ಎಸ್ಐಆರ್ ಮಹಾ ಅಭಿಯಾನದ ಪ್ರಯುಕ್ತ ಮಂಗಳೂರು ನಗರ ದಕ್ಷಿಣ ಮಂಡಲದ ವಿವಿಧೆಡೆ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ರವರು ಬುಧವಾರ ಭೇಟಿ ನೀಡಿದರು.
ಮಂಗಳೂರು: ಎಸ್ಐಆರ್ ಮಹಾ ಅಭಿಯಾನದ ಪ್ರಯುಕ್ತ ಮಂಗಳೂರು ನಗರ ದಕ್ಷಿಣ ಮಂಡಲದ ವಿವಿಧೆಡೆ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ರವರು ಬುಧವಾರ ಭೇಟಿ ನೀಡಿದರು.
ದಕ್ಷಿಣ ಮಹಾಶಕ್ತಿ ಕೇಂದ್ರದ ಬಜಾಲ್ 53 ನೇ ವಾರ್ಡಿನ ಬೂತ್ ಸಂಖ್ಯೆ 208 ಹಾಗೂ 209 ಕ್ಕೆ ಭೇಟಿ ನೀಡಿದ ಶಾಸಕರು, ಮತದಾರರಿಗೆ ಎನ್ಯುಮರೇಷನ್ ಫಾರಂಗಳನ್ನು ಭರ್ತಿ ಮಾಡುವ ಸಂದರ್ಭದಲ್ಲಿ ಯಾವುದೇ ಸಂದೇಹ, ಸಮಸ್ಯೆಗಳಿದ್ದರೆ ನಮ್ಮ ಪಕ್ಷದ ಏಜೆಂಟರ ಸಹಾಯವನ್ನು ಪಡೆಯಿರಿ. ಎಲ್ಲರ ಮತಗಳು ಅಮೂಲ್ಯವಾಗಿದ್ದು ಯಾವೊಬ್ಬ ಅರ್ಹ ಮತದಾರರೂ ಸಹ ಮತದಾರರ ಪಟ್ಟಿಯಿಂದ ಹೊರಗುಳಿಯುವಂತಾಗಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಬಿಜೆಪಿ ಪ್ರಮುಖರಾದ ಪ್ರವೀಣ್ ನಿಡ್ಡೇಲ್, ಚಂದ್ರಶೇಖರ್ ಬಜಾಲ್, ಪ್ರೀತೇಶ್, ಪ್ರೀತಮ್ ಅಂಚನ್, ರಾಹುಲ್ ಬೋಳೂರು, ಶಿವಾಜಿ ರಾವ್, ಮೋಹಿನಿ, ಅಜಿತ್, ಅಜಯ್ ಸೇರಿದಂತೆ ವಿವಿಧ ಪ್ರಮುಖರು, ಕಾರ್ಯಕರ್ತರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.