ಹೂಡಿಕೆ ನೆಪದಲ್ಲಿ ಮಹಿಳೆಗೆ 11.75 ಲಕ್ಷ ರು. ವಂಚನೆ

KannadaprabhaNewsNetwork |  
Published : Mar 23, 2026, 03:00 AM IST
22ಹಾಜಬ್ಬ | Kannada Prabha

ಸಾರಾಂಶ

ಆನ್‌ಲೈನ್ ಮೂಲಕ ಷೇರು ವ್ಯವಹಾರ ಮಾಡುವ ಆ್ಯಪ್‌ನಲ್ಲಿ ಹೂಡಿಕೆ ಮಾಡುವ ನೆಪದಲ್ಲಿ ಮಹಿಳೆಯೊಬ್ಬರಿಗೆ 11.75 ಲಕ್ಷ ರು. ವಂಚಿಸಿದ ಪ್ರಕರಣ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಉಡುಪಿ: ಆನ್‌ಲೈನ್ ಮೂಲಕ ಷೇರು ವ್ಯವಹಾರ ಮಾಡುವ ಆ್ಯಪ್‌ನಲ್ಲಿ ಹೂಡಿಕೆ ಮಾಡುವ ನೆಪದಲ್ಲಿ ಮಹಿಳೆಯೊಬ್ಬರಿಗೆ 11.75 ಲಕ್ಷ ರು. ವಂಚಿಸಿದ ಪ್ರಕರಣ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಇಲ್ಲಿನ ಸಹನಾ ಎಂಬವರು ಆನ್‌ಲೈನ್ ಟ್ರೇಡಿಂಗ್ ಕುರಿತು ತಿಳಿದುಕೊಳ್ಳುವ ಉದ್ದೇಶದಿಂದ ಒಂದು ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡಿದ್ದರು. ಸುಮಾರು 15 ದಿನಗಳ ಬಳಿಕ ಅಪರಿಚಿತ ವ್ಯಕ್ತಿ ಕರೆ ಮಾಡಿ ಅವರನ್ನು ವಾಟ್ಸಾಪ್ ಗುಂಪಿಗೆ ಸೇರಿಸಿದ್ದಾನೆ. ಆ ಗುಂಪಿನಲ್ಲಿ ಲಿಂಕ್ ಕಳುಹಿಸಿ, ಕೆವೈಸಿ ವಿವರಗಳನ್ನು ಭರ್ತಿ ಮಾಡಲು ಸೂಚಿಸಲಾಗಿದೆ. ಬಳಿಕ ಟ್ರೇಡಿಂಗ್ ಮೂಲಕ ಲಾಭ ದೊರೆಯುತ್ತದೆ ಎಂದು ನಂಬಿಸಿದ್ದು, ಆತ ಹೇಳಿದಂತೆ ವಿವಿಧ ಬ್ಯಾಂಕ್ ಖಾತೆಗಳಿಗೆ ಸಹನಾ ಅವರು ಮಾ. 6 ರಿಂದ 14ರವರೆಗೆ ಹಂತ ಹಂತವಾಗಿ ಒಟ್ಟು 11,75,000 ರು. ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಆರೋಪಿಗಳು ಯಾವುದೇ ಲಾಭಾಂಶ ನೀಡದೆ ಹೂಡಿಕೆ ಮಾಡಿದ ಹಣವನ್ನೂ ಹಿಂತಿರುಗಿಸದೆ ತಮಗೆ ಮೋಸ ಮಾಡಿರುವುದು ಅವರಿಗೆ ಗಮನಕ್ಕೆ ಬಂದಿದೆ.

ನಂತರ ಅವರು ಈ ಸಂಬಂಧ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

110 ಐನ್ ಮನೆಗಳ ಅಭಿವೃದ್ಧಿಗೆ 4.50 ಕೋಟಿ ರು. ಮೀಸಲು: ಶಾಸಕ ಪೊನ್ನಣ್ಣ
ಜಯಂತಿಗಳು ಆಚರಣೆಗೆ ಸೀಮಿತ ಬೇಡ: ಜಿಲ್ಲಾಧಿಕಾರಿ ಶ್ರೀಧರ್ ನಿರ್ದೇಶನ