ಮಾದರಿ ಗ್ರಾಮ ಯೋಜನೆ ಕಾಮಗಾರಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಚಾಲನೆ

KannadaprabhaNewsNetwork |  
Published : Nov 28, 2025, 01:30 AM IST
27ಕೆಎಂಎನ್ ಡಿ19 | Kannada Prabha

ಸಾರಾಂಶ

ಮಳವಳ್ಳಿ ತಾಲೂಕಿನಲ್ಲಿ ಹಲವು ಗ್ರಾಮಗಳನ್ನು ಮಾದರಿ ಗ್ರಾಮಗಳಾಗಿ ಮಾಡಲು ಆಯ್ಕೆ ಮಾಡಲಾಗಿದೆ. ಇದರಲ್ಲಿ ಬಾಣಸಮುದ್ರವೂ ಸೇರಿದೆ. ಮೊದಲು ವಿದ್ಯುತ್ ತಂತಿಗಳ ಸಮಸ್ಯೆ ಇದ್ದರೆ ಅದನ್ನು ಹೊಸದಾಗಿ ಹಾಕುವುದು, ವಿದ್ಯುತ್ ಕಂಬಗಳ ಅವಶ್ಯಕತೆ ಇದ್ದರೆ ಮಧ್ಯದಲ್ಲಿ ಹಾಕುವುದು.

ಕನ್ನಡಪ್ರಭ ವಾರ್ತೆ ಹಲಗೂರು

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ ಒಳಪಟ್ಟ ಬಾಣಸಮುದ್ರ ಗ್ರಾಮವನ್ನು ಮಾದರಿ ಗ್ರಾಮವಾಗಿ ಮಾಡುವ 50 ಲಕ್ಷ ರು. ವೆಚ್ಚದ ಕಾಮಗಾರಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಚಾಲನೆ ನೀಡಿದರು.

ನಂತರ ಮಾತನಾಡಿ, ಮಳವಳ್ಳಿ ತಾಲೂಕಿನಲ್ಲಿ ಹಲವು ಗ್ರಾಮಗಳನ್ನು ಮಾದರಿ ಗ್ರಾಮಗಳಾಗಿ ಮಾಡಲು ಆಯ್ಕೆ ಮಾಡಲಾಗಿದೆ. ಇದರಲ್ಲಿ ಬಾಣಸಮುದ್ರವೂ ಸೇರಿದೆ. ಮೊದಲು ವಿದ್ಯುತ್ ತಂತಿಗಳ ಸಮಸ್ಯೆ ಇದ್ದರೆ ಅದನ್ನು ಹೊಸದಾಗಿ ಹಾಕುವುದು, ವಿದ್ಯುತ್ ಕಂಬಗಳ ಅವಶ್ಯಕತೆ ಇದ್ದರೆ ಮಧ್ಯದಲ್ಲಿ ಹಾಕುವುದು, ಮೊದಲು ಗ್ರಾಮಕ್ಕೆ ಒಂದೇ ಟ್ರಾನ್ಸ್ ಫಾರ್ಮರ್ ಇರುತ್ತಿತ್ತು. ಈಗ ಲೋಡ್ ಹೆಚ್ಚಾಗುವುದರಿಂದ ಹೊಸದಾಗಿ ಮತ್ತೊಂದು ಟ್ರಾನ್ಸ್ ಫಾರ್ಮರ್ ಹಾಕುವುದು ಸೇರಿದಂತೆ ಮಾದರಿ ಗ್ರಾಮ ಯೋಜನೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದರು.

ಹಣವನ್ನು ರಸ್ತೆ ಕಾಮಗಾರಿಗೂ ಸಹ ಉಪಯೋಗಿಸಿಕೊಳ್ಳಿ. ಅವಶ್ಯಕತೆ ಇದ್ದರೆ ಹೆಚ್ಚುವರಿ ಹಣ ಬಿಡುಗಡೆ ಮಾಡಿಸಿ ಕೊಡುತ್ತೇನೆ ಎಂದರು. ಸಾರ್ವಜನಿಕರು ನಮ್ಮ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಕೊಠಡಿಗಳ ಕೊರತೆ ಇದ್ದು, ಖಾಲಿ ನಿವೇಶನವನ್ನು ಕೊಡಿಸಿ ಕೊಠಡಿಗಳನ್ನು ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು.

ಸರ್ಕಾರಿ ಜಾಗ ನಿಮ್ಮ ಗ್ರಾಮದಲ್ಲಿ ಇಲ್ಲ. ನಿವೇಶನ ಕೊಡುವವರು ಇದ್ದರೆ ನನಗೆ ತಿಳಿಸಿದರೆ ನಾನು ಮಾತನಾಡಿ ಮುಂದಿನ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದರು.

ಈ ವೇಳೆ ಎಇಇ ಪ್ರೇಮ್ ಕುಮಾರ್, ಎಇ ಅಪ್ಪಣ್ಣ, ಜೆ.ಈ.ಮಧುಸೂದನ್, ಪುಟ್ಟಸ್ವಾಮಿ, ಡಿಹಲಸಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶ್ರೀಧರ್, ಗ್ರಾಪಂ ಸದಸ್ಯ ಮಲ್ಲೇಶ, ರಾಮಚಂದ್ರ, ಸಿದ್ದರಾಜು, ಡಿ.ಎಫ್.ಫಾರೂಕ್ ಪಾಷ ಹಾಗೂ ಮುಖಂಡರಾದ ಮಹೇಶ, ಬಸವರಾಜ ಮತ್ತು ಇತರರು ಇದ್ದರು.

ಇಂದು ಸಾಂಸ್ಕೃತಿಕ ಉತ್ಸವ ಹಾಗೂ ವೈ.ಸಿ.ಕುಮಾರ್ ಕುಟುಂಬಕ್ಕೆ ಆರ್ಥಿಕ ನೆರವು

ಮಂಡ್ಯ: ಇತ್ತೀಚೆಗೆ ನಿಧನರಾದ ಕಲಾವಿದ ವೈ.ಸಿ.ಕುಮಾರ್ ಅವರ ನೆನಪಿನಾರ್ಥ ನಗರದ ಬಾಲ ಭವನದಲ್ಲಿ ನ.28ರಂದು ಸಂಜೆ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಉತ್ಸವ ಹಾಗೂ ವೈ.ಸಿ.ಕುಮಾರ್ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜನಪದ ಮತ್ತು ಬೀದಿನಾಟಕ ಕಲಾತಂಡಗಳ ಒಕ್ಕೂಟದ ಅಧ್ಯಕ್ಷ ಸಂತೆಕಸಲಗೆರೆ ಬಸವರಾಜು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಸೌಲಭ್ಯಗಳ ಜಾಗೃತಿ ಮೂಡಿಸುವ ವೃತ್ತಿಯಲ್ಲಿ ನಿರತರಾಗಿದ್ದ ವೈ.ಸಿ.ಕುಮಾರ್ ಕುಟುಂಬಕ್ಕೆ ಜಿಲ್ಲೆಯ ಉದಾರಿಗಳ ನೆರವನ್ನು ತಲುಪಿಸುವ ಉದ್ದೇಶದಿಂದ ಅವರ ನೆನಪಿನಾರ್ಥ ಒಕ್ಕೂಟ ಹಾಗೂ ಕನ್ನಡ ಮತ್ತು ಸಂಸ್ಖೃತಿ ಇಲಾಖೆ ಹಾಗೂ ಜಿಲ್ಲಾ ನಾನಾ ಸಂಘಟನೆಗಳು, ಕಲಾಪೋಷಕರು, ಸಂಘಟಕರು, ಪ್ರೇಕ್ಷಕರ ಸಹಕಾರದಿಂದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಒಕ್ಕಲಿಗ ಸಂಸ್ಥಾನ ಮಠದ ಪೀಠಾಧಿಪತಿ ನಿಶ್ಚಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು. ಕಾರ್ಯಕ್ರಮವನ್ನು ಶಾಸಕ ಪಿ.ರವಿಕುಮಾರ್‌ ಉದ್ಘಾಟಿಸುವರು. ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆ ವಹಿಸುವರು. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸುವರು. ಸಾಂಸ್ಕೃತಿಕ ಉತ್ಸವದ ಭಾಗವಾಗಿ ಹೇಮ ತಂಡದಿಂದ ಸುಗಮ ಸಂಗೀತ ಹಾಗೂ ವೈ.ಸಿ.ಪರಮೇಶ್ ತಂಡದಿಂದ ನಾಟಕ ಪ್ರದರ್ಶನ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ಶೇಖರ್.ಎನ್.ಹನಿಯಂಬಾಡಿ, ಪ್ರಧಾನ ಕಾರ್ಯದರ್ಶಿ ವೈರಮುಡಿ, ನಿರ್ದೇಶಕ ದೇವರಾಜ್ ಕೊಪ್ಪ, ಕೆ.ಎಂ.ಕೃಷ್ಣೇಗೌಡ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಪ್ರತಿನಿಧಿಗಳಿಗೆ ಗೌರ್‍ನರ್‌ ಅಪಮಾನ : ಸಿದ್ದರಾಮಯ್ಯಆಕ್ರೋಶ
ಪುಸ್ತಕಗಳಲ್ಲಿ ಬೆಂಗಳೂರು ನಗರಕ್ಕೆ ಬರೋಬ್ಬರಿ ₹38 ಕೋಟಿ ಡ್ರಗ್ಸ್‌ ಸಾಗಾಟ