ಸಾಗರ: ಅತಿವೃಷ್ಟಿಯಿಂದ ಮನೆಕಳೆದುಕೊಂಡ ಕುಟುಂಬಗಳಿಗೆ ನಗರಸಭೆ ವತಿಯಿಂದ ಪರಿಹಾರಧನದ ಚೆಕ್ ಮತ್ತು ವೈಯಕ್ತಿಕ ಧನಸಹಾಯವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ, ಮಕ್ಕಳು ಸಮಾಜವನ್ನು ಎದುರಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ಆಕಾಶ್‌ನಂತಹ ಮಕ್ಕಳ ಸಾವು ಸಮಾಜವನ್ನು ತಲೆತಗ್ಗಿಸುವಂತೆ ಮಾಡುತ್ತದೆ. ಸೊಂಟ ನೋವು ಎಂದು ಆತ್ಮಹತ್ಯೆ ಮಾಡಿಕೊಂಡಿರುವುದು ಬೇಸರ ತರಿಸಿದೆ. ಎಂತಹ ಆರೋಗ್ಯ ಸಮಸ್ಯೆ ಇದ್ದರೂ ಚಿಕಿತ್ಸೆ ನೀಡಿ ಗುಣಪಡಿಸಲು ಸಾಧ್ಯವಿತ್ತು. ಚಿಕ್ಕವಯಸ್ಸಿನಲ್ಲಿಯೆ ಶಾಲೆಯ ಬಿಡುವಿನ ಅವಧಿಯಲ್ಲಿ ದುಡಿದು ಕುಟುಂಬಕ್ಕೆ ಆಸರೆಯಾಗುತ್ತಿದ್ದ ಆಕಾಶ್ ಸಾವು ಇಡೀ ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕುಟುಂಬವನ್ನು ಸಾಕುತ್ತೇವೆ ಎಂದು ಭರವಸೆ ನೀಡಿದ್ದ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೋಷಕರು ಮಕ್ಕಳ ಬಗ್ಗೆ ಹೆಚ್ಚು ಗಮನ ಇರಿಸಿ. ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ. ನಿಮ್ಮ ಸಮಸ್ಯೆ ಏನಾದರೂ ಇದ್ದರೆ ನಮ್ಮ ಗಮನಕ್ಕೆ ತನ್ನಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲಸೆ ಚಂದ್ರಪ್ಪ, ಅನಿತಾ ಕುಮಾರಿ, ಸುರೇಶ್ ಬಾಬು, ಮಂಡಗಳಲೆ ಗಣಪತಿ, ಸೈಯದ್ ಜಾಕೀರ್, ರವಿಕುಮಾರ್, ತಾರಾಮೂರ್ತಿ, ಪೌರಾಯುಕ್ತ ಎಚ್.ಕೆ.ನಾಗಪ್ಪ ಇನ್ನಿತರರು ಹಾಜರಿದ್ದರು.