ಹಳಿಯಾಳ: ಪದವೀಧರರ ಸಮಸ್ಯೆಗಳ ಬಗ್ಗೆ ವಿಧಾನಪರಿಷತ್ನಲ್ಲಿ ಪರಿಣಾಮಕಾರಿಯಾಗಿ ಗಮನ ಸೆಳೆಯಲು ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರನ್ನು ಬೆಂಬಲಿಸಬೇಕು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ. ದೇಶಪಾಡೆ ಅವರು ಮನವಿ ಮಾಡಿದರು.
ತಾಲೂಕಿನ ಹವಗಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಕೆಎಲ್ಎಸ್ ಸಂಸ್ಥೆಯ ಬಿಸಿಎ ಕಾಲೇಜಿಗೆ ಶಾಸಕರು ಭೇಟಿ ನೀಡಿ ಪ್ರಾಚಾರ್ಯರು ಹಾಗೂ ಸಿಬ್ಬಂದಿ ಜತೆ ಮಾತುಕತೆ ನಡೆಸಿ ಮತಯಾಚಿಸಿದರು. ಪುರಸಭಾ ಮಾಜಿ ಅಧ್ಯಕ್ಷ ಅಜರುದ್ದೀನ್ ಬಸರಿಕಟ್ಟಿ, ಯುವ ಮುಖಂಡ ರವಿ ತೋರಣಗಟ್ಟಿ ಇತರರು ಇದ್ದರು.ಅಪಘಾತ: ಓರ್ವ ಸಾವು, 5 ಮಂದಿಗೆ ಗಾಯ
ದಾಂಡೇಲಿ: ತಾಲೂಕಿನ ಕೆರವಾಡ ಗ್ರಾಮದ ಶ್ರೇಯಸ್ ಪೇಪರ್ ಮಿಲ್ ಹತ್ತಿರ ದಾಂಡೇಲಿ- ಹಳಿಯಾಳ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ ಭೀಕರ ಅಪಘಾತ ಸಂಭವಿಸಿ, ಓರ್ವ ಸಾವಿಗೀಡಾಗಿದ್ದು, ಐದು ಮಂದಿಗೆ ಗಾಯವಾದ ಘಟನೆ ನಡೆದಿದೆ.ಹುಬ್ಬಳ್ಳಿಯ ಗೋಪನಕೊಪ್ಪದ ಸ್ವಾಗತ ಕಾಲನಿ ನಿವಾಸಿ ಮೌಲಾಲಿ ತಂದೆ ಹಜರೇಸಾಬ ತೆಗ್ಗಿನಮನೆ(23) ಎಂಬಾತ ದಾಂಡೇಲಿ ಕಡೆಯಿಂದ ಹಳಿಯಾಳ ಕಡೆಗೆ ಕಾರನ್ನು ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದು, ಎದುರಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ಗೆ ಡಿಕ್ಕಿ ಹೊಡೆದಿದ್ದಾನೆ.ಡಿಕ್ಕಿ ಹೊಡೆದರೂ ನಿಲ್ಲಿಸದೆ ಸುಮಾರು 1 ಕಿಮೀವರೆಗೆ ಮೋಟಾರ್ ಸೈಕಲ್ ಸಮೇತ ಕಾರನ್ನು ಎಳೆದೊಯ್ದು, ನಂತರ ರಸ್ತೆಯ ಪಕ್ಕದ ಅರಣ್ಯ ಪ್ರದೇಶದ ನೀರಿನ ಚೇಂಬರಿಗೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿದೆ.
ಈ ಬಗ್ಗೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಶಿವಾನಂದ ಅಂಬಿಗೇರ ಅವರ ಮಾರ್ಗದರ್ಶನದಲ್ಲಿ ಶಿವಾನಂದ ನಾವದಗಿ ತನಿಖೆ ಕೈಗೊಂಡಿದ್ದಾರೆ.