ವರ್ತೂರ್‌ ನಾಲಿಗೆಗೂ ಮೆದುಳಿಗೂ ಸಂಪರ್ಕವಿಲ್ಲ

KannadaprabhaNewsNetwork |  
Published : Jun 14, 2025, 01:52 AM IST
13ಕೆಎಲ್‌ಆರ್.1.ಕೋಲಾರ ತಾಲೂಕಿನ ವೇಮಗಲ್‌ನಲ್ಲಿ ಇಂದಿರಾ ಕ್ಯಾಂಟೀನ್ ಉದ್ಗಾನಟಿಸಿದ ಶಾಸಕ ಕೊತ್ತೂರು ಮಂಜುನಾಥ್. | Kannada Prabha

ಸಾರಾಂಶ

ಕಾಂಗ್ರೆಸ್ ಸರ್ಕಾರವು ಬರೀ ಅಭಿವೃದ್ಧಿಗೆ ಒತ್ತು ನೀಡುತ್ತದೆ ಇಂದಿರಾಗಾಂಧಿ ಅವರ ಕಾಲದಲ್ಲಿಯೇ ಬಡವರಿಗೆ ಮನೆಗಳು ಕೊಟ್ಟರು. ಪಿಂಚಣಿ ಜಾರಿ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಕಿ ಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರವು ಹಸಿವು ಮುಕ್ತ ಕರ್ನಾಟಕವೇ ಮುಖ್ಯ ಉದ್ದೇಶದಿಂದ ಇಂದಿರಾ ಕ್ಯಾಟೀನ್ ಯೋಜನೆ ಅನುಷ್ಠಾನಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರ

ಮಾಜಿ ಸಚಿವ ವರ್ತೂರ್ ಪ್ರಕಾಶ್‌ಗೆ ತಿಂಗಳು ಮಾಮೂಲಿ ಇಲ್ಲದೇ ಹೋಗಿದ್ದರಿಂದ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಅವರ ನಾಲಿಗೆಗೂ ಮತ್ತು ಮೆದುಳಿಗೂ ಸಂಪರ್ಕ ಇಲ್ಲದಂತಾಗಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಟೀಕಿಸಿದರು. ತಾಲೂಕಿನ ವೇಮಗಲ್‌ನಲ್ಲಿ ಶುಕ್ರವಾರ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಧಿಕಾರದಲ್ಲಿ ಇದ್ದಷ್ಟು ದಿನ ಅಧಿಕಾರಿಗಳು ನೀಡುವ ಕಮಿಷನ್ ವರ್ತೂರು ಪ್ರಕಾಶ್ ಅವರಿಗೆ ಜೀವನವಾಗಿತ್ತು ಎಂದು ಆರೋಪಿಸಿದರು.

ಆರೋಪ ಸಾಬೀತುಪಡಿಸಲಿ

ಆದರೆ ತಮಗೆ ಅಂತಹ ಪರಿಸ್ಥಿತಿ ಬೇಕಾಗಿಲ್ಲ. ನನಗೆ ಕೋಟ್ಯಂತರ ರೂಪಾಯಿ ಬಾಡಿಗೆ ಬರುತ್ತದೆ ನಿನ್ನ ಅವಧಿಯಲ್ಲಿನ ಕಾಮಗಾರಿಗಳು ಮಾಡಲು ಗುತ್ತಿಗೆದಾರರಿಂದ ಲಂಚ ಪಡೆದಿದ್ದನ್ನು ಅವರೇ ಹೇಳಿದ್ದಾರೆ. ನಾನು ಯಾರ ಹತ್ತಿರವಾದರೂ ಪಡೆದಿದ್ದರೆ ಸಾಬೀತು ಮಾಡಲಿ ಎಂದು ಸಾವಾಲು ಹಾಕಿದರು ವರ್ತೂರು ಪ್ರಕಾಶ್ ಅವರು ಏನಾದರೂ ಮಾತಾಡಬೇಕು ಅಂತ ಕಾಂಗ್ರೆಸ್ ನಾಯಕರ ವಿರುದ್ದ ಇಲ್ಲಸಲ್ಲದ ಆರೋಪ ಮಾಡಿಕೊಳ್ಳುವುದೇ ಜೀವನವಾಗಿದೆ ಹಿಂದೆ ಸಿದ್ದರಾಮಯ್ಯ ಅವರ ವಿರುದ್ದ ಮಾತಾಡಿ ಮಾತಾಡಿ ಏನಾಯ್ತು ಅಂತ ರಾಜ್ಯದ ಜನಕ್ಕೆ ಗೊತ್ತಿದೆ. ಇನ್ನಾದರೂ ಅವರಿಗೆ ಒಳ್ಳೆಯ ಬುದ್ದಿ ಕೊಟ್ಟು ಒಳ್ಳೆಯದು ಮಾತಾಡಲಿ. ಇಲ್ಲ ಯಾರು ತಪ್ಪು ಮಾಡಿದ್ದಾರೆ ಅಂತ ಅ ಕೋಲಾರಮ್ಮ ದೇವರು ನೋಡಿಕೊಳ್ಳಲಿ ಎಂದರು.

ಕಾಂಗ್ರೆಸ್ ಸರ್ಕಾರವು ಬರೀ ಅಭಿವೃದ್ಧಿಗೆ ಒತ್ತು ನೀಡುತ್ತದೆ ಇಂದಿರಾಗಾಂಧಿ ಅವರ ಕಾಲದಲ್ಲಿಯೇ ಬಡವರಿಗೆ ಮನೆಗಳು ಕೊಟ್ಟರು. ಪಿಂಚಣಿ ಜಾರಿ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಕಿ ಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರವು ಹಸಿವು ಮುಕ್ತ ಕರ್ನಾಟಕವೇ ಮುಖ್ಯ ಉದ್ದೇಶದಿಂದ ಇಂದಿರಾ ಕ್ಯಾಟೀನ್ ಯೋಜನೆ ಅನುಷ್ಠಾನಗೊಳಿಸಿದ್ದಾರೆ ಎಂದರು.

ವೇಮಗಲ್‌ ತಾಲೂಕಾಗಲಿದೆ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಇಂದಿರಾ ಕ್ಯಾಂಟೀನ್‌ ಮುಚ್ಚಿದ್ದರು, ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಮತ್ತೆ ಪ್ರಾರಂಭ ಮಾಡಿದೆ. ವೇಮಗಲ್ ನಲ್ಲಿ ಉಪ ನೋಂದಣಿ ಕೇಂದ್ರವನ್ನು ಮಾಡಲು ಈಗಾಗಲೇ ಅಧಿಕಾರಿಗಳು ಬಂದು ಹೋಗಿದ್ದಾರೆ. ಮುಂದೆ ತಾಲೂಕು ಕೇಂದ್ರ ಮಾಡಲು ಸಹ ಅನುಮೋದನೆ ನೀಡಿದ್ದು ಮುಂದಿನ ದಿನಗಳಲ್ಲಿ ಆಗುತ್ತದೆ ನಮಗೆ ಅಭಿವೃದ್ಧಿ ಮುಖ್ಯವಾಗಿದೆ ನೇರವಾಗಿ ಮಾತಾಡೋ ವ್ಯಕ್ತಿ ತಪ್ಪು ಇದ್ದರೆ ಪ್ರಶ್ನೆ ಮಾಡತ್ತೇವೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ತಾಲೂಕು ಮತ್ತು ಪಟ್ಟಣ ಪ್ರದೇಶದಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭ ಮಾಡಲಾಗಿದೆ. ಜಿಲ್ಲೆಯ ನಾಲ್ಕು ಕೇಂದ್ರಗಳಲ್ಲಿ ಹೊಸದಾಗಿ ಪ್ರಾರಂಭ ಮಾಡಿದ್ದಾರೆ ಎಂದರು.

ಕೋಲಾರದ ಕ್ಯಾಂಟೀನ್‌ ಅವ್ಯವಸ್ಥೆ

ಕೋಲಾರ ಕೇಂದ್ರದಲ್ಲಿ ಇರುವ ಇಂದಿರಾ ಕ್ಯಾಂಟೀನ್‌ನಲ್ಲಿ ಅವ್ಯವಸ್ಥೆ ಇದ್ದು, ಸರಿಪಡಿಸಬೇಕು. ಇಂದಿರಾಗಾಂಧಿ ಅವರ ಹೆಸರು, ನೆನಪು, ಸಾಧನೆಗಳಿಗೆ ಗೌರವ ಕೊಡಬೇಕು. ಬಡವರಿಗೆ ಅನುಕೂಲ ಮಾಡಬೇಕು ಎಂದು ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲಾ ವರ್ಗಗಳಿಗೆ ಅನುಕೂಲ ಮಾಡಿದ್ದಾರೆ ಇಲ್ಲಿ ಸ್ವಚ್ಚತೆ ಕಾಪಾಡಿ ಹಸಿವು ಮುಕ್ತದ ಜೊತೆಗೆ ಗುಡಿಸಲು ಮುಕ್ತ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ತಾಲೂಕು ಅಧ್ಯಕ್ಷ ವಿ.ಎಂ ಮುನಿಯಪ್ಪ, ಜಿಪಂ ಮಾಜಿ ಸದಸ್ಯ ನಾಗನಾಳ ಸೋಮಣ್ಣ ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವೆಂಕಟೇಶ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ಮುಖಂಡರಾದ ಉದಯಶಂಕರ್, ಮುನಿಅಂಜಿನಪ್ಪ, ಫಯಾಜ್, ಉರಟಅಗ್ರಹಾರ ಚೌಡರೆಡ್ಡಿ, ಶ್ರೀನಿವಾಸ್, ಶ್ರೀರಾಮ್, ಈರಣ್ಣ, ಮೈಲಾಂಡಹಳ್ಳಿ ಮುರಳಿ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ