ನಾಪೋಕ್ಲು ನಾಡು ಶ್ರೀ ಭಗವತಿ ದೇವರ ಉತ್ಸವ

KannadaprabhaNewsNetwork |  
Published : Mar 23, 2026, 03:15 AM IST
ಚಿತ್ರ.1: ವಸೂರಿ ಮಾಲೆ ಗದ್ದೆಹಳ್ಳದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ತೆರಳುತ್ತಿರುವುದು. 2: ಮುತ್ತಪ್ಪ,ವಸೂರಿಮಾಲೆ ಹಾಗೂ ಶ್ರೀ ಕುರಂಭ (ಭಗವತಿ) ದೇವಾಲಯದಲ್ಲಿ ವೆಳ್ಳಾಟಂ ನಡೆಸುತ್ತಿರುವುದು. | Kannada Prabha

ಸಾರಾಂಶ

ಇಲ್ಲಿಯ ನಾಡು ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವ ಗುರುವಾರ ವಿಜೃಂಭಣೆಯಿ೦ದ ಜರುಗಿತು.

ಕನ್ನಡಪ್ರಭವಾರ್ತೆ ನಾಪೋಕ್ಲು

ಇಲ್ಲಿಯ ನಾಡು ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವ ಗುರುವಾರ ವಿಜೃಂಭಣೆಯಿ೦ದ ಜರುಗಿತು.

17ರಿಂದ ಶ್ರೀ ಭಗವತಿ ದೇವರ ಹಬ್ಬವು ಪಟ್ಟಣಿ ಆಚರಣೆಯೊಂದಿಗೆ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು. ಆರ೦ಭದಲ್ಲಿ ತಕ್ಕರ ಮನೆಯಿಂದ ದೇವರ ಭಂಡಾರವನ್ನು ದೇವಾಲಯಕ್ಕೆ ತರಲಾಯಿತು. ನಂತರ ಅಂದಿಬೊಳಕು ರಾತ್ರಿ ಶ್ರೀ ಭದ್ರಕಾಳಿ ದೇವರ ಕೋಲ, ದೇವರ ಊರ ಪ್ರದಕ್ಷಿಣೆನೆರವೇರಿತು. ಗುರುವಾರ ಪಟ್ಟಣಿ ಹಬ್ಬದ ವಿಶೇಷ ಪೂಜಾ ಕಾರ‍್ಯಗಳು ಜರುಗಿದವು. ಬೆಳಿಗ್ಗೆ ದೇವರ ದರ್ಶನ ನಂತರ ಎತ್ತುಪೋರಾಟ ವಿಶೇಷ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಬಳಿಕ ನೆರೆದಿದ್ದ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ಜರುಗಿತು. ಮಧ್ಯಾಹ್ನದ ಬಳಿಕ ದೇವಾಲಯದ ಆವರಣದಲ್ಲಿ ಗ್ರಾಮಸ್ಥರಿಂದ ಬೋಳಕಾಟ್, ದೇವರ ಪ್ರದರ್ಶನ ನೃತ್ಯ ಮಹೋತ್ಸವ ಸಾಂಗವಾಗಿ ನೆರವೇರಿತು. ಉತ್ಸವದ ಧಾರ್ಮಿಕ ಪೂಜಾ ವಿಧಿ ವಿಧಾನವನ್ನು ತಂತ್ರಿ ಶ್ರೀಹರಿ ಕೆದಿಲಾಯ ಮಡಿಕೇರಿ, ದೇವಾಲಯದ ಮುಖ್ಯ ಹರೀಶ್ ಕೆಕುಣ್ಣಾಯ ಹಾಗೂ ದೇವರ ನೃತ್ಯ ಮಹೋತ್ಸವವನ್ನು ಜಯಚಂದ್ರ (ಪುಂಡ) ನೆರವೇರಿಸಿ ಕೊಟ್ಟರು.

ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ, ಕುಲ್ಲೇಟಿರ ಶಂಕರಿ,‍ ಕಾರ್ಯದರ್ಶಿ ಕಂಗಂಡ ಜಾಲಿ ಪೂವಪ್ಪ. ಆಡಳಿತ ಮಂಡಳಿ ನಿರ್ದೇಶಕರು, ತಕ್ಕ ಮುಖ್ಯಸ್ಥ ರಾದ ಕೆಲೇಟಿರ, ತಿರೋಡಿರ, ಕುಲ್ಲೇಟಿರ, ನಾಟೋಳಂಡ ಕುಟುಂಬಸ್ಥರು ಇದ್ದರು.

ಶುಕ್ರವಾರ ಸಂಜೆ ಪವಿತ್ರ ಕಾವೇರಿ ನದಿಯಲ್ಲಿ ಭಗವತಿ ದೇವರ ಅವಭೃತಸ್ನಾನ ಮತ್ತು ನಗರದಲ್ಲಿ ಚೆಂಡೆ ಮೇಲಗಳೊಂದಿಗೆ ಮೆರವಣಿಗೆ ನಡೆಯಿತು. ನಂತರ ದೇವಾಲಯಕ್ಕೆ ಹಿಂತಿರುಗಿ ನೃತ್ಯೋತ್ಸವ, ರಾತ್ರಿ ನರಿಪೂಧ, ನುಚ್ಚುಟೆ, ಅಂಜಿ ಕೂಟ್ ಮರ‍್ತಿ, ಕಲಿಯಾಟ ಅಜ್ಜಪ್ಪ, ಮತ್ತು ವಿಷ್ಣು ಮರ‍್ತಿ ದೇವರ ಕೋಲ ಸೇರಿದಂತೆ ವಿವಿಧ ಭೂತಾರಾಧನೆ ನಡೆದು ಅನ್ನದಾನದೊಂದಿಗೆ ಹಬ್ಬವು ಸಂಪನ್ನಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆಣ್ಮಗು ಹುಟ್ಟಿದರೆ ಹೊನ್ನಕ್ಕೆ ಸಮಾನ
ಪ್ರಪಂಚಕ್ಕೆ ಕೊಟ್ಟಿರುವ ಶ್ರೇಷ್ಠ ಕೊಡುಗೆ ರಾಮಾಯಣ: ಗಂಗಾಧರ ಗೌಡ