ನಮ್ಮ ರೈತರು ಜಮೀನುಗಳನ್ನು ಕಳೆದುಕೊಂಡು ಹಾಳಾಗಿದ್ದಾರೆ, ಅಂಥ ರೈತರ ಮಕ್ಕಳಿಗೆ ಕಂಪನಿಗಳಲ್ಲಿ ನೆಲ ಹಾಗೂ ಶೌಚಾಲಯ ತೊಳೆಯುವ ಕೆಲಸ ಹಾಗೂ ವಾಚ್ ಮ್ಯಾನ್ ಕೆಲಸ ನೀಡಿದ್ದಾರೆ. ಹಾಗಾದರೆ ರೈತರ ಮಕ್ಕಳು ವಿದ್ಯಾಭ್ಯಾಸ ಮಾಡಿಲ್ವಾ? ಇಲ್ಲಿನ ಕೈಗಾರಿಕೆಗಳು ಸ್ಥಳೀಯರನ್ನು ಹನ್ನೊಂದು ತಿಂಗಳು ಕೆಲಸಕ್ಕೆ ಕರೆದುಕೊಂಡು ನಂತರ ತೆಗೆದುಹಾಕಿ ವಂಚಿಸಿದ್ದಾರೆ ಎಂದು ಆರೋಪಿಸಿದರು.
ಕೋಲಾರ: ನಾನು ರೈತರ ಪರವಾಗಿ, ಕ್ಷೇತ್ರದ ಜನರ ಪರವಾಗಿದ್ದೇನೆ. ಕೈಗಾರಿಕೆಗಳಿಗೆ ಜಮೀನು ಕೊಟ್ಟ ರೈತರ ಮಕ್ಕಳಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗ ನೀಡದೆ ವಂಚಿಸುವ ಕಂಪನಿಗಳ ಪರ ನಾನ್ಯಾಕಿರಬೇಕು ಎಂದು ಶಾಸಕ ಕೊತ್ತೂರು ಜಿ. ಮಂಜುನಾಥ್ ಹೇಳಿದರು.
ಇತ್ತೀಚೆಗೆ ತಾಲೂಕಿನ ವೇಮಗಲ್ ನಲ್ಲಿ ಹೆಲಿಕಾಪ್ಟರ್ ಜೋಡಣಾ ಘಟಕ ಉದ್ಘಾಟನೆಗೆ ತಮ್ಮನ್ನು ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂಘಿಸಿದ್ದರ ಕುರಿತು ಹೇಳಿಕೆ ನೀಡಿದ್ದ ಶಾಸಕ ಕೊತ್ತೂರು ಮಂಜುನಾಥ್ ಕ್ಷಮೆ ಕೋರಬೇಕೆಂದು ಬಿಜೆಪಿ, ಜೆಡಿಎಸ್ ಪಕ್ಷಗಳು ಒತ್ತಾಯಿಸಿದ್ದವು. ಈ ಕುರಿತು ಮಾಧ್ಯಮದವರೊಂದಿಗೆ ಶಾಸಕರು ಮಾತನಾಡಿ, ನಾನು ಕೈಗಾರಿಕೆಗಳ ಪರ ಇಲ್ಲ, ಕೋಲಾರ ಜಿಲ್ಲೆಯ ಜನರ ಹಾಗೂ ವಿದ್ಯಾವಂತ ಯುವಕರ ಪರವಾಗಿದ್ದೇನೆ. ಕೇಂದ್ರ ಸರ್ಕಾರದ ರಕ್ಷಣಾ ಸಚಿವರು ಬರುವ ಕಾರ್ಯಕ್ರಮಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಬರಬಾರದೆಂಬ ಉದ್ದೇಶವಿದ್ದರೆ ನಾವೇನು ಮಾಡಲು ಸಾಧ್ಯ. ನಾನು ನಿಜ ಹೇಳಿದ್ದೇನೆ, ಯಾರೋ ಹೇಳುತ್ತಾರೆ ಎಂದು ನಾನ್ಯಾಕೆ ಕ್ಷಮೆ ಕೋರಲಿ ಎಂದು ಕಿಡಿಕಾರಿದರು.
ನಮ್ಮ ರೈತರು ಜಮೀನುಗಳನ್ನು ಕಳೆದುಕೊಂಡು ಹಾಳಾಗಿದ್ದಾರೆ, ಅಂಥ ರೈತರ ಮಕ್ಕಳಿಗೆ ಕಂಪನಿಗಳಲ್ಲಿ ನೆಲ ಹಾಗೂ ಶೌಚಾಲಯ ತೊಳೆಯುವ ಕೆಲಸ ಹಾಗೂ ವಾಚ್ ಮ್ಯಾನ್ ಕೆಲಸ ನೀಡಿದ್ದಾರೆ. ಹಾಗಾದರೆ ರೈತರ ಮಕ್ಕಳು ವಿದ್ಯಾಭ್ಯಾಸ ಮಾಡಿಲ್ವಾ? ಇಲ್ಲಿನ ಕೈಗಾರಿಕೆಗಳು ಸ್ಥಳೀಯರನ್ನು ಹನ್ನೊಂದು ತಿಂಗಳು ಕೆಲಸಕ್ಕೆ ಕರೆದುಕೊಂಡು ನಂತರ ತೆಗೆದುಹಾಕಿ ವಂಚಿಸಿದ್ದಾರೆ ಎಂದು ಆರೋಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.