ಹುಬ್ಬೆ ಹುಣಸೆ ಜಲಾಶಯಕ್ಕೆ ಶಾಸಕ ಎಂ.ಆರ್. ಮಂಜುನಾಥ್ ಭೇಟಿ

KannadaprabhaNewsNetwork |  
Published : Sep 09, 2025, 01:00 AM IST
ಹುಬ್ಬೆ ಹುಣಸೆ ಜಲಾಶಯಕ್ಕೆ  ಶಾಸಕ ಎಂ.ಆರ್. ಮಂಜುನಾಥ್ ಭೇಟಿ | Kannada Prabha

ಸಾರಾಂಶ

ಹುಬ್ಬೆ ಹುಣಸೆ ಜಲಾಶಯದ ನೀರಾವರಿಯ ಯೋಜನೆಗೆ ಕಾವೇರಿ ನದಿಯಿಂದ 17 ಕಿಲೋಮೀಟರ್ ಪೈಪ್ಲೈನ್ ಅಳವಡಿಸಲು 18.5 ಕೋಟಿ ವೆಚ್ಚದಲ್ಲಿ ಸರ್ಕಾರಕ್ಕೆ ಹಣ ಬಿಡುಗಡೆಗೊಳಿಸುವಂತೆ ಪ್ರಸ್ತಾವನೆಯನ್ನು ಸಹ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರುಹುಬ್ಬೆ ಹುಣಸೆ ಜಲಾಶಯಕ್ಕೆ ಶಾಸಕ ಎಂ.ಆರ್. ಮಂಜುನಾಥ್ ಭೇಟಿ ನೀಡಿ ಒತ್ತುವರಿ ತೆರವು ಗಡಿರೇಖೆ ಪರಿಶೀಲನೆ ನಡೆಸಿದರು.

ತಾಲೂಕಿನ ಉದ್ದನೂರು ಗ್ರಾಮದ ಬಳಿ ಬರುವ ಹುಬ್ಬೆ ಉಣಸೆ ಜಲಾಶಯದ 132 ಎಕರೆ ಮುಳುಗಡೆ ಪ್ರದೇಶದಲ್ಲಿದ್ದ ಗಿಡಗಂಟಿಗಳು ಹಾಗೂ ಗಡಿ ರೇಖೆಯನ್ನು ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳ ಜಂಟಿ ಸರ್ವೆ ನಡೆಸಿ ಒತ್ತುವರಿ ತೆರವು ಕಾರ್ಯ ಪೂರ್ಣಗೊಂಡಿರುವ ಬಗ್ಗೆ ಶಾಸಕ ಎಂ.ಆರ್. ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನೀರಿನ ಸಂಗ್ರಹಣ ಸಾಮರ್ಥ್ಯ ಹೆಚ್ಚಿಸಲು ಕ್ರಮ:

ಮಳೆಗಾಲದಲ್ಲಿ ತಟ್ಟೆ ಹಳ್ಳ ತುಂಬಿ ಹರಿಯುವುದರಿಂದ ಈ ಹಿಂದೆ ನಿರ್ಮಾಣ ಮಾಡಲಾಗಿರುವ ಹುಬ್ಬೆ ಹುಣಸೆ ಜಲಾಶಯದ ನೀರಾವರಿಯ ಯೋಜನೆಗೆ ಕಾವೇರಿ ನದಿಯಿಂದ 17 ಕಿಲೋಮೀಟರ್ ಪೈಪ್ಲೈನ್ ಅಳವಡಿಸಲು 18.5 ಕೋಟಿ ವೆಚ್ಚದಲ್ಲಿ ಈಗಾಗಲೇ ನೀರಾವರಿ ಇಲಾಖೆ ಅಧಿಕಾರಿಗಳ ಮುಖಾಂತರ ಶಾಸಕ ಎಂ.ಆರ್. ಮಂಜುನಾಥ್ ಅಧಿಕಾರಿಗಳ ಜೊತೆ ಸಭೆ ನಡೆಸಿ ನೀರಾವರಿ ಯೋಜನೆಗೆ ಸರ್ಕಾರಕ್ಕೆ ಹಣ ಬಿಡುಗಡೆಗೊಳಿಸುವಂತೆ ಪ್ರಸ್ತಾವನೆಯನ್ನು ಸಹ ಸಲ್ಲಿಸಿದ್ದಾರೆ.

ರೈತರಿಗೆ ವರದಾನ:

ಹುಬ್ಬೆ ಹುಣಸೆ ಜಲಾಶಯದಲ್ಲಿರುವ ಮಣ್ಣನ್ನು ತೆಗೆದು ಜಲಾಶಯವನ್ನು ಅಳ ಮಾಡಲು ರೈತರು ತಮ್ಮ ಜಮೀನುಗಳಿಗೆ ಮಣ್ಣನ್ನು ಸಾಗಿಸಲು ಸಹ ಶಾಸಕ ಎಂ.ಆರ್. ಮಂಜುನಾಥ್ ನೀರಾವರಿ ಅಧಿಕಾರಿಗಳಿಗೆ ತಿಳಿಸಿ ಅನುಕೂಲ ಕಲ್ಪಿಸಿರುವುದರಿಂದ ಈ ಭಾಗದಲ್ಲಿ ದಿನನಿತ್ಯ ಹಲವಾರು ಟ್ರ್ಯಾಕ್ಟರ್ ಹಾಗೂ ಟಿಪ್ಪರ್‌ಗಳಲ್ಲಿ ರೈತರು ಜಮೀನುಗಳಿಗೆ ಮಣ್ಣನ್ನು ಸಾಕಿಸಲು ರೈತರಿಗೆ ವರದಾನವಾಗಿದೆ.

ಜಲಸಂಗ್ರಹಕ್ಕೆ ಒತ್ತು:

ಜಲಾಶಯದಲ್ಲಿರುವ ಗಿಡ ಗಂಟೆಗಳನ್ನು ಸಹ ತೆರವುಗೊಳಿಸಲಾಗುತ್ತಿದ್ದು, ಜೊತೆಗೆ ಒತ್ತುವರಿ ತೆರವು ಕಾರ್ಯ ಪೂರ್ಣಗೊಂಡಿತ್ತು. ಸುತ್ತಲೂ ಗಡಿ ರೇಖೆ ನಿರ್ಮಾಣ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಮಳೆಯಾದರೆ ತಟ್ಟೆಹಳ್ಳದಿಂದ ಹರಿದು ಬರುವ ನೀರಿನ ಮೂಲ ಜಲಾಶಯದಲ್ಲಿ ಭಾರಿ ಪ್ರಮಾಣದಲ್ಲಿ ನೀರನ್ನು ಸಂರಕ್ಷಿಸಲು ಸಹ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದ್ದು, ಇದರಿಂದಾಗಿ ಮುಂದಿನ ದಿನಗಳಲ್ಲಿ ನೀರಾವರಿ ಯೋಜನೆ ಶಾಶ್ವತ ಪರಿಹಾರ ನೀಡಲು ಈ ಭಾಗದ ಉದ್ದನೂರು ಹನೂರು ಸೇರಿದ ಸೇರಿದಂತೆ 900 ಹೆಕ್ಟರ್ ನೀರಾವರಿ ಪ್ರದೇಶಕ್ಕೆ ರೈತರಿಗೆ ನೀರಾವರಿ ಯೋಜನೆ ಕಲ್ಪಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಂಡಿರುವುದರಿಂದ ನೀರನ್ನು ಹರಿಸಲು ಎಲ್ಲಾ ರೀತಿಯಲ್ಲಿಯೂ ಸಹ ಕ್ರಮ ಕೈಗೊಳ್ಳಲಾಗಿದೆ ಎಂದರು.7 ಕಿ.ಮೀ ನಡೆದು ಪರಿಶೀಲಿಸಿದ ಶಾಸಕ:

ರಾಮನಗುಡ್ಡೆ ಕೆರೆಗೆ ನೀರು ಬರುವ ಮಾರ್ಗವನ್ನು ಇತ್ತೀಚೆಗೆ ಹಿಟಾಚಿಗಳ ಮುಖಾಂತರ ಸ್ವಚ್ಛಗೊಳಿಸಿ ನೀರು ಬರಲು ರಾಡಿ ಮತ್ತು ಗಿಡಗಂಟಿಗಳ ತೆರವುಗೊಳಿಸಲಾಗಿತ್ತು. ಶಾಸಕ ಎಂ.ಆರ್. ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿ ಕೆರೆಯಿಂದ ಬೂದು ಬಾಳು ಗ್ರಾಮದವರೆಗೆ ನೀರಿನ ಮಾರ್ಗ ಸ್ವಚ್ಛಗೊಳಿಸಿರುವ ಬಗ್ಗೆ ಪರಿಶೀಲಿಸಿ ಕಾಲುನಡಿಗೆಯಲ್ಲಿಯೇ 7 ಕಿ.ಮೀ ನಡೆದು ಕಾವೇರಿ ನದಿಯಿಂದ ನೀರು ಬರುವ ಡೆಲಿವರಿ ಪಾಯಿಂಟ್‌ವರಗೆ ತೆರಳಿ ಪರಿಶೀಲಿಸಿದರು ಇದೇ ವೇಳೆಯಲ್ಲಿ ವಿವಿಧ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

8ಸಿಎಚ್ಎನ್‌13 ಹನೂರು ಹುಬ್ಬೆ ಹುಣಸೆ ಕೆರೆ ಓತ್ತುವರಿ ತೆರವುಗೊಳಿಸಿರುವ ಬಗ್ಗೆ ಪರಿಶೀಲನೆ ನಡೆಸಿದ ಶಾಸಕ ಎಂ.ಆರ್, ಮಂಜುನಾಥ್.

8ಸಿಎಚ್ಎನ್‌14 ಹನೂರು ತಾಲೂಕಿನ ರಾಮನಗುಡ್ಡ ಕೆರೆಯಿಂದ ಬೂದುಬಾಳು ಗ್ರಾಮದ ಪೈಪ್ಲೈನ್ ನೀರಿನ ಡೆಲಿವರಿ ಪಾಯಿಂಟ್ ವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಪರಿಶೀಲಿಸಿದ ಶಾಸಕ ಎಂ.ಆರ್‌. ಮಂಜುನಾಥ್‌.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''