ಶಾಸಕ ಕಂದಕೂರ ಜನ್ಮದಿನ: ಅಭಿಮಾನಿಗಳಿಂದ ಪೂಜೆ

KannadaprabhaNewsNetwork |  
Published : Nov 18, 2026, 01:15 AM IST
ಗುರುಮಠಕಲ್‌ ಮತಕ್ಷೇತ್ರದ ಶಾಸಕ, ಜೆಡಿಎಸ್‌ ಯುವ ನಾಯಕ ಶರಣಗೌಡ ಕಂದಕೂರ ಅವರ ಜನ್ಮದಿನದ ನಿಮಿತ್ಯ, ಅವರ ಸಾವಿರಾರು ಅಭಿಮಾನಿಗಳು ನ.17 ರಂದು ಹಲವೆಡೆ ಅನ್ನದಾಸೋಹ, ದೇವಸ್ಥಾನಗಳಲ್ಲಿ ಪೂಜೆ, ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳ ವಿತರಣೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ತಮ್ಮ ಜನನಾಯಕನ ಅಭಿಮಾನವನ್ನು ಮೆರೆದಿದ್ದಾರೆ. | Kannada Prabha

ಸಾರಾಂಶ

ಗುರುಮಠಕಲ್‌ ಮತಕ್ಷೇತ್ರದ ಶಾಸಕ, ಜೆಡಿಎಸ್‌ ಯುವ ನಾಯಕ ಶರಣಗೌಡ ಕಂದಕೂರ ಅವರ ಜನ್ಮದಿನದ ನಿಮಿತ್ತ ಅವರ ಸಾವಿರಾರು ಅಭಿಮಾನಿಗಳು ಮಂಗಳವಾರ ಹಲವೆಡೆ ಅನ್ನದಾಸೋಹ, ದೇವಸ್ಥಾನಗಳಲ್ಲಿ ಪೂಜೆ, ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳ ವಿತರಣೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ತಮ್ಮ ಜನನಾಯಕನ ಅಭಿಮಾನ ಮೆರೆದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಗುರುಮಠಕಲ್‌ ಮತಕ್ಷೇತ್ರದ ಶಾಸಕ, ಜೆಡಿಎಸ್‌ ಯುವ ನಾಯಕ ಶರಣಗೌಡ ಕಂದಕೂರ ಅವರ ಜನ್ಮದಿನದ ನಿಮಿತ್ತ ಅವರ ಸಾವಿರಾರು ಅಭಿಮಾನಿಗಳು ಮಂಗಳವಾರ ಹಲವೆಡೆ ಅನ್ನದಾಸೋಹ, ದೇವಸ್ಥಾನಗಳಲ್ಲಿ ಪೂಜೆ, ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳ ವಿತರಣೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ತಮ್ಮ ಜನನಾಯಕನ ಅಭಿಮಾನ ಮೆರೆದರು.

ಯಾದಗಿರಿ ಜಿಲ್ಲಾ ಕೇಂದ್ರ ಬಸ್ ನಿಲ್ದಾಣದ ಎದುರು ಜಿಲ್ಲಾ ಜೆಡಿಎಸ್ ಐಟಿ ಘಟಕ ಹಾಗೂ ಅಭಿಮಾನಿಗಳಿಂದ ಕೇಕ್ ಸೇವೆ ಹಾಗೂ ಅನ್ನ ದಾಸೋಹ ಏರ್ಪಡಿಸಲಾಗಿತ್ತು.

ಶಾಸಕ ಶರಣಗೌಡ ಕುರಿತು ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ತಮ್ಮ ಜನನಾಯಕನ ಬಗ್ಗೆ ಅಭಿಮಾನದ ನುಡಿಗಳನ್ನಾಡಿದರು. ಜನಪರ ಕಾಳಜಿಯನ್ನು ಮೈಗೂಡಿಸಿಕೊಂಡಿರುವ ಶರಣಗೌಡ ಕಂದಕೂರ ಅವರು ಕೇವಲ ರಾಜಕಾರಣಿಯಾಗಿರದೆ, ಕ್ಷೇತ್ರದ ಪ್ರತಿ ಹಳ್ಳಿ, ಪ್ರತಿ ಮನೆಗೂ ಅಭಿವೃದ್ಧಿಯ ಬೆಳಕು ಚೆಲ್ಲುತ್ತಿರುವ ಮಾದರಿ ಜನನಾಯಕರಾಗಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ಪ್ರಥಮ ಆದ್ಯತೆ ಎಂದು ಹಗಲಿರುಳು ಶ್ರಮಿಸುತ್ತಿರುವ ಯುವ ನಾಯಕ ನಮಗೆ ಸಿಕ್ಕಿರುವುದು ನಮ್ಮ ಪುಣ್ಯ ಎಂದರು.

ಮೂಲಸೌಕರ್ಯಗಳ ಕೊರತೆಯ ಇದ್ದ ಯಾದಗಿರಿ ಗುರುಮಠಕಲ್‌ ಕ್ಷೇತ್ರದಲ್ಲಿ ದಿ.ನಾಗನಗೌಡ ಕಂದಕೂರ ಶಾಸಕರಾದ ಮೇಲೆ ಅವರ ಪುತ್ರ ಶರಣಗೌಡ ಕಂದಕೂರ ಈ ಪ್ರದೇಶಕ್ಕಿದ್ದ ಹಿಂದುಳಿದ ಹಣೆಪಟ್ಟಿ ಬದಲಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಮತ್ತು ರಸ್ತೆ ಸಂಪರ್ಕದಂತಹ ಮೂಲಭೂತ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಅದರ ಜತೆಗೆ ತಂದೆಯ ನಂತರ ಶಾಸಕರಾಗಿ ಆಯ್ಕೆಯಾದ ಶರಣಗೌಡ ಕಂದಕೂರ ಅವರು ಸರ್ಕಾರದ ಮಟ್ಟದಲ್ಲಿ ಗಟ್ಟಿಯಾದ ಧ್ವನಿಯಾಗಿ ನಿಂತು, ತಮ್ಮ ಕ್ಷೇತ್ರದ ಜನರಿಗೆ ನ್ಯಾಯ ಒದಗಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು.

ಜೆಡಿಎಸ್ ಮಾಧ್ಯಮ ವಕ್ತಾರ ಮಲ್ಲಣಗೌಡ ಹಳಿಮನಿ ಕೌಳೂರು ಮಾತನಾಡಿ, ಜನರ ಧ್ವನಿಯಾಗಿ ಸದನದಲ್ಲಿ ಹೋರಾಟ ಮಾಡುತ್ತಾ ಕ್ಷೇತ್ರದ ರೈತರ ಕಷ್ಟಗಳು, ಸೌಲಭ್ಯಗಳ ವಂಚನೆ ಹಾಗೂ ಪ್ರಾದೇಶಿಕ ಅಸಮತೋಲನದ ವಿರುದ್ಧ ಧ್ವನಿ ಎತ್ತುವ ಮೂಲಕ ಶರಣಗೌಡ ಕಂದಕೂರ ರಾಜ್ಯಮಟ್ಟದಲ್ಲಿ ಗಮನ ಸೆಳೆದ ಯುವ ನಾಯಕರಾಗಿದ್ದಾರೆ. ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕಾಗಿ ರಾಜಿಯಾಗದ ಹೋರಾಟದ ಗುಣವೇ ಅವರನ್ನು ಜನಮಾನಸದಲ್ಲಿ ವಿಶೇಷ ಸ್ಥಾನದಲ್ಲಿರಿಸಿದೆ. ಅಧಿಕಾರದ ಗದ್ದುಗೆಯಲ್ಲಿದ್ದರೂ ಮಣ್ಣಿನ ಮಕ್ಕಳಾಗಿ, ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿತ್ವ ಹೊಂದಿರುವ ಸರಳ ಸಜ್ಜನಿಕೆಯ ಯುವ ನಾಯಕ ನಮ್ಮ ಹೆಮ್ಮೆಯ ಶರಣಗೌಡ ಕಂದಕೂರ ಆಗಿದ್ದಾರೆ ಎಂದು ಗುಣಗಾನ ಮಾಡಿದರು.

ರಾಜು ಉಡುಪಿ, ಲಕ್ಷ್ಮಣ್ ನಾಯಕ್ ಕೂಡ್ಲೂರು, ಅಲ್ಲಾವುದ್ದಿನ್ ನೀಲಹಳ್ಳಿ ಅಧ್ಯಕ್ಷರು ಐಟಿ ಘಟಕ, ಯಲ್ಲಾಲಿಂಗ ಚಾಮನಳ್ಳಿ, ಶಿವು ಗೌಡ ಸೈದಾಪುರ, ಷಣ್ಮುಖ ಎಸ್ ಬಡಿಗೇರ್, ಶಿವು ಯಂಪಾಡ್, ಪವನ್, ಸಿದ್ದಲಿಂಗರೆಡ್ಡಿ ಗೌಡ, ಬಂದುಗೌಡ ಭೀಮನಳ್ಳಿ, ಭೀಮು ಗೋಪಾಳಪುರ, ಸಾಗರ್ ಹುಲ್ಲೆರ್, ಬಸ್ಸು, ಮಾಡಿವಾಳ, ಸುರೇಶ, ತಾಯಪ್ಪ ನಾಗಲಪುರ, ಸಾಬು ನಾಯಕ, ಭೀಮು ಶಾಸ್ತ್ರೀ, ತೈಸಿನ್, ರಾಮಚಂದ್ರ, ಬಸ್ಸು ಸೈದಾಪುರ ನಾಗರೆಡ್ಡಿ. ರಾಜು ಕೂಡ್ಲೂರು, ಪರಶುರಾಮ, ವಿಜಯ್, ರಾಜುಸಾಲಿ, ಮಲ್ಲಿಕಾರ್ಜುನ ಅಯ್ಯಾಳ, ಭೀಮು ರಾಂಪೂರ, ಅಶೋಕ್ ತೇಜ್, ಗೋವಿಂದ, ಶಕೀಲ್ ಇತರರಿದ್ದರು.

ಗುರುಮಠಕಲ್ ಕ್ಷೇತ್ರವನ್ನು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂಚೂಣಿಗೆ ತರಬೇಕು ಎಂಬುದು ಶಾಸಕ ಶರಣಗೌಡ ಕಂದಕೂರ ಅವರ ಕನಸು. ಯುವಕರಿಗೆ ಉದ್ಯೋಗಾವಕಾಶಗಳು, ಕೃಷಿಕರಿಗೆ ಅಗತ್ಯ ನೆರವು ಹಾಗೂ ಬಡವರಿಗೆ ಸೌಕರ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ನೂತನ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ಶರಣಗೌಡ ಕಂದಕೂರ ಕಂಡ ಕನಸುಗಳು ಮತ್ತು ಅವುಗಳನ್ನು ನನಸಾಗಿಸಲು ಪಡುತ್ತಿರುವ ಶ್ರಮ ನಿಜಕ್ಕೂ ಶ್ಲಾಘನೀಯ. ಅಭಿವೃದ್ಧಿಯ ಹರಿಕಾರರಾಗಿ ಮುನ್ನಡೆಯುತ್ತಿರುವ ಶರಣಗೌಡ ಕಂದಕೂರ ಅವರಿಗೆ ಭಗವಂತನು ಆಯುರಾರೋಗ್ಯ, ದೀರ್ಘಾಯುಷ್ಯ ಹಾಗೂ ಜನಸೇವೆಯ ಶಕ್ತಿ ಕರುಣಿಸಲಿ ಎಂದು ಜೆಡಿಎಸ್ ಮಾಧ್ಯಮ ವಕ್ತಾರ ಮಲ್ಲಣಗೌಡ ಹಳಿಮನಿ ಕೌಳೂರು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಪ್ರತಿಭೆ ಅನಾವರಣಕ್ಕೆ ಕಲಾಶ್ರೀ ಉತ್ತಮ ವೇದಿಕೆ: ಜಿಪಂ ಸಿಇಒ
ತೋಂಟದ ಸಿದ್ಧಲಿಂಗ ಶ್ರೀಗೆ ಮಕ್ಕಳ ಬಗ್ಗೆ ಅಪಾರ ಕಾಳಜಿ ಇತ್ತು: ಈಶಣ್ಣ ಬೆಟಗೇರಿ