ರೈತರ ಹೋರಾಟಕ್ಕೆ ಶಾಸಕ ಎಚ್‌.ಟಿ.ಮಂಜು ಬೆಂಬಲ

KannadaprabhaNewsNetwork |  
Published : Aug 19, 2026, 01:30 AM IST
18ಕೆಎಂಎನ್‌ಡಿ-7ಕೆ.ಆರ್‌.ಪೇಟೆಯ ಹೇಮಾವತಿ ಎಡ ಮತ್ತು ಬಲದಂಡೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಶಾಸಕ ಹೆಚ್ಗ್.ಟಿ.ಮಂಜು ಪಾಲ್ಗೊಂಡಿದ್ದರು.  | Kannada Prabha

ಸಾರಾಂಶ

ಹೇಮಾವತಿ ನೀರಿನ ಬಗ್ಗೆ ನಾನು ರಾಜ್ಯ ಜಲಸಂಪನ್ಮೂಲ ಸಚಿವರು, ಹಾಸನ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ನೀರಾವರಿ ಇಲಾಖೆಯ ಎಂಜಿನಿಯರುಗಳ ಜೊತೆ ನಿತ್ಯ ಸಂಪರ್ಕದಲ್ಲಿದ್ದು ಹೇಮಾವತಿ ಜಲಾಶಯದಿಂದ ನಮ್ಮ ಕಾಲುವೆಗಳಿಗೆ ಅಗತ್ಯ ನೀರು ಹರಿಸಲು ಅಗತ್ಯ ಒತ್ತಡ ಹಾಕಿದ್ದೇನೆ.

ಕನ್ನಡಪ್ರಭ ವಾರ್ತೆ ಕೆ.ಆರ್‌.ಪೇಟೆ

ಹೇಮಾವತಿ ನೀರಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡ ಶಾಸಕ ಎಚ್‌.ಟಿ.ಮಂಜು ಅವರು ರೈತರ ನೀರಿನ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿ ಅವರು, ನಾನು ರೈತ ಸಂಘದ ಕಾರ್ಯಕರ್ತನಾಗುವ ಮೂಲಕವೇ ರಾಜಕೀಯ ಕ್ಷೇತ್ರ ಪ್ರವೇಶಿಸಿದವನು. ಹೇಮಾವತಿ ನೀರಿನ ಬಗ್ಗೆ ನಾನು ರಾಜ್ಯ ಜಲಸಂಪನ್ಮೂಲ ಸಚಿವರು, ಹಾಸನ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ನೀರಾವರಿ ಇಲಾಖೆಯ ಎಂಜಿನಿಯರುಗಳ ಜೊತೆ ನಿತ್ಯ ಸಂಪರ್ಕದಲ್ಲಿದ್ದು ಹೇಮಾವತಿ ಜಲಾಶಯದಿಂದ ನಮ್ಮ ಕಾಲುವೆಗಳಿಗೆ ಅಗತ್ಯ ನೀರು ಹರಿಸಲು ಅಗತ್ಯ ಒತ್ತಡ ಹಾಕಿದ್ದೇನೆ. ಹೇಮಾವತಿ ಜಲಾಶಯದಿಂದ 1000 ಕ್ಯೂಸೆಕ್ಸ್ ನೀರನ್ನು ಕಾಲುವೆಗೆ ಹರಿಸಲಾಗಿದ್ದು ಅದನ್ನು 1200 ಕ್ಯೂಸೆಕ್ಸ್ ಹೆಚ್ಚಿಸುವಂತೆ ಸೂಚಿಸಿದ್ದೇನೆ. ಎಂಜಿನಿಯರುಗಳು ಸಮರೋಪಾದಿಯಲ್ಲಿ ಕೆಲಸ ಮಾಡಿ ಹೇಮೆಯ ನೀರಿನಿಂದ ನಮ್ಮ ತಾಲೂಕಿನ ಎಲ್ಲಾ ಕೆರೆಗಳನ್ನು ಸಂಪೂರ್ಣವಾಗಿ ತುಂಬಿಸಬೇಕು. ಇಲ್ಲದಿದ್ದರೆ ನಾನು ರೈತಸಂಘದ ಜೊತೆಗೂಡಿ ಬೀದಿ ಹೋರಾಟಕ್ಕಿಳುವುದಾಗಿ ಘೋಷಿಸಿದರು.

ತಾಲೂಕಿನ ಮಂದಗೆರೆ ಮತ್ತು ಎಡದಂಡೆ ನಾಲೆಗಳಿಗೆ ಈಗಾಗಲೇ ನೀರು ಹರಿಸಿದ್ದು ಕಾಲುವೆಗಳ ಹೂಳೆತ್ತುವ ಸಲುವಾಗಿ ತಾತ್ಕಾಲಿಕವಾಗಿ ನೀರು ನಿಲ್ಲಿಸಲಾಗಿದೆ. ಸದರಿ ನಾಲೆಗಳ ಹೂಳೆತ್ತಿ ನೀರು ಹರಿಸಲು ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಕಳೆದ ಫೆ.7 ರಲ್ಲೇ ಹೇಮಾವತಿ ಜಲಾನಯನ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಸೂಚಿಸಿದ್ದರೂ ಸ್ಥಳೀಯ ಎಂಜಿನಿಯರುಗಳ ನಿರ್ಲಕ್ಷ್ಯದಿಂದ ರೈತರಿಗೆ ಸಮಸ್ಯೆಯಾಗಿದೆ. ಕರ್ತವ್ಯ ಲೋಪ ಮಾಡಿದ ಎಂಜಿನಿಯರುಗಳ ವಿರುದ್ಧ ಕ್ರಮ ಜರುಗಿಸಬೇಕಲ್ಲದೆ ಹಗಲು ರಾತ್ರಿ ಕೆಲಸ ಮಾಡಿ ಬರುವ ಶನಿವಾರದೊಳಗೆ ನಾಲೆಯಲ್ಲಿನ ಹೂಳೆತ್ತುವ ಕಾಮಗಾರಿ ಪೂರ್ಣಗೊಳಿಸಿ ನದಿ ಅಣೆಕಟ್ಟೆ ನಾಲೆಗಳಿಗೆ ನೀರು ಹರಿಸುವಂತೆ ಅಧೀಕ್ಷಕ ಎಂಜಿನಿಯರ್‌ ಗಂಗಾಧರ್‌ ಅವರಿಗೆ ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಕವೀರರಾಗದೆ ಕೌಶಲ್ಯವಂತರಾಗಿ ಬೆಳವಣಿಗೆ ಸಾಧಿಸಿ: ಪ್ರೊ.ಕೆ.ಶಿವಚಿತ್ತಪ್ಪ
ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಆಗ್ರಹ