ಆತ್ಮ ರಕ್ಷಣೆಗಾಗಿ ಮಾತ್ರ ಬಂದೂಕು ಬಳಸಿ: ಎಸ್ಪಿ ಡಾ. ಕವಿತಾ

KannadaprabhaNewsNetwork |  
Published : Sep 09, 2025, 01:00 AM IST
ಆತ್ಮ ರಕ್ಷಣೆಗಾಗಿ ಮಾತ್ರ ಬಂದೂಕು ಬಳಸಿ ಎಸ್ಪಿ ಡಾ. ಕವಿತಾ  | Kannada Prabha

ಸಾರಾಂಶ

ಇಂದು ಐದು ದಿನಗಳ ಕಾಲ ನೀಡಲಾಗುತ್ತಿರುವ ತರಬೇತಿಯ ಸದ್ಬಳಕೆ ಮಾಡಿಕೊಳ್ಳಿ ಬಂದೂಕು ಇಟ್ಟುಕೊಳ್ಳುವುದರಿಂದ ಯಾವುದೆ ಸಂದಭ೯ವಾದರೂ ಸಹಾ ಅದನ್ನು ಎದುರಿಸುವೆ ಎಂಬ ಆತ್ಮಸ್ಥೈರ್ಯ ಬರಲಿದೆ,

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಬಂದೂಕು ತರಬೇತಿ ಪಡೆದರೆ ಸಾಲದು ಯಾವ ಉದ್ದೇಶಗಳಿಗಾಗಿ ಬಂದೂಕು ಬಳಸಬೇಕೆಂಬ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತಾಗಬೇಕು, ಆತ್ಮ ರಕ್ಷಣೆಗಾಗಿ ಮಾತ್ರ ಬಂದೂಕು ಬಳಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ.ಕವಿತಾ ಹೇಳಿದರು.

ಅವರು ಮಹದೇಶ್ವರ ಕಾಲೇಜು ಕ್ರೀಡಾಂಗಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಅಯೋಜಿಸಲಾಗಿದ್ದ ನಾಗರಿಕ ಬಂದೂಕು ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಇಂದು ಐದು ದಿನಗಳ ಕಾಲ ನೀಡಲಾಗುತ್ತಿರುವ ತರಬೇತಿಯ ಸದ್ಬಳಕೆ ಮಾಡಿಕೊಳ್ಳಿ ಬಂದೂಕು ಇಟ್ಟುಕೊಳ್ಳುವುದರಿಂದ ಯಾವುದೆ ಸಂದಭ೯ವಾದರೂ ಸಹಾ ಅದನ್ನು ಎದುರಿಸುವೆ ಎಂಬ ಆತ್ಮಸ್ಥೈರ್ಯ ಬರಲಿದೆ, ಹಾಗಾಗಿ ಯಾವುದೇ ಸ್ಥಿತಿಯಲ್ಲೂ ನನ್ನ ಬಳಿ ಬಂದೂಕು ಇದೆ. ಎಂತಹ ಕ್ಲಿಷ್ಟಕರ ಸಂದರ್ಭ ಬಂದರೂ ಅದನ್ನ ನಿಭಾಯಿಸಬಲ್ಲೆ ಎಂಬ ಆತ್ಮಸ್ಥೈರ್ಯ ಮೂಡಿಸಲು ಬಂದೂಕು ಶಿಬಿರ ಸಹಕಾರಿಯಾಗಲಿದೆ. ಈಹಿನ್ನೆಲೆ ಬಂದೂಕು ಬಳಸುವ ವೇಳೆ ಜಾಗೖತರಾಗಿ, ಯೋಚಿಸಿ, ಆತ್ಮರಕ್ಷಣೆಗಾಗಿ ಮಾತ್ರ ಬಳಕೆ ಮಾಡಿ, ಪ್ರತಿಯೊಂದು ಜೀವವೂ ಅಮೂಲ್ಯ, ಅಂತಹ ಜೀವ ರಕ್ಷಣೆಗಾಗಿಯೇ ಕ್ಲಿಷ್ಟಕರ ಸಂದರ್ಭದಲ್ಲಿ ಮಾತ್ರ ಬಂದೂಕು ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಬಂದೂಕು ತರಬೇತಿ ಪಡೆದವರು ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಮೂಲಕ ಯಾವ ರೀತಿ ಬಳಕೆ ಮಾಡಬೇಕು, ಯಾವ ಸಂದರ್ಭದಲ್ಲಿ ಬಳಸಬೇಕು ಎಂಬಿತ್ಯಾದಿ ನಿಯಮಗಳನ್ನು ಪಾಲಿಸುವಂತಾಗಬೇಕು, ಪೊಲೀಸ್ ಇಲಾಖೆಯಲ್ಲೂ ಸಹಾ ಮೊದಲು ಬಂದೂಕು ತರಬೇತಿ ನೀಡಲಾಗುತ್ತೆ. ಅದರ ಬಳಿಕ ಬಳಸುವ ರೀತಿ ಮರೆಯಬಾರದೆಂಬ ಕಾರಣಕ್ಕೆ ವರುಷದಲ್ಲಿ ಎರಡು ಬಾರಿ ಪುನಃ ಬಳಕೆ ಕುರಿತು ತರಬೇತಿ ನಡೆಸಿ ಪರೀಕ್ಷಿಸಲಾಗುತ್ತೆ. ಈ ಹಿನ್ನೆಲೆ ತರಬೇತಿ ಪಡೆದವರು ಇಲಾಖಾ ನಿಯಮ ಪಾಲಿಸುವ ಮೂಲಕ ಕಾನೂನನ್ನೂ ಗೌರವಿಸುವಂತಾಗಬೇಕು, ಬಂದೂಕು ಬಳಕೆ ವೇಳೆ ಸದಾಕಾಲ ಎಚ್ಚರಿಕೆಯಿಂದರಬೇಕು, ಸ್ವಚ್ಛತೆ ವೇಳೆ ಅವಘಡವಾಗುವ ಸಂಭವವೂ ಇದ್ದು ಎಚ್ಚರಿಕೆಯಿಂದ ನಿಬಾಯಿಸಬೇಕು ಎಂದರು.

ಈ ಸಂದರ್ಭದಲ್ಲಿ ಉಪವಿಭಾಗ ಪೊಲೀಸ್ ಅಧೀಕ್ಷಕ ಧರ್ಮೇಂದ್ರ, ವೃತ್ತ ನಿರೀಕ್ಷಕ ಶಿವಮಾದಯ್ಯ, ಜಿಲ್ಲಾ ಮೀಸಲು ಪೊಲೀಸ್ ಡಿವೈಎಸ್ಪಿ ಸೋಮಣ್ಣ , ಜಿಲ್ಲಾ ಮೀಸಲು ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್ ಇನ್ನಿತರಿದ್ದರು.

----- 8ಕೆಜಿಎಲ್ 19 ಕೊಳ್ಳೇಗಾಲದಲ್ಲಿ ಅಯೋಜಿಸಿದ್ದ ನಾಗರೀಕ ಬಂದೂಕು ತರಬೇತಿ ಶಿಬಿರಕ್ಕೆ ಎಸ್ಪಿ ಡಾ. ಕವಿತಾ ಅವರು ಚಾಲನೆ ನೀಡಿದರು ಡಿವೈಎಸ್ಪಿ ಧಮೇಂದ್ರ, ಸೋಮಣ್ಣ, ವೖತ್ತ ನಿರೀಕ್ಷಕ ಶಿವಮಾದಯ್ಯ, ಸತೀಶ್ ಇನ್ನಿತರಿದ್ದರು.

---

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು