ನಮ್ಮ ಕ್ಲಿನಿಕ್ ಸದುಪಯೋಗ ಪಡೆಯಲು ಶಾಸಕ ಜಿ.ಎಚ್.ಶ್ರೀನಿವಾಸ್ ಕರೆ

KannadaprabhaNewsNetwork | Published : May 7, 2025 12:50 AM
Follow Us

ಸಾರಾಂಶ

ತರೀಕೆರೆ, ತಾಲೂಕಿನ ಸಾರ್ವಜನಿಕರು ಆರೋಗ್ಯಕಾಪಾಡಿಕೊಳ್ಳಲು ನಮ್ಮ ಕ್ಲಿನಿಕ್ ಸದುಪಯೋಗ ಪಡೆಯಬೇಕೆಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದ್ದಾರೆ.

ತರೀಕೆರೆಯಲ್ಲಿ ನಮ್ಮ ಕ್ಲಿನಿಕ್ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ತಾಲೂಕಿನ ಸಾರ್ವಜನಿಕರು ಆರೋಗ್ಯಕಾಪಾಡಿಕೊಳ್ಳಲು ನಮ್ಮ ಕ್ಲಿನಿಕ್ ಸದುಪಯೋಗ ಪಡೆಯಬೇಕೆಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದ್ದಾರೆ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತರೀಕೆರೆ ತಾಲೂಕಿನಿಂದ ಪಟ್ಟಣದ ಎಂ.ಜಿ.ಹಾಲ್ ಬಳಿ ನಗರ ಆಯುಷ್ಮಾನ್ ಆರೋಗ್ಯ ಮಂದಿರ ನಮ್ಮ ಕ್ಲಿನಿಕ್ ನ್ನು ಉದ್ಘಾಟಿಸಿ ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ

ಮಾತನಾಡಿದರು. ತರೀಕೆರೆ ಪಟ್ಟಣದಲ್ಲಿ ತೆರೆದ 2ನೇ ನಮ್ಮ ಕ್ಲಿನಿಕ್ ಇದು. ನಮ್ಮ ಕ್ಲಿನಿಕ್ ನಲ್ಲಿ ವೈದ್ಯರು, ಸಿಬ್ಬಂದಿ ಹಾಗೂ ಔಷಧಿಗಳ ಸೌಲಭ್ಯ ದೊರೆಯುತ್ತದೆ. ಇಲ್ಲಿ ವಿಶೇಷವಾಗಿ ಯೋಗ ವಿಭಾಗವನ್ನು ತೆರೆಯಲಾಗಿದೆ. ಪಟ್ಟಣದಲ್ಲಿ ₹28 ಕೋಟಿಗಳಲ್ಲಿ ತಾಯಿ ಮಗು ಆಸ್ಪತ್ರೆ ಕಟ್ಟಡ ನಿರ್ಮಾಣವಾಗುತ್ತಿದ್ದು ಶೇ.90 ರಷ್ಟು ನಿರ್ಮಾಣ ಕಾರ್ಯ ಮುಗಿಯುತ್ತಾ ಬಂದಿದೆ. 100 ಬೆಡ್ ನ ತಾಯಿ ಮಗು ಆಸ್ಪತ್ರೆ ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ ಎಂದು ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆಗೆ ಸಿ.ಎಸ್.ಆರ್. ನಿಧಿಯಿಂದ ₹1.48 ಕೋಟಿ ವೆಚ್ಚದ ಅತ್ಯಾಧುನಿಕ ಸಲಕರಣೆಗಳು ಸರಬರಾಜು ಆಗಿದೆ ಎಂದು ಹೇಳಿದರು.

ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ.ಮಂಜುನಾಥ್ ಮಾತನಾಡಿ ಸಣ್ಣಪುಟ್ಟ ಕಾಯಿಲೆಗಳಿಗೆ ಜನರು ಸಾರ್ವಜನಿಕ ಆಸ್ಪತ್ರೆಗೆ ತೆರಳಬೇಕಿದ್ದು ಇದೀಗ ಆ ಸಮಸ್ಯೆಗಳಿಗೆ ನಮ್ಮ ಕ್ಲಿನಿಕ್ ನಲ್ಲಿ ಸೇವೆ ಲಭಿಸಲಿದೆ. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್ ಮಾತನಾಡಿ ತರೀಕೆರೆ ಪಟ್ಟಣದ ಎಂ.ಜಿ.ರಸ್ತೆಯಲ್ಲಿ ನಮ್ಮ ಕ್ಲಿನಿಕ್ ನಡೆಯುತ್ತಿದ್ದು, ಇದೀಗ ನಗರದ ಎ.ಜಿ.ಹಾಲ್ ಬಳಿ ಈ ಭಾಗದ ಸಾರ್ವಜನಿಕರಿಗೆ ಉಪಯೋಗವಾಗಲು ನಮ್ಮ ಕ್ಲಿನಿಕ್ ತೆರೆಯಲಾಗಿದೆ. ನಮ್ಮ ಕ್ಲಿನಿಕ್.ನಲ್ಲಿ ವೈದ್ಯರು, ಸಿಬ್ಬಂದಿ ನೇಮಕವಾಗಿದ್ದು, ತಾಯಿ ಮಕ್ಕಳ ಆರೈಕೆ, ಸಾಂಕ್ರಮಿಕ, ಅಸಾಂಕ್ರಾಮಿಕ ರೋಗಗಳ ಪತ್ತೆ ಮತ್ತು ಚಿಕಿತ್ಸೆ, ಕಣ್ಣು ಪರೀಕ್ಷೆ ಹೀಗೆ 12 ವಿವಿಧ ಬಗೆಯ ಆರೋಗ್ಯ ಪ್ಯಾಕೇಜ್ ಸೇವೆಗಳು ದೊರೆಯಲಿದೆ ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದರು.

ಪುರಸಭೆ ಉಪಾಧ್ಯಕ್ಷೆ ಪಾರ್ವತಮ್ಮ, ಪುರಸಭೆ ಸದಸ್ಯರಾದ ರಿಹಾನ ಪರ್ವಿನ್, ಶಮೀನ ಬಾನು, ಕುಮಾರಪ್ಪ, ಮುಖಂಡರಾದ ಫಸಲ್ ಅಹಮದ್, ತಹಸೀಲ್ದಾರ್ ವಿಶ್ವಜೀತ್ ಮೇಹತಾ ಮತ್ತಿತರರು ಭಾಗವಹಿಸಿದ್ದರು.

6ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ನಮ್ಮ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದರು. ಪುರಸಭೆ ಉಪಾಧ್ಯಕ್ಷೆ ಪಾರ್ವತಮ್ಮ, ತಹಸೀಲ್ದಾರ್ ವಿಶ್ವಜೀತ್ ಮೇಹತಾ, ತಾ.ಆರೋಗ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್ ಮತ್ತಿತರರು ಇದ್ದರು.