ರಾಮನಗರ ಸಂಭ್ರಮಕ್ಕೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ

KannadaprabhaNewsNetwork |  
Published : Nov 14, 2026, 01:15 AM IST
1.ರಾಮನಗರ ಸಂಭ್ರಮ ಸಮಾರಂಭದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ರಾಮನಗರ: ಏಷ್ಯಾನೆಟ್ ಸುವರ್ಣ ನ್ಯೂಸ್ , ಕನ್ನಡಪ್ರಭ ಹಾಗೂ ಇಂಡ್ ವೇಲ್ಸ್ ಇನೋವೇಶನ್ಸ್ ಪ್ರೈವೆಟ್ ಲಿಮಿಟೆಡ್ವತಿಯಿಂದ ರೇಷ್ಮೆನಗರಿ ರಾಮನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶುಕ್ರವಾರದಿಂದ ಪ್ರಾರಂಭಗೊಂಡ ಮೂರು ದಿನಗಳ ರಾಮನಗರ ಸಂಭ್ರಮ - 2026 ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ ಚಾಲನೆ ಸಿಕ್ಕಿತು

ರಾಮನಗರ: ಏಷ್ಯಾನೆಟ್ ಸುವರ್ಣ ನ್ಯೂಸ್ , ಕನ್ನಡಪ್ರಭ ಹಾಗೂ ಇಂಡ್ ವೇಲ್ಸ್ ಇನೋವೇಶನ್ಸ್ ಪ್ರೈವೆಟ್ ಲಿಮಿಟೆಡ್

ವತಿಯಿಂದ ರೇಷ್ಮೆನಗರಿ ರಾಮನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶುಕ್ರವಾರದಿಂದ ಪ್ರಾರಂಭಗೊಂಡ ಮೂರು ದಿನಗಳ ರಾಮನಗರ ಸಂಭ್ರಮ - 2026 ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ ಚಾಲನೆ ಸಿಕ್ಕಿತು.

ದೀಪ ಬೆಳಗುವ ಮೂಲಕ ರಾಮನಗರ ಸಂಭ್ರಮಕ್ಕೆ ಮುನ್ನುಡಿ ಬರೆದ ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ರವರು, ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ನವರು ಸುದ್ದಿ ಬೆನ್ನತ್ತುವುದು ಮಾತ್ರವಲ್ಲದೆ ರಾಮನಗರ ಸಂಭ್ರಮದಂತಹ ವಿಭಿನ್ನವಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಗುಡಿ ಕೈಗಾರಿಕೆಗಳು ಹಾಗೂ ವಿವಿಧ ಸ್ಪರ್ಧೆಗಳ ಮೂಲಕ ಮಹಿಳೆಯರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮ, ಕೇವಲ ಸುದ್ದಿಗಳನ್ನು ಬಿತ್ತರಿಸುವುದಕ್ಕೆ ಸೀಮಿತವಾಗದೆ ಸಮಾಜದ ಕಣ್ಣೀರೊರೆಸುವ ಕೆಲಸ ಮಾಡಿದಾಗ ಮಾತ್ರ ಅದಕ್ಕೆ ನಿಜವಾದ ಸಾರ್ಥಕತೆ ಸಿಗುತ್ತದೆ. ಅಂತಹ ಸಾರ್ಥಕ ಪತ್ರಿಕೋದ್ಯಮಕ್ಕೆ ಕನ್ನಡಿ ಹಿಡಿದಿರುವ ಸಂಸ್ಥೆಗಳೆಂದರೆ ನಮ್ಮ ಹೆಮ್ಮೆಯ ಕನ್ನಡ ಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಎಂದು ಶ್ಲಾಘಿಸಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಮಾಧ್ಯಮಗಳು ನಿರಂತರವಾಗಿ ಧ್ವನಿ ಎತ್ತುತ್ತಾ ಬಂದಿವೆ. ಭ್ರಷ್ಟಾಚಾರದ ವಿರುದ್ಧದ ತನಿಖಾ ವರದಿಗಳು ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸುವ ''''''''ಹಲೋ ಮಿನಿಸ್ಟರ್'''''''' ಅಥವಾ ''''''''ಜನತಾ ದರ್ಬಾರ್'''''''' ನಂತಹ ವೇದಿಕೆಗಳು ಜನರು ಮತ್ತು ಸರ್ಕಾರದ ನಡುವೆ ನೇರ ಸೇತುವೆಯಾಗಿ ಪತ್ರಿಕೋದ್ಯಮದ ಮೂಲ ಆಶಯವಾದ ''''''''ಸಮಾಜದ ಕಾವಲುಗಾರ'''''''' ಎಂಬ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.

ರಾಮನಗರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಈವರೆಗೆ 1900 ಕೋಟಿಗೂ ಹೆಚ್ಚಿನ ಅನುದಾನ ತಂದು ಕೃಷಿ, ಶಿಕ್ಷಣ, ಆರೋಗ್ಯ, ವಸತಿ, ರಸ್ತೆ ಸೇರಿದಂತೆ ಎಲ್ಲ ಆಯಾಮಗಳಲ್ಲಿಯೂ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಅದು ಜನರಿಗೆ ತಲುಪಬೇಕಾದರೆ ಮಾಧ್ಯಮಗಳ ಅ‍ವಶ್ಯಕತೆ ಇದೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.

ದಶಕಗಳ ಕೊಡುಗೆ :

ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದ ವಿಶೇಷ ಯೋಜನೆ ಸಂಪಾದಕರಾದ ವಿನೋದ್ ಕುಮಾರ್ ಬಿ.ನಾಯಕ್ ಮಾತನಾಡಿ, ಕೇವಲ ಸಮಸ್ಯೆಗಳನ್ನು ತೋರಿಸುವುದಷ್ಟೇ ಅಲ್ಲದೆ, ಪರಿಹಾರೋಪಾಯ ರೂಪಿಸುವಲ್ಲಿಯೂ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಮುಂಚೂಣಿಯಲ್ಲಿವೆ. ಈ ಸಂಸ್ಥೆಗಳು ದಶಕಗಳಿಂದ ನಾಡಿನ ಸಾಹಿತ್ಯ, ಸಂಸ್ಕೃತಿ ಮತ್ತು ಬೌದ್ಧಿಕ ವಲಯಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಇನ್ನೊಂದೆಡೆ ''''''''ಅಸಾಧಾರಣ ಕನ್ನಡಿಗ'''''''', ''''''''ರೈತ ರತ್ನ'''''''' , ''''''''ಕರುನಾಡ ಕಣ್ಮಣಿ'''''''' ಸಹಕಾರ ಶಿರೋಮಣಿಯಂತಹ ಪ್ರಶಸ್ತಿಗಳ ಮೂಲಕ ಎಲೆಮರೆಯ ಕಾಯಿಯಂತೆ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುತ್ತಿದೆ. ವನ್ಯಜೀವಿ ಸಂರಕ್ಷಣಾ ಅಭಿಯಾನದ ಮೂಲಕ ಅರಿವು ಮೂಡಿಸುವಲ್ಲಿಯೂ ಈ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪದ್ಮಶ್ರೀ ಪುರಸ್ಕೃತ ಹಾಸನ ರಘು , ಸಮಾಜ ಸೇವಕ ಜನತಾ ನಾಗೇಶ್ , ಟೇಕ್ವಾಂಡೋ ಆಟಗಾರ್ತಿ ಶಾನ್ವಿ ಸತೀಶ್ , ಷಟಲ್ ಬ್ಯಾಡ್ಮಿಂಟನ್ ಆಟಗಾರ ಪಿ.ಎಸ್.ದಿಗಂತ್ ಗೌಡ , ಜಾನಪದ ಕಲಾವಿದ ಪಾರ್ಥ ಹಾಗೂ ರಂಗಭೂಮಿ ಕಲಾವಿದ ವಿಜಯ್ ಕುಮಾರ್ ಅರ್ಚಕರಹಳ್ಳಿ ಅವರನ್ನು ಸನ್ಮಾನಿಲಾಯಿತು.

ನಗರಸಭೆ ಮಾಜಿ ಉಪಾಧ್ಯಕ್ಷೆ ಆಯಿಷಾ ಬಾನು, ಮಾಜಿ ಸದಸ್ಯ ಬೈರೇಗೌಡ, ಯುವ ಮುಖಂಡ ಗುರುಪ್ರಸಾದ್, ಅಸೋಸಿಯೆಟ್ ವೈಸ್ ಪ್ರೆಸಿಡೆಂಟ್ ಇವೆಂಟ್ಸ್ ಅಂಡ್ ಆಕ್ಟಿವೇಷನ್ ವಿಜಯ್ ಕುಮಾರ್, ಬಿ.ಎಂ.ಶ್ರೀನಿವಾಸ್ ,

ಕನ್ನಡಪ್ರಭ ಜಿಲ್ಲಾ ವರದಿಗಾರ ಎಂ.ಅಫ್ರೋಜ್ ಖಾನ್, ಸುವರ್ಣ ನ್ಯೂಸ್ ಜಿಲ್ಲಾ ವರದಿಗಾರ ಜಗದೀಶ್ (ಯೋಗಿ), ಸಿಬ್ಬಂದಿಗಳಾದ ಸಿ.ಭರತ್ , ಅಭಿಷೇಕ್ ಉಪಸ್ಥಿತರಿದ್ದರು. ಸುವರ್ಣ ನ್ಯೂಸ್ ನಿರೂಪಕಿ ಅಮೃತಗೌಡ ನಿರೂಪಣೆ ಮಾಡಿದರು.

----------------------------

...ಕೋಟ್ ...

ಸುದ್ದಿಗಿಂತ ಮಿಗಿಲಾದುದು ಸಮಾಜದ ಹಿತ .ಸಮಾಜದ ಕಣ್ಣೀರೊರೆಸುವುದು ನಿಜವಾದ ಮಾಧ್ಯಮ ಧರ್ಮ ಎಂಬುದನ್ನರಿತು ತೆರೆಯ ಮರೆಯಲ್ಲಿ ನಿಂತು ಸಮಾಜಕ್ಕಾಗಿ ದುಡಿಯುವ ''''''''ಅಸಾಧಾರಣ ಕನ್ನಡಿಗರನ್ನು'''''''' ನಾಡಿಗೆ ಪರಿಚಯಿಸುತ್ತಾ, ಸಾಧಕರಿಗೆ ಸ್ಫೂರ್ತಿಯ ಚಿಲುಮೆಯಾಗಿರುವ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ನ ಜನಪರ ಕಾಳಜಿಗೆ ನಾಡಿನ ಜನರ ಪ್ರೀತಿಯೇ ಸಾಕ್ಷಿ.

- ಇಕ್ಬಾಲ್ ಹುಸೇನ್ , ಶಾಸಕರು, ರಾಮನಗರ ಕ್ಷೇತ್ರ.

-------------------------

...ಬಾಕ್ಸ್ ...

ಏಷ್ಯಾನೆಟ್ ಸುವರ್ಣ ನ್ಯೂಸ್ , ಕನ್ನಡಪ್ರಭ ಹಾಗೂ ಇಂಡ್ ವೇಲ್ಸ್ ಇನೋವೇಶನ್ಸ್ ಪ್ರೈವೆಟ್ ಲಿಮಿಟೆಡ್ ನವರು ಫ್ರೀಡಮ್ ಹೆಲ್ತಿ ಕುಕಿಂಗ್ ಆಯಿಲ್ , ಭಾಗ್ಯಲಕ್ಷ್ಮಿ, ಗಣೇಶ್ ಜ್ಯುವೆಲರ್ಸ್, ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆ, ಸಮರ್ಥ್ ಟಿವಿಎಸ್ , ನಂದಿ ಟೊಯೋಟಾ ಸಹಯೋಗದೊಂದಿಗೆ ನಗರದ ಸರ್ಕಾರಿ ಕಾಲೇಜು ಮೈದಾನದಲ್ಲಿ ಶನಿವಾರ ಮತ್ತು ಭಾನುವಾರ ರಾಮನಗರ ಸಂಭ್ರಮ ಸಮಾರಂಭ ನಡೆಯಲಿದೆ.

---------------------

...ಬಾಕ್ಸ್ ...

ರಾಮನಗರ ಸಂಭ್ರಮ ಕಣ್ತುಂಬಿಕೊಂಡು ಸಂಭ್ರಮಿಸಿದ ಜನರು

ರಾಮನಗರ ಟೌನ್ ಮಾತ್ರವಲ್ಲದೆ ಹಲವು ಭಾಗಗಳಿಂದ ಕಲಾ ಪ್ರೇಮಿಗಳು ಸರ್ಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ಆಗಮಿಸಿ ರಾಮನಗರ ಸಂಭ್ರಮವನ್ನು ಕಣ್ತುಂಬಿಕೊಂಡರು.

ಮೈದಾನದಲ್ಲಿ ಅಳವಡಿಸಿದ್ದ ಸ್ಟಾಲ್ ಗಳಲ್ಲಿ ಬಗೆ ಬಗೆಯ ತಿಂಡಿ ತಿನಿಸುಗಳನ್ನು ಜನರು ಸವಿದರು. ಮಹಿಳೆಯರು ಗೃಹೋಪಯೋಗಿ, ಕರಕುಶಲ ವಸ್ತುಗಳು, ಮಸಾಲೆ ಪದಾರ್ಥಗಳು ಮಾತ್ರವಲ್ಲದೆ ಲೈಫ್ ಸ್ಟೈಲ್ ಮಳಿಗೆಗಳಿಗೂ ತೆರಳಿ ಖರೀದಿಯಲ್ಲಿ ತೊಡಗಿದ್ದರು.

ಶುಕ್ರವಾರ ಸಂಜೆ ರಾಮನಗರ ಸಂಭ್ರಮ ಗಾಯನ ಕಾರ್ಯಕ್ರಮದ ಮೂಲಕ ಆರಂಭಗೊಂಡಿತು. ರಾತ್ರಿ 7 ಗಂಟೆ ವೇಳೆಗೆ ಮಿಸ್ಟರ್ ಜಾಕ್ - ಚಿತ್ರ ತಂಡದ ನಾಯಕ ನಟ ಗುರುನಂದನ್ , ಸಹ ನಟರಾದ ಧರ್ಮ, ಸುಶ್ಮಿತಾ

ಭೇಟಿ ನೀಡಿದ್ದರು.

ಮಿಮಿಕ್ರಿ ಸಾಗರ್ ರವರ ಹಾಸ್ಯ ಸಂಜೆ ನೋಡುಗರನ್ನು ನಗೆ ಗಡಲಲ್ಲಿ ತೇಲಿಸಿದರೆ, ವೈಷ್ಣವಿ ಮೆಲೋಡಿಸ್ ತಂಡದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಚಿತ್ರ ಗೀತೆಗಳು ಸಭಿಕರನ್ನು ರಂಜಿಸಿತು. ರಾಮನಗರ ಪ್ರತಿಭೆಗಳು ಮನರಂಜನಾ ಕಾರ್ಯಕ್ರಮ ಪ್ರದರ್ಶಿಸಿದರು.--------------------------...ಬಾಕ್ಸ್ ...ಇಂದಿನ ವಿಶೇಷ ಕಾರ್ಯಕ್ರಮಗಳನ.14ರಂದು ಬಳಗ್ಗೆ 11 ರಿಂದ 12 ಗಂಟೆವರೆಗೆ ಮಕ್ಕಳಿಗಾಗಿ ಮುದ್ದು ಮಗು ಮತ್ತು ವೇಷ ಭೂಷಣ , ಮಧ್ಯಾಹ್ನ 12 ರಿಂದ 2 ಗಂಟೆವರೆಗೆ ಮಹಿಳೆಯರಿಗೆ ಅಡುಗೆ ಮಹಾರಾಣಿ (1ನೇ ಸುತ್ತು), ಮಧ್ಯಾಹ್ನ 2ರಿಂದ 5ಗಂಟೆವರೆಗೆ ಓಪನ್ ಸ್ಟೇಜ್ ಮತ್ತು ಗಾಯನ, ಸಂಜೆ 5 ರಿಂದ 6ಗಂಟೆವರೆಗೆ ಮಿನಿಟ್ ಟು ವಿನ್ ಇಟ್ ಗೇಮ್ಸ್ , ಸಂಜೆ 6.30ರಿಂದ 7.30ರವರೆಗೆ ರಾಮನಗರ ಸಾಧಕರಿಗೆ ಸನ್ಮಾನ ಮತ್ತು ಓ ಮನಸೇ ಸಿರಿಯಲ್ ತಂಡದೊಂದಿಗೆ ಸಂವಾದ, ರಾತ್ರಿ 7.30 ರಿಂದ 8ರವರೆಗೆ ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ ಸಂಜೆ , ರಾತ್ರಿ 8 ರಿಂದ 9ರವರೆಗೆ ರಾಮ್ ಮತ್ತು ತಂಡದವರಿಂದ ಮ್ಯೂಸಿಕಲ್ ನೈಟ್ಸ್ , ರಾತ್ರಿ 9 ರಿಂದ 10ರವರೆಗೆ ನೃತ್ಯ ಹಾಗೂ ರಾಮನಗರ ಪ್ರತಿಭೆಗಳಿಂದ ಮನರಂಜನಾ ಕಾರ್ಯಕ್ರಮ.-----------------------13ಕೆಆರ್ ಎಂಎನ್ 1,2,3,4,5.ಜೆಪಿಜಿ1.ರಾಮನಗರ ಸಂಭ್ರಮ ಸಮಾರಂಭದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅವರನ್ನು ಸನ್ಮಾನಿಸಲಾಯಿತು.2.ರಾಮನಗರ ಸಂಭ್ರಮ ಸಮಾರಂಭವನ್ನುಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿದರು.3.ರಾಮನಗರ ಸಂಭ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.4.ರಾಮನಗರ ಸಂಭ್ರಮ ಕಾರ್ಯಕ್ರಮದಲ್ಲಿ ಮಳಿಗೆಗಳಲ್ಲಿ ಜನರು ಖರೀದಿಯಲ್ಲಿ ತೊಡಗಿರುವುದು.5.ರಾಮನಗರ ಸಂಭ್ರಮ ಕಾರ್ಯಕ್ರಮದಲ್ಲಿ ಮಿಸ್ಟರ್ ಜಾಕ್ - ಚಿತ್ರ ತಂಡದ ನಾಯಕ ನಟ ಗುರುನಂದನ್ , ಸಹ ನಟರಾದ ಧರ್ಮ, ಸುಶ್ಮಿತಾ ಪಾಲ್ಗೊಂಡಿದ್ದರು.---------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ