ಭುವನೇಶ್ವರಿ ದೇವಿ ಭಾವಚಿತ್ರದ ಶೋಭಾಯಾತ್ರೆಗೆ ಶಾಸಕ ಮಾನೆ ಚಾಲನೆ

KannadaprabhaNewsNetwork |  
Published : Oct 12, 2026, 02:15 AM IST
ಹಾನಗಲ್‌ನಲ್ಲಿ ಇತಿಹಾಸ ಪ್ರಸಿದ್ಧ ನಾಡಹಬ್ಬದ ಹಿನ್ನೆಲೆಯಲ್ಲಿ ಕನ್ನಡಾಂಬೆ ಭುವನೇಶ್ವರಿ ದೇವಿಯ ಭಾವಚಿತ್ರದ ಶೋಭಾಯಾತ್ರೆಗೆ ಶಾಸಕ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ ಮಾನೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಹಾನಗಲ್ಲಿನ ೮೯ನೇ ನಾಡಹಬ್ಬದ ಭುವನೇಶ್ವರಿ ದೇವಿಯ ಭಾವಚಿತ್ರದ ಶೋಭಾಯಾತ್ರೆಗೆ ಭಾನುವಾರ ಶಾಸಕ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ ಮಾನೆ ಸಾಂಪ್ರದಾಯಿಕ ಚಾಲನೆ ನೀಡಿದರು.

ಹಾನಗಲ್ಲ: ಹಾನಗಲ್ಲಿನ ೮೯ನೇ ನಾಡಹಬ್ಬದ ಭುವನೇಶ್ವರಿ ದೇವಿಯ ಭಾವಚಿತ್ರದ ಶೋಭಾಯಾತ್ರೆಗೆ ಭಾನುವಾರ ಶಾಸಕ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ ಮಾನೆ ಸಾಂಪ್ರದಾಯಿಕ ಚಾಲನೆ ನೀಡಿದರು.

ಇಲ್ಲಿನ ತಾರಕೇಶ್ವರ ದೇವಸ್ಥಾನದ ಮುಂಭಾಗದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶೋಭಾಯಾತ್ರೆ ಉದ್ಘಾಟಿಸುವ ಮೂಲಕ ಕನ್ನಡ ನಾಡು, ನುಡಿ, ಸಂಸ್ಕೃತಿಯ ಅಭಿಮಾನ ಸಾರುವ ನಾಡಹಬ್ಬಕ್ಕೆ ಅಧಿಕೃತ ಚಾಲನೆ ನೀಡಿದರು. ಡೊಳ್ಳು ಸೇರಿದಂತೆ ನಾನಾ ಕಲಾತಂಡಗಳು ಶೋಭಾಯಾತ್ರೆಯ ಕಳೆ ಹೆಚ್ಚಿಸಿದ್ದವು. ಕಿತ್ತೂರು ಚೆನ್ನಮ್ಮ ರಸ್ತೆ ಮಾರ್ಗವಾಗಿ ಸಾಗಿದ ಶೋಭಾಯಾತ್ರೆ ಜನತಾ ಬಾಲಕಿಯರ ಪ್ರೌಢಶಾಲೆಯಲ್ಲಿನ ನಾಡಹಬ್ಬದ ವೇದಿಕೆ ತಲುಪಿ ತೆರೆ ತಂಡಿತು. ಬಳಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಾಡದೇವಿ ಭುವನೇಶ್ವರಿ ಮೂರ್ತಿಯ ಪ್ರತಿಷ್ಠಾಪನೆ ಜರುಗಿತು.

ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ನಾಗಪ್ಪ ಸವದತ್ತಿ, ಸಾಹಿತಿ ಉದಯ ನಾಸಿಕ, ಪ್ರಮುಖರಾದ ಕೆ.ಎಲ್. ದೇಶಪಾಂಡೆ, ಲಕ್ಷ್ಮಣ ಹಾನಗಲ್, ರಾಮಕೃಷ್ಣ ಸುಗಂಧಿ, ಗಿರೀಶ ದೇಶಪಾಂಡೆ, ಕೃಷ್ಣ ಪೂಜಾರ, ರವಿಚಂದ್ರ ಪುರೋಹಿತ್, ರವಿಬಾಬು ಪೂಜಾರ, ಎಸ್.ವಿ. ಹೊಸಮನಿ, ಸಂಜು ಬೇಂದ್ರೆ, ಆದರ್ಶ ಶೆಟ್ಟಿ, ಉಮೇಶ ಗೌಳಿ, ಮಹೇಶ ಪವಾಡಿ, ರಾಜಕುಮಾರ ಶಿರಪಂಥಿ, ವೀಣಾ ಗುಡಿ, ಮಮತಾ ಆರೆಗೊಪ್ಪ, ಷಣ್ಮುಖಪ್ಪ ಮುಚ್ಚಂಡಿ, ನಾಗರಾಜ ಅಡಿಗ, ಸವಿತಾ ಉದಾಸಿ, ರವಿಕಿರಣ ಪಾಟೀಲ, ಎಸ್.ಆರ್. ತುಪ್ಪದ, ಬಸವರಾಜ ಗಾಳಪೂಜಿ, ಪ್ರಭು ಹೂಗಾರ, ವೆಂಕಟೇಶ ಕಾಟೇಕರ, ಪ್ರಶಾಂತ ಪೂಜಾರ, ಶಿವಯೋಗಿ ಅರಳೆಲೆಮಠ, ರವಿ ಪೋತದಾರ, ಜಗದೀಶ ಕೊಂಡೋಜಿ, ಜಯಶ್ರೀ ದೇಶಪಾಂಡೆ, ಶೋಭಾ ಉಗ್ರಣ್ಣನವರ, ತಮ್ಮಣ್ಣ ಆರೆಗೊಪ್ಪ ಮೊದಲಾದವರು ಈ ಸಂದರ್ಭದಲ್ಲಿದ್ದರು.

ಮೈಸೂರು ದಸರೆಯ ವೈಭವ ನೆನಪಿಸುವಂತೆ ನಮ್ಮ ಹಿರಿಯರು ಹಾನಗಲ್ ನಾಡಹಬ್ಬಕ್ಕೆ ವಿಶೇಷ ಕಳೆ, ಮೆರಗು ಮತ್ತು ಗೌರವ ತಂದುಕೊಟ್ಟಿದ್ದಾರೆ. ಹಾನಗಲ್ ನಾಡಹಬ್ಬದ ಕೀರ್ತಿ ನಾಡಿನಾದ್ಯಂತ ಮೊಳಗಲಿ. ಕನ್ನಡದ ಕಂಪು ಮನೆ, ಮನಗಳಲ್ಲಿಯೂ ಹರಡಲಿ. ನಾಡಾಭಿಮಾನ ಮತ್ತಷ್ಟು ಗಟ್ಟಿಗೊಳಿಸುವ ಕೆಲಸ ನಾಡಹಬ್ಬದಲ್ಲಿ ನಡೆಯಲಿ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಕಾವ್ಯಕ್ಕೆ ಹೊಸ ಹೊಳಪು ತಂದ ಕವಿ ಬೇಂದ್ರೆ: ಡಾ. ಶಿವಪ್ಪ
ದಸರಾ ಉತ್ಸವ: ದುರ್ಗಾದೌಡ ಕಾರ್ಯಕ್ರಮಕ್ಕೆ ಚಾಲನೆ