ಆರ್‌ಎಸ್ಎಸ್‌ ಶತಮಾನೋತ್ಸವಕ್ಕೆ ಶುಭಕೋರಿದ ಶಾಸಕ ಮಂಜು

KannadaprabhaNewsNetwork |  
Published : Oct 27, 2025, 12:00 AM IST
26ಎಚ್ಎಸ್ಎನ್12 : ರಾಮನಾಥಪುರದಲ್ಲಿ ನಡೆದ  ಅರ್.ಎಸ್.ಎಸ್. ಶತಮಾನೋತ್ಸವದ ಪಥಸಂಚಲನಕ್ಕೆ ಶಾಸಕರು ಎ. ಮಂಜು ಶುಭ ಕೋರಿದರು. | Kannada Prabha

ಸಾರಾಂಶ

ರಾಮನಾಥಪುರದ ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ಮುಂಭಾಗದಿಂದ ನೂರಾರು ಸ್ವಯಂ ಸೇವಕರು ತಾಯಿ ಭಾರತಾಂಬೆಗೆ ಪೂಜೆ ಸಲ್ಲಿಸಿ ಪಥ ಸಂಚಲನ ಅರಂಭಿಸಿದರು. ನಂತರ ರಾಮನಾಥಪುರ ದೇವಾಲಯದ ರಸ್ತೆ, ಕೆ.ಇ.ಬಿ. ರಸ್ತೆ, ಕೋಟವಾಳು ರಸ್ತೆ ಮುಂತಾದ ಕಡೆಗಳಲ್ಲಿ ಶತಮಾನೋತ್ಸವದ ಪ್ರಯುಕ್ತ ಪಥಸಂಚಲದ ಕಾರ್ಯಕ್ರಮ ಇಲ್ಲಿಯ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಪಟ್ಟಾಭಿರಾಮ ಪೌಢಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರನೇ ವರ್ಷದ ಅಚರಣೆ ಹಿನ್ನೆಲೆಯಲ್ಲಿ ಗಣವೇಷಧಾರಿಗಳ, ಪಥವೇಷಧಾರಿಗಳ ಪಥಸಂಚಲನ ಪಟ್ಟಣದಲ್ಲಿ ಸಂಚಲವನ್ನೇ ಸೃಷ್ಠಿಸಿತು.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಹಿಂದೂ ಪರಂಪರೆ ಮತ್ತು ಸನಾತನ ಸಂಸ್ಕೃತಿಯ ರಕ್ಷಣೆ ಹಾಗೂ ಹಿಂದೂ ಸಮಾಜದ ಸಾಂಸ್ಕೃತಿಕ ಪುನರಜ್ಜೀವನಕ್ಜಾಗಿ ಆರ್‌ಎಸ್ಎಸ್‌ ಶ್ರಮಿಸುತ್ತಿದೆ. ಸಮಾಜದಲ್ಲಿ ಉತ್ತಮ ಕಾರ್ಯ ಮಾಡುತ್ತಿರುವುದಕ್ಕೆ ಮಾಜಿ ಸಚಿವರು ಹಾಗೂ ಶಾಸಕ ಎ. ಮಂಜು ಶುಭಕೋರಿದರು.

ರಾಮನಾಥಪುರದ ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ಮುಂಭಾಗದಿಂದ ನೂರಾರು ಸ್ವಯಂ ಸೇವಕರು ತಾಯಿ ಭಾರತಾಂಬೆಗೆ ಪೂಜೆ ಸಲ್ಲಿಸಿ ಪಥ ಸಂಚಲನ ಅರಂಭಿಸಿದರು. ನಂತರ ರಾಮನಾಥಪುರ ದೇವಾಲಯದ ರಸ್ತೆ, ಕೆ.ಇ.ಬಿ. ರಸ್ತೆ, ಕೋಟವಾಳು ರಸ್ತೆ ಮುಂತಾದ ಕಡೆಗಳಲ್ಲಿ ಶತಮಾನೋತ್ಸವದ ಪ್ರಯುಕ್ತ ಪಥಸಂಚಲದ ಕಾರ್ಯಕ್ರಮ ಇಲ್ಲಿಯ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಪಟ್ಟಾಭಿರಾಮ ಪೌಢಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರನೇ ವರ್ಷದ ಅಚರಣೆ ಹಿನ್ನೆಲೆಯಲ್ಲಿ ಗಣವೇಷಧಾರಿಗಳ, ಪಥವೇಷಧಾರಿಗಳ ಪಥಸಂಚಲನ ಪಟ್ಟಣದಲ್ಲಿ ಸಂಚಲವನ್ನೇ ಸೃಷ್ಠಿಸಿತು. ನೂರಾರು ಯುವಕರು, ಮಕ್ಕಳು, ಹಿರಿಯರು ಗಣವೇಷಧಾರಿಗಳಾಗಿ ಆಗಮಿಸಿ ಪಥ ಸಂಚಲನಕ್ಕೆ ಕಳೆ ತಂದುಕೊಟ್ಟರು. ಪಥಸಂಚಲನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಅರ್.ಎಸ್. ನರಸಿಂಹಮೂರ್ತಿ, ಆರ್‌. ಕೆ. ಶ್ರೀನಿವಾಸ್ ಅಯ್ಯಂಗಾರ್‌ ಶ್ರೀನಿಧಿ, ಸ್ವಯಂ ಸೇವಕರಾದ ಶ್ರೀ ಸೋಮಶೇಖರ, ಸಿಬಹಳ್ಳಿ, ನಾಗರಾಜು ಕೊಣನೂರು, ದಿಲೀಪ್ ರಾಮನಾಥಪುರ, ಕಾರ್ತಿಕ್ ಹಾಸನ ಮುಂತಾದವರು ಭಾಗವಹಿಸಿದ್ದರು.

ಅರಕಲಗೂಡು ತಾಲೂಕು ವೃತ್ತ ನಿರೀಕ್ಷಕರು ಕೆ.ಎಂ. ವಸಂತ- ಕೊಣನೂರು ಆರಕ್ಷಕ ಉಪ ನಿರೀಕ್ಷಕರು ಮರಿಯಪ್ಪ ಆರ್‌. ಬ್ಯಾಳಿ ಹಾಗೂ ಸಿಬ್ಬಂದಿ ವರ್ಗ ಸೂಕ್ತ ಬಂದೋಬಸ್ತ್‌ ವ್ಯವಸ್ಥೆ ಮಾಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!