ಒಗ್ಗಟ್ಟಿನಿಂದ ವಿರೋಧಿಗಳನ್ನು ಸೋಲಿಸಲು ಸಾಧ್ಯ

KannadaprabhaNewsNetwork |  
Published : Mar 23, 2026, 03:15 AM IST
ಬಿಜೆಇ | Kannada Prabha

ಸಾರಾಂಶ

ಹುಕ್ಕೇರಿ ಕೆಇಬಿ ಚುನಾವಣೆ, ಕಾರ್ಯಕರ್ತರು ದುಡಿದು ಜಯ ತಂದಿದ್ದಾರೆ, ಸಂಘಟನೆಯಿಂದ ಕೆಸಲ ಮಾಡಿದರೆ, ವಿಧಾನಸಭೆ ಚುನಾವಣೆಯಲ್ಲಿ ಗೆಲುವು

ಉಳ್ಳಾಗಡ್ಡಿ-ಖಾನಾಪೂರ: ಇತ್ತೀಚೆಗೆ ನಡೆದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಎಲ್ಲ ಕಾರ್ಯಕರ್ತರು ಒಮ್ಮತದಿಂದ ದುಡಿದು ಜಯ ತಂದುಕೊಟ್ಟಿದ್ದಾರೆ. ಇದೇ ತೆರನಾಗಿ ಸಂಘಟನೆಯಿಂದ ಕೆಲಸ ಮಾಡಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿರೋಧಿಗಳನ್ನು ಸೋಲಿಸುವು ಸುಲಭ ಎಂದು ಹುಕ್ಕೇರಿ ಶಾಸಕ ನಿಖಿಲ್ ಕತ್ತಿ ಹೇಳಿದರು.

ಯಮಕನಮರಡಿಯಲ್ಲಿ ಬಿಜೆಪಿ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವವರು ತಮ್ಮದೇ ಆದ ಕ್ಷೇತ್ರದ ಗೋಟೂರದ ರಸ್ತೆ ಸುಧಾರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಮುಖ್ಯಮಂತ್ರಿಗಳಾದರೇ ರಾಜ್ಯದ ಅಭಿವೃದ್ಧಿ ಸಾಧ್ಯವೇ.? ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಮನೆಮನಗಳಿಗೆ ಮುಟ್ಟಿಸುವ ಕೆಲಸ ಮಾಡಬೇಕೆಂದರು.ಬಿಜೆಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹುಂದ್ರಿ ಮಾತನಾಡಿ, ಕಳೆದ 20 ವರ್ಷಗಳಿಂದ ಬಿಜೆಪಿ ಕಾರ್ಯಕರ್ತರು ಸಕ್ರೀಯವಾಗಿ ಕೆಲಸ ಮಾಡಿ ಪಕ್ಷ ಸಂಘಟನೆ ಮಾಡಿದ್ದಾರೆ. ಯಮಕನಮರಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರೇ ಆಗಲಿ ಶಾಸಕನಾಗಬೇಕು. ಕತ್ತಿ ಮತ್ತು ಜೋಲ್ಲೆ ಕುಟುಂಬದವರು ಬೆಂಬಲವಾಗಿ ನಿಂತಿದ್ದು, ಮುಖ್ಯಮಂತ್ರಿಗಳೆಂದು ಬಿಂಬಿಸಿಕೊಳ್ಳುತ್ತಿರುವ ಶಾಸಕರು ಕ್ಷೇತ್ರದ ಅಭಿವೃದ್ಧಿ ಮಾಡದೇ ಅನ್ಯಾಯ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ರವಿಂದ್ರ ಹಂಜಿ ಮಾತನಾಡಿ, ಇದೇ ಉತ್ಸಾಹ ಚುನಾವಣೆಯಲ್ಲಿ ಇರಬೇಕು ಎಂದರು, ಶ್ರೀಸೈಲ ಯಮಕನಮರಡಿ, ಅಪ್ಪಯ್ಯಾ ಜಾಜರಿ, ಮಹಾವೀರ ನಾಶಿಪುಡಿ, ನಿರ್ವಾಣಿ ಹುಲಿಕಟ್ಟಿ ಮಾತನಾಡಿದರು. ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಕಲಗೌಡಾ ಪಾಟೀಲ, ಬಸವಣ್ಣಿ ಲಕ್ಕೆಂಪ್ಪಗೋಳ, ಈರಣ್ಣ ಗುರವ್ವ ಯಲ್ಲಪ್ಪಾ ಗಡಕರಿ, ರಾಜನ್ ಮಠಪತಿ, ಸಂತೋಷ ಭೂಯಿ, ಪ್ರವೀಣ ಭಂಗಿ, ರಮೇಶ ತಹಸಿಲ್ದಾರ, ಸುರೇಶ ಕೆದನೂರಿ, ಈರಪ್ಪ ಪಾಟೀಲ, ಅರ್ಜುನ ಪಾಟೀಲ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಸಂತೋಷ ಪಾಟೀಲ ನಿರೂಪಿಸಿ, ಗಂಗಯ್ಯಾ ಮಠಪತಿ ವಂದಿಸಿದರು.

ಉಳ್ಳಾಗಡ್ಡಿ-ಖಾನಾಪೂರ: ಇತ್ತೀಚೆಗೆ ನಡೆದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಎಲ್ಲ ಕಾರ್ಯಕರ್ತರು ಒಮ್ಮತದಿಂದ ದುಡಿದು ಜಯ ತಂದುಕೊಟ್ಟಿದ್ದಾರೆ. ಇದೇ ತೆರನಾಗಿ ಸಂಘಟನೆಯಿಂದ ಕೆಲಸ ಮಾಡಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿರೋಧಿಗಳನ್ನು ಸೋಲಿಸುವು ಸುಲಭ ಎಂದು ಹುಕ್ಕೇರಿ ಶಾಸಕ ನಿಖಿಲ್ ಕತ್ತಿ ಹೇಳಿದರು.ಹುಕ್ಕೇರಿ ಕೆಇಬಿ ಚುನಾವಣೆ, ಕಾರ್ಯಕರ್ತರು ದುಡಿದು ಜಯ ತಂದಿದ್ದಾರೆ, ಸಂಘಟನೆಯಿಂದ ಕೆಸಲ ಮಾಡಿದರೆ, ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸುಲಭ, ಶಾಸಕ ನಿಖಿಲ್‌ ಕತ್ತಿits possible to defeat opponent with unity, discussing strategies for up coming election, MLA nikhil katti, in new BJP office

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆಣ್ಮಗು ಹುಟ್ಟಿದರೆ ಹೊನ್ನಕ್ಕೆ ಸಮಾನ
ಪ್ರಪಂಚಕ್ಕೆ ಕೊಟ್ಟಿರುವ ಶ್ರೇಷ್ಠ ಕೊಡುಗೆ ರಾಮಾಯಣ: ಗಂಗಾಧರ ಗೌಡ