ಹಾಸ್ಟೆಲ್ ವಿದ್ಯಾರ್ಥಿಗಳೊಂದಿಗೆ ಉಪಾಹಾರ ಸೇವಿಸಿದ ಶಾಸಕ ಮಾನೆ

KannadaprabhaNewsNetwork |  
Published : Mar 01, 2025, 01:04 AM IST
ಫೋಟೊ: 28ಎಚ್‌ಎನ್‌ಎಲ್3 | Kannada Prabha

ಸಾರಾಂಶ

ಹಾಸ್ಟೆಲನ ಅಡುಗೆ ಕೊಠಡಿಗೆ ಭೇಟಿ ನೀಡಿದ ಶಾಸಕ ಶ್ರೀನಿವಾಸ ಮಾನೆ ಅವರು ರುಚಿ, ಶುಚಿ ಊಟಕ್ಕೆ ಗಮನ ನೀಡುವಂತೆ ಅಡುಗೆ ಸಿಬ್ಬಂದಿಗೆ ಸೂಚಿಸಿದರು.

ಹಾನಗಲ್ಲ: ಶುಕ್ರವಾರ ಇಲ್ಲಿನ ನವನಗರದ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಶಾಸಕ ಶ್ರೀನಿವಾಸ ಮಾನೆ ಅವರು ಉಪಹಾರ ಸೇವಿಸಿ, ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.ಈ ದಿನದ ವಿದ್ಯಾರ್ಥಿಗಳ ಉಪಾಹಾರವಾದ ಟೊಮೇಟೊ ಬಾತ್, ಬುಂದಿ ಲಾಡು, ಖಾರಾ, ಬಾಳೆಹಣ್ಣನ್ನು ವಿದ್ಯಾರ್ಥಿಗಳೊಂದಿಗೆ ಸೇವಿಸುತ್ತಲೇ ಶಾಸಕ ಮಾನೆ ಅವರು ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳ ಪಾಠ ಮಾಡಿದರು. ಇದೇ ಸಂದರ್ಭದಲ್ಲಿ ಅಡುಗೆ ಕೊಠಡಿಗೆ ಭೇಟಿ ನೀಡಿ ರುಚಿ, ಶುಚಿ ಊಟಕ್ಕೆ ಗಮನ ನೀಡುವಂತೆ ಅಡುಗೆ ಸಿಬ್ಬಂದಿಗೆ ಸೂಚಿಸಿದರು. ನಿಲಯದಲ್ಲಿನ ನಾನಾ ವ್ಯವಸ್ಥೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ವಿದ್ಯಾರ್ಥಿಗಳು ಕೂಡ ವಸತಿನಿಲಯಗಳನ್ನು ಶುಚಿಯಾಗಿಡುವಲ್ಲಿ ಕಾಳಜಿ ವಹಿಸಬೇಕು. ಶುಚಿತ್ವಕ್ಕೆ ಕೆಲಸದವರಿದ್ದಾರೆ ಎಂದು ಮನಬಂದಂತೆ ಕಸ ಕಡ್ಡಿ ಹರಡುವುದು ಬೇಡ. ನಿಮ್ಮ ಸಮಸ್ಯೆಗಳಿಗೆ ಕೂಡಲೇ ವಸತಿನಿಲಯದ ಮೇಲ್ವಿಚಾರಕರನ್ನು ಭೇಟಿ ಮಾಡಿ ಪರಿಹರಿಸಿಕೊಳ್ಳಿ. ಉತ್ತಮ ಅಭ್ಯಾಸ ಮಾಡಿ ಉತ್ತಮ ಫಲಿತಾಂಶ ನೀಡಿ ಬದುಕು ರೂಪಿಸಿಕೊಳ್ಳುವತ್ತ ಚಿತ್ತ ಹರಿಸಿ. ನಿಮ್ಮ ಪಾಲಕರ ನಿರೀಕ್ಷೆಯನ್ನು ಹುಸಿಯಾಗಿಸಬೇಡಿ ಎಂದು ಸಲಹೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗಂಗಮ್ಮ ಹಿರೇಮಠ, ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಮಾಜಿ ಅಧ್ಯಕ್ಷೆ ಮಮತಾ ಆರೆಗೊಪ್ಪ, ಸದಸ್ಯ ಪ್ರಸಾದ ಗೌಡ, ನಿಲಯಪಾಲಕ ಭೀಮಪ್ಪ ಬಿ., ಸುರೇಶ ನಾಗಣ್ಣನವರ, ಉಮೇಶ ಮಾಳಗಿ ಇದ್ದರು.ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಮನವಿ

ರಾಣಿಬೆನ್ನೂರು: ಇಲ್ಲಿಯ ನಗರಸಭೆಯ ಪ್ರೌಢಶಾಲೆಗೆ ಶಿಕ್ಷಕರನ್ನು ನೇಮಿಸುವಂತೆ ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಾಲಾ ಹಿತರಕ್ಷಣಾ ಸಮಿತಿ ವತಿಯಿಂದ ನಗರಸಭೆ ಅಧ್ಯಕ್ಷೆ ಚಂಪಾ ಬಿಸಲಹಳ್ಳಿ ಅವರಿಗೆ ಮನವಿ ಸಲ್ಲಿಸಿದರು.ಶಾಲಾ ಭೌತಿಕ ಅಭಿವೃದ್ಧಿಗಾಗಿ ನಗರಸಭೆ ವತಿಯಿಂದ ₹30 ಲಕ್ಷ ಮಂಜೂರು ಮಾಡಿದ್ದು ಸ್ವಾಗತಾರ್ಹವಾಗಿದೆ. ಇದರಿಂದ ಶಾಲೆಯಲ್ಲಿ ಮೂಲ ಸೌಕರ್ಯ ಒದಗಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಶಾಲೆಗೆ ಗೌರವ ಶಿಕ್ಷಕರನ್ನು ನೇಮಿಸಿ ಮಕ್ಕಳ ಶಿಕ್ಷಣ ಸಹಕಾರ ಒದಗಿಸಿದಂತೆ ಆಗುತ್ತದೆ. ಹೀಗಾಗಿ ಸೂಕ್ತ ಕ್ರಮ ಜರುಗಿಸಬೇಕು ಎಂದರು.

ಪ್ರೌಢಶಾಲಾ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಈಶ್ವರ ಹಾವನೂರ, ಕಾರ್ಯದರ್ಶಿ ವಿ.ವೀ. ಹರಪನಹಳ್ಳಿ, ಡಾ. ಎಸ್.ಎಲ್. ಪವಾರ, ಗಂಗಮ್ಮ ಹಾವನೂರ, ನೀಲಕಂಠಪ್ಪ ಕುಸಗೂರ, ಅಮರನಾಥ ಭೂತೆ, ಮನೋಹರ ಮೆಹರವಾಡೆ, ಪ್ರಭುಸ್ವಾಮಿ ಕರ್ಜಗಿಮಠ, ರುದ್ರಪ್ಪ ಮಾಳೆನಹಳ್ಳಿ, ಹಾಲಗೇರಿ, ಚಂದ್ರಣ್ಣ ರಾಮಾಳದ, ಪರಮೇಶ ಕರೆತಿಮ್ಮಣ್ಣವರ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''