ಇಸ್ರೇಲ್‌ನಲ್ಲಿರುವ ಕಾಪುವಿನ ರೋಹಣಿಗೆ ಧೈರ್ಯ ತುಂಬಿದ ಶಾಸಕ ಗುರ್ಮೆ

KannadaprabhaNewsNetwork |  
Published : Oct 13, 2023, 12:16 AM IST
ರೋಹಿಣಿ ಅವರಿಗೆ ವಿಡಿಯೋ ಕಾಲ್ ಮೂಲಕ ದೈರ್ಯ ಹೇಳಿದ ಗುರ್ಮೆ | Kannada Prabha

ಸಾರಾಂಶ

ಯುದ್ಧಪೀಡಿತ ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿರುವ ಕಾಪು ವಿಧಾನಸಭಾ ಕ್ಷೇತ್ರದ ಪಡುಬಿದ್ರಿಯ ನಡ್ಸಾಲು ಗ್ರಾಮದ ನಿವಾಸಿ ರೋಹಿಣಿ ಅವರಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ವಿಡಿಯೋ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದರು.

ಕನ್ನಡಪ್ರಭ ವಾರ್ತೆ ಕಾಪು ಯುದ್ಧಪೀಡಿತ ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿರುವ ಕಾಪು ವಿಧಾನಸಭಾ ಕ್ಷೇತ್ರದ ಪಡುಬಿದ್ರಿಯ ನಡ್ಸಾಲು ಗ್ರಾಮದ ನಿವಾಸಿ ರೋಹಿಣಿ ಅವರಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ವಿಡಿಯೋ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದರು. ನಿಮ್ಮೊಂದಿಗೆ ನಾವಿದ್ದೇವೆ, ಧೈರ್ಯದಿಂದಿರಿ, ಯಾವುದೇ ಸಮಸ್ಯೆಯಾದರೆ ನಮಗೆ ಕರೆ ಮಾಡಿ, ನಿಮ್ಮ ಮನೆಯವರಿಗೂ ಹೇಳಿ, ಎರಡೂ ದೇಶಗಳ ಮಧ್ಯೆ ಸಂಧಾನವಾಗಿ ಶಾಂತಿ ನೆಲೆಸಲಿ ಎಂದು ನಾವೆಲ್ಲ ಹಾರೈಸುತಿದ್ದೇವೆ ಎಂದು ಶಾಸಕರು ರೋಹಿಣಿ ಅವರಿಗೆ ಹೇಳಿದರು. ಕೇಂದ್ರ ಸರ್ಕಾರ ಕೂಡ ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಆಪರೇಶನ್ ಆರಂಭಿಸಿದೆ, ಅಗತ್ಯವಿದ್ದರೆ ಏರ್‌ ಲಿಫ್ಟ್‌ ಮಾಡುವುದಾಗಿಯೂ ಹೇಳಿದೆ. ಆದ್ದರಿಂದ ಯಾವುದೇ ಆತಂಕ ಬೇಡ ಎಂದರು. ನಮ್ಮ ಬಗ್ಗೆ ಊರಲ್ಲೆಲ್ಲಾ ಗಾಬರಿಯಾಗಿದ್ದಾರೆ, ಆದರೆ ತಾವೆಲ್ಲರೂ ಸುರಕ್ಷಿತವಾಗಿದ್ದೇವೆ, ನಮ್ಮ ಮನೆಯವರಿಗೆ, ಸಂಬಂಧಿಕರಿಗೆ ಮನವರಿಕೆ ಮಾಡಿ ಎಂದು ರೋಹಿಣಿ ಅವರು ಶಾಸಕರಿಗೆ ಹೇಳಿದರು.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’