ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಬಿ.ಎ. ಹಾಗೂ ಬಿ.ಕಾಂ. ವಿದ್ಯಾರ್ಥಿನಿಯರಿಗೆ ವಿದ್ಯುನ್ಮಾನ ಆದಾಯ ತೆರಿಗೆ ಪಾವತಿ ಕುರಿತು ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಆದಾಯ ತೆರಿಗೆಯನ್ನು ಬ್ರಿಟಿಷ್ ಸರ್ಕಾರ ಮೊದಲ ಬಾರಿಗೆ ತಂದಿತು. 1961ರಲ್ಲಿ ಭಾರತ ದೇಶವು ಆದಾಯ ತೆರಿಗೆಯನ್ನು ಜಾರಿಗೆ ತಂದಿತು. ಇ ವಿದ್ಯುನ್ಮಾನ ಆದಾಯ ತೆರಿಗೆ ಪಾವತಿ ಪೂರ್ವದಲ್ಲಿ ಅರ್ಜಿ ನಮೂನೆಯಲ್ಲಿ ಪಾವತಿ ಮಾಡುತ್ತಿರುತ್ತೇವೆ. ಭಾರತ ದೇಶವು ಹೊಸ ಆರ್ಥಿಕ ನಮೂನೆಯಲ್ಲಿ ಪಾವತಿ ಜಾರಿಗೆ ತರಲಾಯಿತು. ಆಹಂತದಲ್ಲೂ ಸಹ ಬರಹ ರೂಪದಲ್ಲೇ ತೆರಿಗೆಯನ್ನು ಪಾವತಿಸುತ್ತಿರುತ್ತೇವೆ. 2006ರಲ್ಲಿ ವಿದ್ಯುನ್ಮಾನ ಆದಾಯ ತೆರಿಗೆಯನ್ನು ಭಾರತದಲ್ಲಿ ಜಾರಿಗೆ ತರಲಾಯಿತು. ತಂತ್ರಾಂಶವನ್ನು ಬಳಸಿ ಒಬ್ಬ ವ್ಯಕ್ತಿ ತನ್ನ ಆದಾಯವನ್ನು ಪಾವತಿಸುವುದನ್ನು ವಿದ್ಯುನ್ಮಾನ ಆದಾಯ ತೆರಿಗೆ ಎಂದು ಕರೆಯಬಹುದು. ಇಂದು ಭಾರತದಲ್ಲಿ ಸುಮಾರು ಎರಡು ಕೋಟಿ ಜನರು ಮಾತ್ರ ಆದಾಯ ತೆರಿಗೆಯನ್ನು ಪಾವತಿಸುತ್ತಿದ್ದಾರೆ ಎಂದರು.ಬರಹ ರೂಪದಲ್ಲಿರುವ ಆದಾಯ ತೆರಿಗೆ ಪಾವತಿ ಮತ್ತು ವಿದ್ಯುನ್ಮಾನ ತಂತ್ರಾಂಶದಲ್ಲಿ ಪಾವತಿಸುವಲ್ಲಿರುವ ವ್ಯತ್ಯಾಸವನ್ನು ತಿಳಿಸುತ್ತಾ ಕಾಗದ ರಹಿತ ಬಳಕೆ, ಜಗತ್ತಿನ ಯಾವುದೇ ಭಾಗದಲ್ಲಿ ಕೂತು ಆದಾಯ ಪಾವತಿಸಬಹುದು. ತಪ್ಪುಗಳು ಕಡಿಮೆ ಇರುತ್ತದೆ. ಈ ಹಿಂದೆ ಸಲ್ಲಿಸಿದ ತೆರಿಗೆ ಪಾವತಿಯ ದಾಖಲಾತಿಗಳು ಒಂದೇ ಕಡೆ ಲಭ್ಯವಾಗುತ್ತದೆ ಮತ್ತು ಸಮಯ ಉಳಿತಾಯವಾಗುತ್ತಿದೆ ಹಾಗೂ ಇದರಿಂದ ದೇಶದ ಒಟ್ಟು ಆದಾಯ ತೆರಿಗೆ ಪಾವತಿಸುವವರ ನಿಖರ ಮಾಹಿತಿ ಸರ್ಕಾರಕ್ಕೆ ಲಭ್ಯವಾಗುತ್ತದೆ. ವಿದ್ಯುನ್ಮಾನ ತೆರಿಗೆ ಪಾವತಿಯನ್ನು ಸ್ವಯಂ ಆದಾಯ ತೆರಿಗೆ ಮಧ್ಯವರ್ತಿ ಮೂಲಕ ಆದಾಯ ತೆರಿಗೆ ಪಾವತಿಸಬಹುದು. ಇವೆರಡರ ಫಲಿತಾಂಶವಾಗಿರುತ್ತದೆ. ವಿದ್ಯುಮಾನ ಪರಿಶೀಲನೆ ಪ್ರಮಾಣ ಪತ್ರ ಆದಾಯ ತೆರಿಗೆಯ ವಿಧಾನದ ನಿಯಮಗಳು ನಮೂನೆ-16ರಲ್ಲಿ ಆದಾಯ ತೆರಿಗೆಯನ್ನು ಪಾವತಿಸಬಹುದು. ತೆರಿಗೆ ವಿನಾಯಿತಿ, ನೇರ ತೆರಿಗೆ, ಅಪ್ರತ್ಯಕ್ಷ ತೆರಿಗೆಯನ್ನು ಕುರಿತು ಮಾಹಿತಿ ನೀಡಿದರು.
ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ. ಎಸ್. ಶಿವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ. ಪ್ರಸಾದ ಮೂರ್ತಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಎನ್.ಆರ್. ಸಿಂಧು, ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಕೆ. ರಂಜಿತಾ ಇದ್ದರು.