- ಧಾರ್ಮಿಕ, ಸಾಮಾಜಿಕ, ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ । ಶಾಸಕರ ಗೃಹ ಕಚೇರಿಯಲ್ಲಿ ಸಾರ್ವಜನಿಕರ ಭೇಟಿ
ಕನ್ನಡಪ್ರಭ ವಾರ್ತೆ ಹರಿಹರ
ಶಾಸಕ ಬಿ.ಪಿ. ಹರೀಶ್ ಜನ್ಮದಿನ ಪ್ರಯುಕ್ತ ಮೇ 12ರಂದು ಹರಿಹರ ಹಾಗೂ ಮಲೇಬೆನ್ನೂರು ಭಾಗಗಳಲ್ಲಿ ವಿವಿಧ ಧಾರ್ಮಿಕ, ಸಾಮಾಜಿಕ ಮತ್ತು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್ ತಿಳಿಸಿದ್ದಾರೆ.ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.15 ಗಂಟೆವರೆಗೆ ವಿವಿಧ ಸ್ಥಳಗಳಲ್ಲಿ ವಿಶೇಷ ಪೂಜೆ, ಅಭಿವೃದ್ಧಿ ಕಾಮಗಾರಿಗಳ ಚಾಲನೆ, ಸಸಿ ನೆಡುವುದು, ಗೋಶಾಲೆಗೆ ಮೇವು ಸಮರ್ಪಣೆ, ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ.
11.15ಕ್ಕೆ ಪೊಲೀಸ್ ಠಾಣೆ ಸಮೀಪದ ಮಾರುಕಟ್ಟೆ ಪ್ರದೇಶದ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಜೊತೆಗೆ ಹಳೇ ಪಿ.ಬಿ. ರಸ್ತೆಯಿಂದ ರಚನಾ ಕ್ಲಬ್ ಕಡೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೂ ಚಾಲನೆ ದೊರೆಯಲಿದೆ. 11.30ಕ್ಕೆ ಕುಂಬಾರ ಓಣಿಯ ವಿರಕ್ತ ಮಠದಲ್ಲಿ “ಪ್ರಾಣಿಗಳಿಗೆ ನೀರಿನ ಬಾನಿ” ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಹರಳಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಜರುಗಲಿದೆ.
ಮಧ್ಯಾಹ್ನ 1.30ಕ್ಕೆ ಮಲೇಬೆನ್ನೂರಿನ ಧ್ವಜ ಕಂಬದ ವೃತ್ತದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಂದ ವಿಶೇಷ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ 2024-25ನೇ ಸಾಲಿನ ಮಳೆಹಾನಿ ಯೋಜನೆಯಡಿ ನಿರ್ಮಿಸಲಾದ ಮಲೇಬೆನ್ನೂರು- ಹರಿಹರ ಮುಖ್ಯ ರಸ್ತೆಯಿಂದ ನಿಟ್ಟೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನೂತನ ರಸ್ತೆಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. 2.45ಕ್ಕೆ ಹರಿಹರದ ಶಾಸಕರ ಗೃಹ ಕಚೇರಿಯಲ್ಲಿ ಸಾರ್ವಜನಿಕರ ಭೇಟಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸಂಜೆ 7.15ಕ್ಕೆ ಹರಿಹರ ನಗರಸಭೆ ವ್ಯಾಪ್ತಿಯ ಹಳೇ ಪಿ.ಬಿ. ರಸ್ತೆ ಹಾಗೂ ಹೊಸಪೇಟೆ- ಶಿವಮೊಗ್ಗ ರಸ್ತೆಯ ಮಧ್ಯ ಭಾಗದಲ್ಲಿರುವ ಟಸ್ಕರ್ ಪೋಲ್‌ಗಳಿಗೆ ಅಳವಡಿಸಿರುವ ಎಲ್‌ಇಡಿ ಸ್ಟ್ರೀಪ್‌ಗಳ ಚಾಲನಾ ಕಾರ್ಯಕ್ರಮವೂ ನಡೆಯಲಿದೆ ಎಂದು ತಿಳಿಸಿದ್ದಾರೆ.
-11HRR.01: ಬಿ.ಪಿ. ಹರೀಶ್, ಶಾಸಕ.