ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಶ್ರೀರಂಗ ಚಿತ್ರಮಂದಿರ ಆವರಣದಲ್ಲಿ ಡಾ:ರಾಜ್ ರಂಗ ಕಲಾ ವೇದಿಕೆಯಿಂದ 23 ದಿನಗಳ ಕಾಲ ನಡೆಯುವ ನಾಟಕೋತ್ಸವಕ್ಕೆ ಶಾಸಕ ಎಚ್.ಟಿ ಮಂಜು ಚಾಲನೆ ನೀಡಿದರು.ನಂತರ ಮಾತನಾಡಿ, ಮೊಬೈಲ್, ಟಿವಿ ಹಾವಳಿಯಿಂದಾಗಿ ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳಾದ ಪೌರಾಣಿಕ ನಾಟಕಗಳು ಮರೆಯಾಗುತ್ತಿದೆ. ಇದರ ನಡುವೆ ರಾಜ್ಯದಲ್ಲೆ ಅತಿ ಹೆಚ್ಚು ಪೌರಾಣಿಕ ನಾಟಕ ಏರ್ಪಡಿಸುವ ಕಲಾವಿದರು ಹೊಂದಿರುವ ತಾಲೂಕು ಎಂದು ನಮ್ಮ ಕೆ.ಆರ್.ಪೇಟೆ ಎಂಬುದು ಹೆಗ್ಗಳಿಕೆಗೆ ಸಾಕ್ಷಿಯಾಗಿದೆ ಎಂದರು.
ಪೌರಾಣಿಕ ಕಲಾವಿದರಿಗೆ ಕಲಾಮಂದಿರ ಬೇಕು ಎಂದು ಪ್ರತಿ ವೇದಿಕೆಗಳಲ್ಲಿ ಮನವಿ ಸಲ್ಲಿಸಿದ್ದಾರೆ. ಆ ಮನವಿಗೆ ಸ್ಪಂದನೆಯಾಗಿ ಈಗಾಗಲೇ ಕಸಾಪ ಭವನಕ್ಕೆ ಪಟ್ಟಣದ ಹೃದಯ ಭಾಗದಲ್ಲಿ ನಾಲ್ಕು ಗುಂಟೆ ವಿಸ್ತೀರ್ಣದಲ್ಲಿ ನಿವೇಶನ ಗುರುತಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದರು.ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಇತೀಚೆಗೆ ಕೆಲಜನರಲ್ಲಿ ನೈತಿಕತೆ, ಸಾಮಾಜಿಕ ಮೌಲ್ಯ ಪತನವಾಗುತ್ತಿವೆ. ಯುವ ಪೀಳಿಗೆ ಪೌರಾಣಿಕ ನಾಟಕ ನೋಡುವ ಮೂಲಕ ತಮ್ಮ ಸಂಸ್ಕೃತಿ ಉಳಿಸಿ ಬೆಳಸುವ ಮೂಲಕ ನಾಟಕ ಮುಖಾಂತರ ಮೌಲ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ನಾಟಕೋತ್ಸವದಲ್ಲಿ ಕಿಕ್ಕೇರಿ ಜೈ ಭುವನೇಶ್ವರಿ ಯುವ ಕಲಾವಿದರ ಸಂಘದಿಂದ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ನೋಡಲು ಬಂದಿದ್ದ ಕಲಾ ಪೋಷಕರು ಮೊದಲ ದಿನವೇ ನಾಟಕೋತ್ಸವಕ್ಕೆ ಮೆರಗು ತುಂಬಿದರು.ಈ ವೇಳೆ ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಬಲದೇವ್, ನಿರ್ದೇಶಕ ದಿಲೀಪ್ ಕುಮಾರ್, ತಾಪಂ ಮಾಜಿ ಸದಸ್ಯ ಸಣ್ಣನಿಂಗೇಗೌಡ, ಗ್ರಾಪಂ ಸದಸ್ಯ ಶೀಳನೆರೆ ಸಿದ್ದೇಶ್, ಹಿರಿಯ ಪತ್ರಕರ್ತ ಬಳ್ಳೆಕೆರೆ ಮಂಜುನಾಥ್, ಯುವ ಮುಖಂಡ ಶ್ಯಾಮ್ ಪ್ರಸಾದ್, ಹಿರಿಯ ರಂಗ ಭೂಮಿ ಕಲಾವಿದ ಚಟ್ಟೆನಹಳ್ಳಿ ನಾಗರಾಜ್, ಡಾ ರಾಜ್ ರಂಗ ಕಲಾ ಸಂಘದ ಅಧ್ಯಕ್ಷ ರಾಗಿಮುದ್ದನಹಳ್ಳಿ ದೇವರಾಜು, ಗೌರವಾಧ್ಯಕ್ಷ ತಂದ್ರೆಕೊಪ್ಪಲು ಮಂಜುನಾಥ್, ಉಪಾಧ್ಯಕ್ಷ ವಿಠಲಾಪುರ ಸಣ್ಣತಮ್ಮೆಗೌಡ, ಪ್ರಧಾನ ಕಾರ್ಯದರ್ಶಿ ಕೂಡಲಕುಪ್ಪೆ ದೇವರಾಜು, ಖಜಾಂಚಿ ಮರಟಿಕೊಪ್ಪಲು ಮಂಜುನಾಥ್, ಸಹಾ ಕಾರ್ಯದರ್ಶಿ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಪತ್ರಕರ್ತ ಹೊಸಹೊಳಲು ರಘು, ಸಂಘದ ಸದಸ್ಯರಾದ ಬಂಡಿಹೊಳೆ ಕಾಯಿ ಮಂಜೇಗೌಡ, ಹೊಸಹೊಳಲು ಯೋಗೇಶ್ ಎನ್.ಗೌಡ, ರವಿ ಕುಮಾರ್, ರುದ್ರೇಶ್, ನಾಟನಹಳ್ಳಿ ಜಗದೀಶ್, ಡ್ರಾಮಾ ಮಾಸ್ಟರ್ ಅನಿಲ್ ಕುಮಾರ್, ಕತ್ತರಘಟ್ಟ ಮಹೇಶ್, ಸಂಪತ್ ಸೇರಿದಂತೆ ಕಲಾ ಪೋಷಕರಿದ್ದರು.