ಗುಂಡ್ಲುಪೇಟೆ: ತಾಲೂಕಿನ ಬೇಗೂರು ಗ್ರಾಮದ ಸಿದ್ದಪ್ಪಾಜಿ ದೇವಸ್ಥಾನಕ್ಕೆ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಅವರು ವೈಯಕ್ತಿಕವಾಗಿ ₹1 ಲಕ್ಷ ಹಣವನ್ನು ಗೆಜ್ಜಗಾರರ ಸಮಾಜದ ಮುಖಂಡರಿಗೆ ಹಸ್ತಾಂತರಿಸಿದರು. ಗ್ರಾಮದ ಸಿದ್ದಪ್ಪಾಜಿ ದೇವಸ್ಥಾನಕ್ಕೆ ಆಗಮಿಸಿ ಗೆಜ್ಜಗಾರರ ಸಮಾಜದ ಸೇಟು, ಮಹೇಶ್, ಸಿದ್ದರಾಜು, ಸುಂದ್ರಗೆ ಶಾಸಕರು ವೈಯಕ್ತಿಕವಾಗಿ ದೇಣಿಗೆಯನ್ನು ಹಸ್ತಾಂತರಿಸಿ ಬೇಗ ದೇವಸ್ಥಾನ ಕಟ್ಟುವಂತೆ ತಿಳಿಸಿದರು. ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್. ನಂಜುಂಡ ಪ್ರಸಾದ್, ಬೇಗೂರು ಫ್ಯಾಕ್ಸ್ ಉಪಾಧ್ಯಕ್ಷ ಸದಾನಂದ, ಗೌಡಿಕೆ ಹೋಟೆಲ್ ಸೋಮಣ್ಣ, ಯಜಮಾನರಾದ ಶಿವಮೂರ್ತಿ, ನಾರಾಯಣ, ಗ್ರಾಪಂ ಮಾಜಿ ಸದಸ್ಯರಾದ ಬಿ.ಎನ್. ಪುನೀತ್, ಬಿ.ಆರ್. ಮಹದೇವ ಸ್ವಾಮಿ, ಕೆ. ಮಹದೇವ ಶೆಟ್ಟಿ, ಫ್ಯಾಕ್ಸ್ ನಿರ್ದೇಶಕ ಚಂದ್ರು, ಅರಸಶೆಟ್ಟಿ ಸೇರಿದಂತೆ ಹಲವರಿದ್ದರು.