ಭರ್ತಿಯಾದ ಯಗಚಿಗೆ ಶಾಸಕರಿಂದ ಬಾಗಿನ

KannadaprabhaNewsNetwork |  
Published : Aug 11, 2026, 01:30 AM IST
10ಎಚ್ಎಸ್ಎನ್3 : ಯಗಚಿ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ಶಾಸಕ ಹೆಚ್.ಕೆ.ಸುರೇಶ್ ಬಾಗಿನ ಅರ್ಪಿಸಿದರು. | Kannada Prabha

ಸಾರಾಂಶ

ಮಲೆನಾಡು ಭಾಗದಲ್ಲಿ ಬಿದ್ದ ಮಳೆಯಿಂದ ಯಗಚಿ ಭರ್ತಿಯಾಗಿದೆ. ಜಲಾಶಯದಲ್ಲಿ ೩.೧೬೩ ನೀರು ಶೇಖರಣೆಯಾಗಿದೆ. ಒಳಹರಿವು ಹೆಚ್ಚಾಗುವ ಭೀತಿಯಿಂದ ಈಗಾಗಲೇ ನದಿಪಾತ್ರದ ಜನರಿಗೆ ಮನ್ನಚ್ಚರಿಕೆಯನ್ನು ಯಗಚಿ ನೀರಾವರಿ ನಿಗಮ ನೀಡಲಾಗಿತ್ತು. ಸದ್ಯ ಸಾಂಕೇತಿಕವಾಗಿ ಶಾಸಕರಾದ ಎಚ್. ಕೆ. ಸುರೇಶ್ ಒಳಗೊಂಡ ಅಧಿಕಾರಿಗಳು ಮತ್ತು ವಿವಿಧ ಸಂಘಸಂಸ್ಥೆಯ ಮುಖಂಡರ ಸಮ್ಮುಖದಲ್ಲಿ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಲೆನಾಡು ಭಾಗದಲ್ಲಿನ ವ್ಯಾಪಕ ಮಳೆಯಿಂದ ಯಗಚಿ ಜಲಾಶಯ ಭರ್ತಿಯಾಗಿದ್ದು ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಯಗಚಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಶಾಸಕ ಎಚ್. ಕೆ. ಸುರೇಶ್ ಬಾಗಿನ ಅರ್ಪಿಸಿದರು.

ಮಲೆನಾಡು ಭಾಗದಲ್ಲಿ ಬಿದ್ದ ಮಳೆಯಿಂದ ಯಗಚಿ ಭರ್ತಿಯಾಗಿದೆ. ಜಲಾಶಯದಲ್ಲಿ ೩.೧೬೩ ನೀರು ಶೇಖರಣೆಯಾಗಿದೆ. ಒಳಹರಿವು ಹೆಚ್ಚಾಗುವ ಭೀತಿಯಿಂದ ಈಗಾಗಲೇ ನದಿಪಾತ್ರದ ಜನರಿಗೆ ಮನ್ನಚ್ಚರಿಕೆಯನ್ನು ಯಗಚಿ ನೀರಾವರಿ ನಿಗಮ ನೀಡಲಾಗಿತ್ತು. ಸದ್ಯ ಸಾಂಕೇತಿಕವಾಗಿ ಶಾಸಕರಾದ ಎಚ್. ಕೆ. ಸುರೇಶ್ ಒಳಗೊಂಡ ಅಧಿಕಾರಿಗಳು ಮತ್ತು ವಿವಿಧ ಸಂಘಸಂಸ್ಥೆಯ ಮುಖಂಡರ ಸಮ್ಮುಖದಲ್ಲಿ ಬಾಗಿನ ಅರ್ಪಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಲೆನಾಡು ಭಾಗದಲ್ಲಿನ ವ್ಯಾಪಕ ಮಳೆಯಿಂದ ಯಗಚಿ ಜಲಾಶಯ ಭರ್ತಿಯಾಗಿದ್ದು ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಾಗಿದೆ. ಮುಂದಿನ ದಿನದಲ್ಲಿ ಯಗಚಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಜಿಲ್ಲಾ ಮಂತ್ರಿಗಳು, ನೀರಾವರಿ ಮಂತ್ರಿಗಳ ಸಾರಥ್ಯದಲ್ಲಿ ಬೃಹತ್ ಪ್ರಮಾಣದಲ್ಲಿ ಬಾಗಿನ ಅರ್ಪಿಸಲಾಗುತ್ತದೆ. ಬಯಲುಸೀಮೆಗೆ ಈಗಾಗಲೇ ಎತ್ತಿನಹೊಳೆ ಕಾಲುವೆಯಿಂದ ನೀರು ಸೇರಿದೆ. ಯಗಚಿ ಏತ ನೀರಾವರಿ ಮೂಲಕ ನೀರನ್ನು ಹರಿಸುವ ಕಡೆ ಅಧಿಕಾರಿಗಳು ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ಶ್ರೀಧರ್‌ ಕಂಕಣವಾಡಿ, ಸಿಪಿಐ ರೇವಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಪಿಎಸ್‌ಐ ಶಿವಾನಂದ ಪಾಟೀಲ್, ಯಗಚಿ ನೀರಾವರಿ ನಿಗಮ ಕಾರ್ಯಪಾಲಕ ಎಂಜಿನಿಯರ್‌ ರಾಮಕೃಷ್ಣ, ಸಂದೀಪ್, ಕರವೇ ಅಧ್ಯಕ್ಷ ಚಂದ್ರಶೇಖರ್‌, ಡಾ, ರಾಜಕುಮಾರ್‌ ಸಂಘದ ಅಧ್ಯಕ್ಷ ತೀರ್ಥಂಕರ್, ಬಿಜೆಪಿ ಅಧ್ಯಕ್ಷ ಸಂಜುಕೌರಿ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಹಾಸನದ ಕ್ರೀಡಾಪಟುಗಳ ಸಾಧನೆ
ಕನಿಷ್ಠ ವೇತನ ಪರಿಷ್ಕರಣೆ ಆದೇಶ ತಕ್ಷಣ ಜಾರಿಯಾಗಲಿ