ತಡೆಗೋಡೆ ಕಾಮಗಾರಿಗೆ ಶಾಸಕ ಕಾಮತ್‌ ಭೂಮಿ ಪೂಜೆ

KannadaprabhaNewsNetwork |  
Published : May 25, 2026, 02:45 AM IST
ತಡೆಗೋಡೆ ಕಾಮಗಾರಿಗೆ ಶಾಸಕ ವೇದವ್ಯಾಸ್‌ ಕಾಮತ್‌ ಭೂಮಿ ಪೂಜೆ ನೆರವೇರಿಸಿರುವುದು  | Kannada Prabha

ಸಾರಾಂಶ

ಮಂಗಳೂರು ಮಹಾನಗರ ಪಾಲಿಕೆಯ 59ನೇ ಜೆಪ್ಪು ವಾರ್ಡಿನ ಸೂಟರ್‌ಪೇಟೆ 4ನೇ ಅಡ್ಡರಸ್ತೆ ಮತ್ತು ಕನಕರಬೆಟ್ಟು ಬಳಿ ತಡೆಗೋಡೆ ಕುಸಿದ ಭಾಗಕ್ಕೆ 20 ಲಕ್ಷ ರು. ಅನುದಾನದಲ್ಲಿ ಪುನ‌ರ್ ನಿರ್ಮಾಣ ಕಾಮಗಾರಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಭೂಮಿ ಪೂಜೆ ನೆರವೇರಿತು.

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 59ನೇ ಜೆಪ್ಪು ವಾರ್ಡಿನ ಸೂಟರ್‌ಪೇಟೆ 4ನೇ ಅಡ್ಡರಸ್ತೆ ಮತ್ತು ಕನಕರಬೆಟ್ಟು ಬಳಿ ತಡೆಗೋಡೆ ಕುಸಿದ ಭಾಗಕ್ಕೆ 20 ಲಕ್ಷ ರು. ಅನುದಾನದಲ್ಲಿ ಪುನ‌ರ್ ನಿರ್ಮಾಣ ಕಾಮಗಾರಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಭೂಮಿ ಪೂಜೆ ನೆರವೇರಿತು.ಈ ಸಂದರ್ಭ ಮಾತನಾಡಿದ ಶಾಸಕರು, ಕಳೆದ ಮಳೆಗಾಲದಲ್ಲಿ ಈ ಭಾಗದ ಕೆಲವು ರಾಜಕಾಲುವೆಗಳಿಗೆ ಹಾನಿಯಾಗಿದ್ದರೆ, ಉಳಿದ ರಾಜಕಾಲುವೆಗಳು ಕೆಳ ಹಂತದಲ್ಲಿರುವುದು ಸಮಸ್ಯೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಸುಮಾರು 300 ರಿಂದ 400 ಕೋಟಿ ರು.ಗೂ ಅಧಿಕ ಹಾನಿಯಾಗಿದ್ದರೂ ಅಗತ್ಯ ಪ್ರಮಾಣದ ಪರಿಹಾರ ರಾಜ್ಯ ಸರ್ಕಾರದಿಂದ ಬಂದಿಲ್ಲದಿರುವುದು ಬೇಸರದ ಸಂಗತಿ. ಇತ್ತೀಚಿಗೆ ರಾಜ್ಯ ಸರ್ಕಾರದಿಂದ ಹಲವು ಜಿಲ್ಲೆಗಳಿಗೆ ಮಳೆ ಪರಿಹಾರ ನಿಧಿ ಬಿಡುಗಡೆಯಾಗಿದ್ದು ಅದರಲ್ಲಿ ನಮ್ಮ ಪಾಲಿಕೆ ವ್ಯಾಪ್ತಿಗೆ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕರ ನಿಧಿಯಲ್ಲಿ 10 ಕೋಟಿ ರು. ನೀಡಲಾಗಿದ್ದು, ಅದರಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು. ಈ ವೇಳೆ ಸ್ಥಳೀಯ ನಿಕಟಪೂರ್ವ ಪಾಲಿಕೆ ಸದಸ್ಯರಾದ ಭರತ್ ಕುಮಾರ್, ಅಜಿತ್ ಡಿಸಿಲ್ವ, ಶಬರೀಶ್, ಪ್ರವೀಣ್ ನಿಡ್ಡೆಲ್, ಹರೀಶ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಂದಾಪುರ: ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 12ನೇ ಶಾಖೆ ಉದ್ಘಾಟನೆ
ಕಾನೂನು ಅರಿವು ಅಗತ್ಯ: ಮುಕ್ತಾಬಾಯಿ