ಬಮೂಲ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಮತ ನೀಡಲು ಶಾಸಕ ಎನ್.ಶ್ರೀನಿವಾಸ್ ಕರೆ

KannadaprabhaNewsNetwork |  
Published : May 20, 2025, 11:57 PM IST
ಪೆÇೀಟೋ 1 : ಸೋಂಪುರ ಹೋಬಳಿಯ ಅಗಳಕುಪ್ಪೆ ಗ್ರಾಮದಲ್ಲಿ ನಡೆದ ಸೋಂಪುರ ಹಾಗೂ ತ್ಯಾಮಗೊಂಡ್ಲು ಹೋಬಳಿಗಳ ಬಮೂಲ್ ನಿರ್ದೇಶಕರ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಎನ್.ಶ್ರೀನಿವಾಸ್ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ನಮ್ಮದೇ ಪಕ್ಷದ ಸರ್ಕಾರವಿದ್ದು, ಕ್ಷೇತ್ರದಲ್ಲಿ ನಮ್ಮವರೇ ಶಾಸಕರಾಗಿದ್ದು, ಬಮೂಲ್ ಚುನಾವಣೆಯಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಯನ್ನು ಗೆಲ್ಲಿಸಿ, ಕ್ಷೇತ್ರದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿ.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಕಳೆದ ಐದು ವರ್ಷಗಳಲ್ಲಿ ಡೈರಿಗಳ ಅಭಿವೃದ್ಧಿಗೆ, ರೈತರ ಕಷ್ಟ- ಸುಖಗಳಿಗೆ ನಮ್ಮ ಪಕ್ಷದ ಬೆಂಬಲದಿಂದ ನಿರ್ದೇಶಕರಾಗಿದ್ದ ಭಾಸ್ಕರ್ ಸ್ಪಂದಿಸಿದ್ದು, ಮತ್ತೊಮ್ಮೆ ಅವರಿಗೆ ಬೆಂಬಲ ಕೊಟ್ಟು ಮತ ನೀಡುವುದರ ಮೂಲಕ ಹೆಚ್ಚು ಮತಗಳಿಂದ ಗೆಲ್ಲಿಸಬೇಕು ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ಸೋಂಪುರ ಹೋಬಳಿಯ ಅಗಳಕುಪ್ಪೆ ಗ್ರಾಮದಲ್ಲಿ ನಡೆದ ಸೋಂಪುರ ಹಾಗೂ ತ್ಯಾಮಗೊಂಡ್ಲು ಹೋಬಳಿಗಳ ಬಮೂಲ್ ನಿರ್ದೇಶಕರ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಹೈನುಗಾರಿಕೆ ರೈತರ ಜೀವನಾಡಿಯಾಗಿದ್ದು, ನಮ್ಮ ಪಕ್ಷವೂ ಸಹ ರೈತರ ಪರವಾಗಿದೆ. ನಮ್ಮ ಅಭ್ಯರ್ಥಿ ಭಾಸ್ಕರ್ ಕೂಡ ಯುವಕರಾಗಿದ್ದು, ರೈತರಪರ ಕಾಳಜಿ ಹೊಂದಿ ಐದು ವರ್ಷಗಳ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವವಿದೆ, ಬಮೂಲ್ ವತಿಯಿಂದ ನೆಲಮಂಗಲ ತಾಲೂಕಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದು, ಮುಂದೆ ಅವರನ್ನು ನೀವು ಗೆಲ್ಲಿಸಿ ಹಾರೈಸಬೇಕಿದೆ ಎಂದರು.

ಗಮನಕ್ಕೆ ತನ್ನಿ:

ನಾನು ಸಹ ಶಾಸಕನಾಗಿ ಇನ್ನೂ ಮೂರು ವರ್ಷ ಇರುತ್ತೇನೆ. ನನ್ನ ಕಾಲಾವಧಿಯಲ್ಲಿ ತಾಲೂಕಿನ ಡೈರಿ ಕಟ್ಟಡಗಳ ನಿರ್ಮಾಣಕ್ಕೆ, ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ. ಡೈರಿ ಅಧ್ಯಕ್ಷರು ಹೇಳಿದ ಮನವಿಗಳನ್ನು ಚುನಾವಣೆ ನಂತರ ನಾನೇ ಖುದ್ದು ಭೇಟಿ ನೀಡಿ ಪರಿಹರಿಸುತ್ತೇನೆ. ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷದವರು ಮತದಾರರಿಗೆ ಬೆದರಿಕೆ ಹಾಕಿದರೆ ನನ್ನ ಗಮನಕ್ಕೆ, ನಮ್ಮ ಮುಖಂಡರ ಗಮನಕ್ಕೆ ತನ್ನಿ. ಅಂತಹವರಿಗೆ ತಕ್ಕಪಾಠ ಕಲಿಸೋಣ ಎಂದರು.

ಮುಖಂಡ ಅಗಳಕುಪ್ಪೆ ಗೋವಿಂದರಾಜು ಮಾತನಾಡಿ, ರಾಜ್ಯದಲ್ಲಿ ನಮ್ಮದೇ ಪಕ್ಷದ ಸರ್ಕಾರವಿದ್ದು, ಕ್ಷೇತ್ರದಲ್ಲಿ ನಮ್ಮವರೇ ಶಾಸಕರಾಗಿದ್ದು, ಬಮೂಲ್ ಚುನಾವಣೆಯಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಯನ್ನು ಗೆಲ್ಲಿಸಿ, ಕ್ಷೇತ್ರದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿ ಎಂದರು.

ಬಗರ್ ಹುಕುಂ ಸದಸ್ಯ ಓಬಳಾಪುರ ಹನುಮಂತೇಗೌಡ್ರು ಮಾತನಾಡಿ, ವಿರೋಧ ಪಕ್ಷದವರು ಸೋಲುವ ಭೀತಿಯಲ್ಲಿ ನಮ್ಮ ಅಭ್ಯರ್ಥಿ ಪರ ಅಪಪ್ರಚಾರ ನಡೆಸುತ್ತಿರುವುದು ಗಮನಕ್ಕೆ ಬಂದಿದ್ದು, ಸುಳ್ಳು ವದಂತಿಗಳಿಗೆ ಕಿವಿಕೊಡದೇ ತಮ್ಮ ಮತವನ್ನು ಭಾಸ್ಕರ್ ಅವರಿಗೆ ನೀಡಿ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಎನ್ ಡಿಎ ಅಧ್ಯಕ್ಷ ನಾರಾಯಣಗೌಡ, ಪುರಸಭಾ ಸದಸ್ಯ ಪ್ರದೀಪ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಸಾಧಿಕ್ ಪಾಷ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್, ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ದೇವರಹೊಸಹಳ್ಳಿ ಸತೀಶ್, ಬೀರಗೊಂಡನಹಳ್ಳಿ ಮಲ್ಲೇಶ್, ಹಸಿರುವಳ್ಳಿ ಕುಮಾರ್, ವಕೀಲ ಹನುಮಂತೇಗೌಡ್ರು, ಖಲಿಂಉಲ್ಲಾ, ನಯಾಜ್ ಖಾನ್, ಸಾಧತ್ ಉಲ್ಲಾಖಾನ್, ಅಪ್ಪಾಜಿಗೌಡ, ರಾಮಾಂಜನೇಯ ಸೇರಿ ಡೈರಿ ಅಧ್ಯಕ್ಷರು , ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ