು ವಿಭಾಗಗಳ 10 ಕಿ.ಮೀ ಹಾಗೂ 6 ಕಿ.ಮೀವರೆಗೆ ಓಟದ ಸ್ಪರ್ಧೆಗಳು ನಡೆದವು. ಓಟದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಸೋದರ ರಾಘವ ಪ್ರಕಾಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್, ಸಬ್ ಇನ್ಸ್‌ಪೆಕ್ಟರ್ ಉಮೇಶ್ ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಅಧಿಕಾರಿಗಳು ಸಹ ಭಾಗವಹಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಿದರು. ಸ್ಪರ್ಧೆಯ ಎಲ್ಲಾ ವಿಭಾಗದ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡಲಾಯಿತು.
18 ವರ್ಷ ಒಳಪಟ್ಟ ಪುರುಷರ ವಿಭಾಗ: ಕಪಥನ್ ಸಿಂಗ್ (ಪ್ರಥಮ), ಆನಂದ್‌ಸಾಕಲ್ (ದ್ವಿತೀಯ), ಚಂದನ್‌ಶೇಖರ್ (ತೃತೀಯ).,
30 ವರ್ಷ ಒಳಪಟ್ಟ ಪುರುಷ: ರಾಜೇಶ್‌ಕುಮಾರ್ (ಪ್ರಥಮ), ವೈಭವ್ ಮಾರುತಿ ಪಾಟೀಲ್ (ದ್ವಿತೀಯ), ಅಬ್‌ತಮ್ (ತೃತೀಯ).
30 ವರ್ಷ ಮೇಲ್ಪಟ್ಟ ಪುರುಷರು: ಗೌತಮ್ ಎಸ್.(ಪ್ರಥಮ), ಸಂದೀಪ್‌ಕುಮಾರ್ ಎಂ.ವೈ(ತೃತೀಯ),