ಕನ್ನಡಪ್ರಭ ವಾರ್ತೆ ಗುರುಮಠಕಲ್
ಈ ಸಂದರ್ಭದಲ್ಲಿ ರೋಗಿಗಳ ಜೊತೆ ಮಾತನಾಡಿದ ಶಾಸಕರು, ಅಲ್ಲಿನ ಅವ್ಯವಸ್ಥೆ, ಸಿಬ್ಬಂದಿ ನಿರ್ಲಕ್ಷ್ಯತನಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಆಸ್ಪತ್ರೆಯಲ್ಲಿ ಕುಡಿಯಲು ನೀರಿಲ್ಲ, ಔಷಧಿಗಳಿಲ್ಲದೆ ರೋಗಿಗಳಿಗೆ ಹೇಗೆ ಚಿಕಿತ್ಸೆ ಕೊಡುತ್ತೀರಿ, ಆಸ್ಪತ್ರೆ ದನದ ಕೊಟ್ಟಿಗೆಯಾಗಿದೆ. ಶಾಸಕನಾಗಿ ನಾನು ಆಗಮಿಸುತ್ತಿದ್ದೇನೆ ಎಂದು ನೀವು ಆಸ್ಪತ್ರೆಗೆ ಆಗಮಿಸಿದ್ದೀರಾ ಎಂದು ಪ್ರಶ್ನಿಸಿದ ಶಾಸಕರು, ನಿಮಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ನಿಮ್ಮ ಮನೆಗೆ ಹೋಗಿ ಎಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ವಿಜಯ್ ಕುಮಾರ್ ಪಾಟೀಲ್ ವಿರುದ್ಧ ಆಕ್ರೋಶಗೊಂಡರು.
ನರ್ಸ್, ಸಿಬ್ಬಂದಿಯನ್ನು ಕರೆದು ಮಾತನಾಡಿಸಿದ ಅವರು, ಹೇಗೆ ಚಿಕಿತ್ಸೆ ನೀಡುತ್ತೀರಿ? ರೋಗಿಗಳಿಗೆ ಗ್ಲೂಕೋಸ್ ಡ್ರಿಪ್ ಹಚ್ಚುವ ಪದ್ಧತಿ ಹೀಗೇನಾ? ಎಂದು ಪ್ರಶ್ನಿಸಿದಾಗ, ಸಿಬ್ಬಂದಿ ಯಾವುದೇ ಮಾತನಾಡದೆ ಮೌನಕ್ಕೆ ಶರಣಾದರು.ಈ ವೇಳೆ ಗ್ರಾಮದ ಪ್ರಮುಖರು ಮಾತನಾಡಿ, ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ, ಆಸ್ಪತ್ರೆಯಲ್ಲಿ ಇರುವುದಿಲ್ಲ, ಚಿಕಿತ್ಸೆ ದೂರದ ಮಾತು ಎಂದು ತಮ್ಮ ಅಳಲನ್ನು ಶಾಸಕರ ಎದುರಿಗೆ ತೋಡಿಕೊಂಡರು.