ಸೇತುವೆ ಕಾಮಗಾರಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗುದ್ದಲಿ ಪೂಜೆ

KannadaprabhaNewsNetwork |  
Published : Oct 08, 2024, 01:05 AM IST
7ಕೆಎಂಎನ್ ಡಿ18 | Kannada Prabha

ಸಾರಾಂಶ

ಬಹು ವರ್ಷಗಳ ಬೇಡಿಕೆ ಈಗ ಈಡೇರಿದ್ದು, 5.75 ಕೋಟಿ ರು. ವೆಚ್ಚದ ಕಾಮಗಾರಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಿದ್ದೇನೆ. ಕಾಮಗಾರಿ ಅತಿ ಶೀಘ್ರದಲ್ಲೇ ಮುಕ್ತಾಯಗೊಳ್ಳುತ್ತದೆ ಮತ್ತು ರಾಷ್ಟ್ರೀಯ ಹೆದ್ದಾರಿಯಿಂದ ಅಗಾದೂರಿಗೆ ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡಲು ಉಪಮುಖ್ಯಮಂತ್ರಿಯವರ ಜೊತೆ ಬೇಡಿಕೆ ಇಟ್ಟು ಅವರಿಂದ ಒಪ್ಪಿಗೆ ಪಡೆಯಲಾಗಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಗುಂಡಾಪುರ ಮತ್ತು ಕೊನ್ನಾಪುರ ಗ್ರಾಮಗಳಿಗೆ ಸಂಪರ್ಕಿಸುವ ಭೀಮ ನದಿಗೆ ಅಡ್ಡಲಾಗಿ ಸೇತುವೆ ಮತ್ತು ಪಿಕಪ್ ನಿರ್ಮಾಣ ಕಾಮಗಾರಿಗೆ 495 ಲಕ್ಷ ರು. ಮತ್ತು ಗುಂಡಾಪುರ ಗ್ರಾಮದ ಸರ್ವೆ ನಂಬರ್ 120 ರಲ್ಲಿ 80 ಲಕ್ಷ ರು. ವೆಚ್ಚದ ಬ್ರಿಡ್ಜ್ ನಿರ್ಮಾಣ ಕಾಮಗಾರಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು, ಬಹು ವರ್ಷಗಳ ಬೇಡಿಕೆ ಈಗ ಈಡೇರಿದ್ದು, 5.75 ಕೋಟಿ ರು. ವೆಚ್ಚದ ಕಾಮಗಾರಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಿದ್ದೇನೆ. ಕಾಮಗಾರಿ ಅತಿ ಶೀಘ್ರದಲ್ಲೇ ಮುಕ್ತಾಯಗೊಳ್ಳುತ್ತದೆ ಮತ್ತು ರಾಷ್ಟ್ರೀಯ ಹೆದ್ದಾರಿಯಿಂದ ಅಗಾದೂರಿಗೆ ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡಲು ಉಪಮುಖ್ಯಮಂತ್ರಿಯವರ ಜೊತೆ ಬೇಡಿಕೆ ಇಟ್ಟು ಅವರಿಂದ ಒಪ್ಪಿಗೆ ಪಡೆಯಲಾಗಿದೆ ಎಂದರು.

ಅತಿ ಶೀಘ್ರದಲ್ಲೇ ಆ ಕಾಮಗಾರಿಯು ಸಹ ಪ್ರಾರಂಭವಾಗಲಿದೆ. ಹಲಗೂರು ಹೋಬಳಿಯಾದಂತ ಅಂತರ್ಜಲ ಹೆಚ್ಚುವುದಕ್ಕಾಗಿ ಕಾಮಗಾರಿ ಮಾಡಲಾಗುತ್ತಿದೆ ಎಂದರು.

ಈ ವೇಳೆ ಮುಖಂಡರಾದ ಸ್ಟಾರ್ ಚಂದ್ರು, ಎಇಇ ನವೀನ್, ಕೆಂಪಯ್ಯನದೊಡ್ಡಿ ಮೋಹನ್ ಕುಮಾರ್, ಕೊನ್ನಾಪುರ ನಾಗೇಶ್, ಸಿ.ಪಿ.ರಾಜು, ಮರಿಸ್ವಾಮಿ, ದೇವರಾಜು, ಪದ್ಮನಾಭ, ಗೋಪಾಲ್ ಸೇರಿದಂತೆ ಇತರರು ಇದ್ದರು. ಇಂದು ‘ತಿಂಡಿಗೆ ಬಂದ ತುಂಡೇರಾಯ’ ಹಾಸ್ಯ ಪ್ರಧಾನ ನಾಟಕ

ಮಂಡ್ಯ:

ನೆಲದನಿ ಬಳಗ ಮಂಗಲ ಇವರ ವತಿಯಿಂದ ನಿರ್ದಿಗಂತ ಪ್ರಸ್ತುತ ಪಡಿಸಿರುವ ತಿಂಡಿಗೆ ಬಂದ ತುಂಡೇರಾಯ ಹಾಸ್ಯ ಪ್ರಧಾನ ನಾಟಕ ನಾಳೆ ಮಂಗಳವಾರ (ಅ.8) ಸಂಜೆ 6.15ಕ್ಕೆ ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ನಡೆಯಲಿದೆ.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ನಾಟಕ ಪ್ರದರ್ಶನವನ್ನು ಉದ್ಘಾಟಿಸಲಿದ್ದು, ನೆಲದನಿ ಬಳಗದ ಪೋಷಕಿ ರುಕ್ಮಿಣಿ ಎಸ್.ಸಿ. ಶಂಕರೇಗೌಡ ಅಧ್ಯಕ್ಷತೆ ವಹಿಸುವರು.

ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ಎಸ್.ಎಸ್.ಕೋಮಲ್‌ಕುಮಾರ್ ಅವರು ಪತ್ರಕರ್ತ ಎಂ.ಎನ್.ಯೋಗೇಶ್ ಅವರನ್ನು ಸನ್ಮಾನಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲಯನ್ಸ್ ಸಂಸ್ಥೆ ನಾಗರಾಜು ವಿ.ಭೈರಿ, ಸ್ಪಂದನಾ ಆಸ್ಪತ್ರೆ ಡಾ. ಆದಿತ್ಯಗೌಡ, ಲಯನ್ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು, ನಾಲ್ವಡಿ ಕೃಷ್ಣರಾಜ ಒಡೆಯರ್ ಸಂಸ್ಥೆ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಪತ್ರಕರ್ತ ನವೀನ್ ಚಿಕ್ಕಮಂಡ್ಯ, ಡಾ.ಎಚ್.ಆರ್. ಕನ್ನಿಕಾ, ಎಂ. ವಿನಯ್‌ಕುಮಾರ್, ಮುಂಕುಂದ ಅವರು ಭಾಗವಹಿಸುವರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ