ಲಕ್ಷ್ಮೇಶ್ವರ: ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಸುಧಾರಣೆಗೆ ವಿಶೇಷ ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ ಕೆಲ ರಸ್ತೆಗಳ ನಿರ್ಮಾಣ ಕಾಮಗಾರಿಗಳು ನಡೆದಿವೆ. ಕ್ಷೇತ್ರದಲ್ಲಿ ಅನೇಕ ಕಡೆ ಹದಗೆಟ್ಟಿರುವ ರಸ್ತೆಗಳನ್ನು ಸರ್ವಋತು ರಸ್ತೆಗಳನ್ನಾಗಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ವಿಶೇಷ ಅನುದಾನವನ್ನು ಕ್ಷೇತ್ರಕ್ಕೆ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ತಿಳಿಸಿದರು.
ಗೊಜನೂರು ಹತ್ತಿರದ ಹಳ್ಳ ಮಳೆಗಾಲದಲ್ಲಿ ತುಂಬಿ ಹರಿಯುವುದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಹಳ್ಳದ ನೀರು ಇಳಿಯುವವರೆಗೂ ಬಸ್ ಸಂಚಾರ ಕೂಡ ಬಂದ್ ಆಗಿ ಪ್ರಯಾಣಿಕರಿಗೆ ತೊಂದರೆ ಆಗುತ್ತಿತ್ತು. ಈ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ ಮಾಡಿದ್ದರು. ಈ ಹಿನ್ನೆಲೆ ಹಳ್ಳಕ್ಕೆ ಕಿರು ಸೇತುವೆ ನಿರ್ಮಿಸಲಾಗುತ್ತಿದೆ ಎಂದರು.
ರಸ್ತೆಗಳ ನಿರ್ಮಾಣದಿಂದ ಜನತೆಗೆ ಸಾಕಷ್ಟು ಅನುಕೂಲ ಆಗಲಿದೆ. ಅನೇಕ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದು, ಬೇಸಿಗೆ ಸಮಯದಲ್ಲಿ ಅನೇಕ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಕಾಳೆ, ಉಪಾಧ್ಯಕ್ಷ ಮಹಾಂತಗೌಡ ಪಾಟೀಲ, ಶಿರಹಟ್ಟಿ ಬಿಜಿಪಿ ಮಂಡಲದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ರಮೇಶ ದನದಮನಿ, ಚಂದ್ರಗೌಡ ಪಾಟೀಲ, ನಿಂಗನಗೌಡ ಪಾಟೀಲ, ಮಂಜುನಾಥ ಕಣವಿ, ವೀರಭದ್ರಪ್ಪ ವಡಕಣ್ಣವರ, ಶಂಕ್ರಪ್ಪ ಸವಣೂರ, ಶೇಖಣ್ಣ ಸೊರಟೂರ, ಸಚಿನ ದನದಮನಿ, ಪ್ರವೀಣ ಮಾಡಳ್ಳಿ, ಪರಮೇಶ ಹತ್ತಾಳ, ಗಂಗಾಧರ ಮೆಣಸಿನಕಾಯಿ, ಮುತ್ತಣ್ಣ ಚೋಟಗಲ್ಲ, ಪ್ರವೀಣ ಬೋಮಲೆ, ಶಕ್ತಿ ಕತ್ತಿ, ಭೀಮಣ್ಣ ಯಂಗಾಡಿ, ಥಾವರಪ್ಪ ಲಮಾಣಿ, ಸಂತೋಷ ಜಾವೂರ, ಗುತ್ತಿಗೆದಾರ ಪ್ರಸಾದ ಶೆಟ್ಟರ ಸೇರಿದಂತೆ ಮತ್ತಿತರರು ಇದ್ದರು.