ಕನ್ನಡಪ್ರಭ ವಾರ್ತೆ ಕಾರ್ಕಳ
ಈ ಪ್ರದೇಶದಲ್ಲಿ ವಾಸು ಮಲೆಕುಡಿಯ ಕುಟುಂಬ ಸೇರಿದಂತೆ ಒಟ್ಟು ಮೂರು ಕುಟುಂಬಗಳು ವಾಸಿಸುತ್ತಿವೆ.
ಹೆಬ್ರಿ ತಾಲೂಕಿನ ಮುನಿಯಾಲು ಗ್ರಾ.ಪಂ ವ್ಯಾಪ್ತಿಯ ನಕ್ಸಲ್ ಪೀಡಿತ ಪ್ರದೇಶವಾದ ಮುಟ್ಲುಪಾಡಿಯಿಂದ ಸುಮಾರು ನಾಲ್ಕು ಮೀ ದೂರದಲ್ಲಿ ದಟ್ಟಕಾಡಿನ ನಡುವೆ ಮೊರಂಟೆಬೈಲು ಎಂಬ ಪ್ರದೇಶವಿದೆ. ಶಾಲೆಗೆ ಹೋಗಬೇಕೆಂದರೆ ನಿತ್ಯ ಎಂಟು ಕಿ.ಮೀ. ಸಾಗಿಯೆ ಮುಟ್ಲುಪಾಡಿ ಶಾಲೆಗೆ ಬರಬೇಕು. ನಾಲ್ವರು ವಿದ್ಯಾರ್ಥಿಗಳು ಶಾಲೆಗೆ ಹೋಗುತಿದ್ದಾರೆ. ಕಾಡುಪ್ರಾಣಿಗಳ ಉಪಟಳ ಸೇರಿದಂತೆ ಓರ್ವ ಅನಾರೋಗ್ಯ ಅಂಗವೈಕಲ್ಯ ಪೀಡಿತ ಯುವತಿಯೂ ಇದ್ದಾಳೆ. ಯುವತಿಯ ತಂದೆ ರಾಜು ಮಲೆಕುಡಿಯ ಅನಾರೋಗ್ಯದಿಂದ ಬಳಲುತಿದ್ದಾರೆ. ಚಿಕಿತ್ಸೆಗಾಗಿ ಅವರನ್ನು ಜೋಳಿಗೆಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬರಬೈಕಾದ ಪರಿಸ್ಥಿ ನಿರ್ಮಾಣವಾಗಿತ್ತು.ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿ ವಿ. ಸುನಿಲ್ ಕುಮಾರ್ ಅವರ ಮನವಿ ಮೇರೆಗೆ ರಸ್ತೆಯ ನಿರ್ಮಾಣದ ವಿಚಾರವು ಪ್ರಸ್ತಾವನೆ ಬಂದಿತ್ತು. ತಕ್ಷಣ ಸ್ಪಂದಿಸಿದ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಶಿವರಾಂ ಬಾಬು ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲಿಸಿ ಸುಮಾರು 4 ಕಿ.ಮೀ. ಉದ್ದದ ಗಸ್ತು ರಸ್ತೆ ನಿರ್ಮಿಸಿದ್ದಾರೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅನುಕೂಲವಾದಂತಾಗಿದೆ.
ವಾಸು ಮಲೆಕುಡಿಯ ಕುಟುಂಬದ ಶತಮಾನದ ಹೋರಾಟವಾಗಿದೆ. ಈ ರಸ್ತೆ ನಿರ್ಮಾಣ ಮಾಡಲು ಗ್ರಾಮಸಭೆ, ತಾಲೂಕು ಮಟ್ಟದ ಅಹವಾಲು ಸಭೆಗಳಲ್ಲಿ ಅನೇಕ ಬಾರಿ ಮನವಿ ನೀಡಿದ್ದರು ಫಲಪ್ರದ ವಾಗಿರಲಿಲ್ಲ. ಆದರೆ ಬಳಿಕ ವನ್ಯಜೀವಿ ವಿಭಾಗ ವಾದ ಬಳಿಕವೂ ರಸ್ತೆ ನಿರ್ಮಾಣ ದ ಕನಸಾಗಿಯೆ ಉಳಿಯಿತು. ಇಲ್ಲಿ ನಕ್ಸಲ್ ಚಟುವಟಿಕೆ ಅರಂಭವಾದ ಬಳಿಕ ರಸ್ತೆ ನಿರ್ಮಾಣ ಮೂಲೆಗುಂಪಾಯಿತು.
ಭೇಟಿ ಸಂದರ್ಭ ಸುನಿಲ್ ಕುಮಾರ್ ಮಲೆಕುಡಿಯ ಕುಟುಂಬಗಳ ಜೊತೆ ತಿಂಡಿ ಸವಿದರು.