ತಿಪಟೂರು: ತುಮಕೂರು ಲೋಕಸಭಾ ಚುನಾವಣಾಯಲ್ಲಿ ತಿಪಟೂರಿನ ಬಾಲಕಿಯರ ಸರ್ಕಾರಿ ಕಾಲೇಜಿನ ಮತಗಟ್ಟೆ ಕೇಂದ್ರಕ್ಕೆ ಶಾಸಕ ಕೆ. ಷಡಕ್ಷರಿ ಆಗಮಿಸಿ ತಮ್ಮ ಮತ ಚಲಾಯಿಸಿದರು. ನಂತರ ಮಾತನಾಡಿದ ಶಾಸಕರು, ಪವಿತ್ರವಾದ ಮತವನ್ನು ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬರೂ ಕಡ್ಡಾಯವಾಗಿ ಚಲಾಯಿಸಬೇಕು. ಮತ ಹಾಕುವುದಕ್ಕೆ ಯಾರೂ ಉದಾಸೀನ ಮಾಡದೆ, ಎಲ್ಲರೂ ಮತಹಾಕಿ ಉತ್ತಮ ನಾಯಕನನ್ನು ಆಯ್ಕೆ ಮಾಡಿ ಎಂದರು.