ರೆಬಲ್ ಶಾಸಕರ ವಿರುದ್ದ ಹರಿಹಾಯ್ದ ಶಾಸಕ ಕೊತ್ತೂರು

KannadaprabhaNewsNetwork |  
Published : Mar 01, 2025, 01:02 AM IST
೨೮ಕೆಎಲ್‌ಆರ್-೧೫ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಚಿತ್ರ. | Kannada Prabha

ಸಾರಾಂಶ

ಕೋಲಾರ ಕ್ಷೇತ್ರದ ಶಾಸಕನಾದ ನನಗೆ ಯಾರೇ ಜಿಲ್ಲೆಗೆ ಬಂದರೂ ಮಾಹಿತಿ ಕೊಡುತ್ತಾರೆ. ಹಾಗಾಗಿ ಅವರು ಬಂದಾಗ ತಾವು ಅವರನ್ನು ಆಹ್ವಾನಿಸಿ ಕ್ಷೇತ್ರಕ್ಕೆ ಕೆಲಸ ಮಾಡಿಸಿಕೊಳ್ಳುವುದು ನನ್ನ ಜವಬ್ದಾರಿ. ಉಸ್ತುವಾರಿ ಸಚಿವರು, ಸಿಎಂ, ಡಿಸಿಎಂರನ್ನ ಹಗಲು ರಾತ್ರಿ ಹಿಡಿದು ಕ್ಷೇತ್ರದ ಕೆಲಸಮಾಡಸಿಕೊಂಡು ಬರುವೆ. ನಮ್ಮ ಮನೆಯ ಸಮಸ್ಯೆ ಬೇರೆಯವರಿಗೆ ಹೇಗೆ ಗೊತ್ತಾಗುತ್ತೆ

ಕನ್ನಡಪ್ರಭ ವಾರ್ತೆ ಕೋಲಾರಕಳೆದ ನಾಲ್ಕೈದು ದಿನಗಳಿಂದ ರೆಬಲ್ ಆಗಿರುವ ಕಾಂಗ್ರೆಸ್‌ನ ಇಬ್ಬರು ಶಾಸಕ ವರ್ತನೆಗೆ ಶಾಸಕ ಕೊತ್ತೂರು ಮಂಜುನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಳಬಾಗಲು ಆವನಿ ರಾಮಲಿಂಗೇಶ್ವರ ರಥೋತ್ಸವದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹೆಸರು ಹೇಳಿ ಯಾರಾದರೂ ಮಾತನಾಡಿದ್ರೆ ಹೇಳಿ, ನಾನು ಯಾರನ್ನೂ ಕೇರ್ ಮಾಡಲ್ಲ ಎಂದು ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಹಾಗೂ ಕೆಜಿಎಫ್ ಶಾಸಕಿ ರೂಪಾ ವಿರುದ್ದ ಹರಿಹಾಯ್ದರು. ವಿಡಿಯೋ ಬಯಲು ಮಾಡುವೆ

ತಮ್ಮ ವಿರುದ್ಧ ಮಾತನಾಡಿದರೆ ಅವರ ವಿಡಿಯೋ, ಆಡಿಯೋ ಫೋಟೋ, ಬಂಡವಾಳ, ಎಲ್ಲವನ್ನ ಬಯಲು ಮಾಡುವೆ. ಅದು ಅವರು ನನ್ನ ಹೆಸರು ಹೇಳಲಿ ಅಮೇಲೆ ನಾನು ಯಾರು ಅಂತ ತೋರಿಸುವೆ ಎಂದು ನೇರವಾಗಿ ಸವಾಲ್ ಹಾಕಿದರು. ಕೋಲಾರ ಕ್ಷೇತ್ರದ ಶಾಸಕನಾದ ನನಗೆ ಯಾರೇ ಜಿಲ್ಲೆಗೆ ಬಂದರೂ ಮಾಹಿತಿ ಕೊಡುತ್ತಾರೆ. ಹಾಗಾಗಿ ಅವರು ಬಂದಾಗ ತಾವು ಅವರನ್ನು ಆಹ್ವಾನಿಸಿ ಕ್ಷೇತ್ರಕ್ಕೆ ಕೆಲಸ ಮಾಡಿಸಿಕೊಳ್ಳುವುದು ನನ್ನ ಜವಬ್ದಾರಿ ಎಂದರು. ಜಿಲ್ಲಾ ಉಸ್ತುವಾರಿ ಸಚಿವರು ಕೆಲವೆ ಶಾಸಕರ ಮಾತು ಕೇಳಿಕೊಂಡು ದಿಕ್ಕು ತಪ್ಪುಸುತ್ತಿದ್ದಾರೆ ಎಂದು ಶಾಸಕ ನಾರಾಯಣಸ್ವಾಮಿ ಮಾಡಿದ್ದ ಆರೋಪಕ್ಕೆ ಟಾಂಗ್ ನೀಡಿದ ವರ್ತೂರು, ಉಸ್ತುವಾರಿ ಸಚಿವರು, ಸಿಎಂ, ಡಿಸಿಎಂರನ್ನ ಹಗಲು ರಾತ್ರಿ ಹಿಡಿದು ಕ್ಷೇತ್ರದ ಕೆಲಸಮಾಡಸಿಕೊಂಡು ಬರುವೆ. ನಮ್ಮ ಮನೆಯ ಸಮಸ್ಯೆ ಬೇರೆಯವರಿಗೆ ಹೇಗೆ ಗೊತ್ತಾಗುತ್ತೆ ಎಂದರು. ಪಕ್ಷಕ್ಕೆ ಶಕ್ತಿ ತುಂಬುವವರು ಡಿಕೆಶಿ

ಮುಂಬರುವ ಬಜೆಟ್‌ನಲ್ಲಿ ಕೋಲಾರಕ್ಕೆ ಮೆಡಿಕಲ್ ಕಾಲೇಜು, ರಿಂಗ್ ರೋಡ್ ಅಗುತ್ತೆ, ರಾತ್ರಿ ಹಗಲು ನನ್ನ ಕ್ಷೇತ್ರಕ್ಕೆ ಬೇಕಾದ ಕೆಲಸ ಮಾಡಿಸೋದು ನನ್ನ ಜವಾಬ್ದಾರಿ. ಡಿಸಿಎಂ ಡಿ.ಕೆ.ಶಿವಕುಮಾರ್ ಅದ್ಯಕ್ಷತೆಯಲ್ಲಿ ಸರ್ಕಾರ ಬಂದಿದೆ, ಅವರ ನಾಯಕತ್ವದಲ್ಲಿ ಸರ್ಕಾರ ರಚನೆ ಆಗಿದೆ. ಸಿಎಂ ಆಗಿ ಸಿದ್ದರಾಮಯ್ಯ ಅವರಿದ್ದಾರೆ, ಪಕ್ಷ ಕಟ್ಟುವವರು, ಪಕ್ಷಕ್ಕೆ ಶಕ್ತಿ ತುಂಬುವವರು ಅವರು ಎಂದು ಡಿಕೆಶಿ ಪರ ಬ್ಯಾಟ್ ಬೀಸಿದರು.

ಕೋಮುಲ್, ಡಿಸಿಸಿ ಬ್ಯಾಂಕ್ ಚುನಾವಣೆ

ಕೋಮುಲ್ ಹಾಗೂ ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ಶಾಸಕರ ಮಧ್ಯೆಯೆ ಗುಂಪುಗಾರಿಕೆ ಇದಿಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕ ಕೊತ್ತೂರು, ಡಿಸಿಸಿ ಬ್ಯಾಂಕ್ ಚುನಾವಣೆಗೆ ಅಡ್ಡಗಾಲು ಹಾಕಿರೋದೆ ಮಾಜಿ ಅಧ್ಯಕ್ಷ ಗೋವಿಂದಗೌಡರು. ವಿಚಾರಣೆಗೆ ಕಮಿಟಿ ಮಾಡಿದರೆ ಅದರ ವಿರುದ್ದ ಸ್ಟೇ ಹೋಗಿರೋದು ಯಾರು. ಸ್ಟೇ ಇರೋದ್ರಿಂದ ಎಲೆಕ್ಷನ್ ಆಗಿಲ್ಲ. ಡಿಸಿಸಿ ಬ್ಯಾಂಕ್ ಮಾತ್ರವಲ್ಲ ಕೋಮುಲ್ ಅವ್ಯವಹಾರವೂ ತನಿಖೆಯಾಗಲಿ ಎಂದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು