ಕಂಪಾಪುರ ಜಾಕ್‌ವೆಲ್‌ಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಭೇಟಿ

KannadaprabhaNewsNetwork |  
Published : Jul 31, 2024, 01:06 AM IST
ಸುರಪುರ ನಗರಕ್ಕೆ ಕುಡಿಯುವ ನೀರು ಸರಬರಾಗುವ ತಾಲೂಕಿನ ದೇವಾಪುರ ಬಳಿಯ ಕೃಷ್ಣಾ ನದಿ ತಟದ ಕಂಪಾಪುರಕ್ಕೆ ಶಾಸಕ ರಾಜಾ ವೇಣುಗೊಪಾಲ ನಾಯಕ ಭೇಟಿ ನೀಡಿ ವೀಕ್ಷಿಸಿದರು. | Kannada Prabha

ಸಾರಾಂಶ

ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ತಾಲೂಕಿನ ದೇವಾಪುರ ಬಳಿಯ ಕೃಷ್ಣಾ ನದಿ ತಟದ ಕಂಪಾಪುರಕ್ಕೆ ಶಾಸಕ ರಾಜಾ ವೇಣುಗೊಪಾಲ ನಾಯಕ ಭೇಟಿ ನೀಡಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ನಗರದ ನೀರು ಸರಬರಾಜು ಮಂಡಳಿಯ ಕಾಮಗಾರಿ ನಿರ್ವಹಿಸುವ ಸಹಾಯಕ ಅಭಿಯಂತರ ಶಂಕರಗೌಡ ಅವರಿಂದ ಜಾಕ್‌ವೆಲ್ ವಿನ್ಯಾಸ ಹಾಗೂ ಕಾರ್ಯನಿರ್ವಹಣೆ ಕುರಿತು ಮಾಹಿತಿ ಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ಸುರಪುರ

ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ತಾಲೂಕಿನ ದೇವಾಪುರ ಬಳಿಯ ಕೃಷ್ಣಾ ನದಿ ತಟದ ಕಂಪಾಪುರಕ್ಕೆ ಶಾಸಕ ರಾಜಾ ವೇಣುಗೊಪಾಲ ನಾಯಕ ಭೇಟಿ ನೀಡಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ನಗರದ ನೀರು ಸರಬರಾಜು ಮಂಡಳಿಯ ಕಾಮಗಾರಿ ನಿರ್ವಹಿಸುವ ಸಹಾಯಕ ಅಭಿಯಂತರ ಶಂಕರಗೌಡ ಅವರಿಂದ ಜಾಕ್‌ವೆಲ್ ವಿನ್ಯಾಸ ಹಾಗೂ ಕಾರ್ಯನಿರ್ವಹಣೆ ಕುರಿತು ಮಾಹಿತಿ ಪಡೆದುಕೊಂಡರು.

ಈ ವೇಳೆ ದೇವಾಪುರ ಗ್ರಾಮದ ಅನೇಕ ಮುಖಂಡರು ತಮ್ಮ ಗ್ರಾಮಕ್ಕೆ ಕಂಪಾಪುರ ಜಾಕ್‌ವೆಲ್ ಮೂಲಕ ಸುರಪುರಕ್ಕೆ ತೆಗೆದುಕೊಂಡು ಹೋಗುತ್ತಿರುವ ನೀರನ್ನು ದೇವಾಪುರ ಗ್ರಾಮಕ್ಕೂ ಸರಬರಾಜು ಮಾಡಲು ಕ್ರಮ ಕೈಗೊಳತ್ಬೇಕು . 110 ಕೆ.ವಿ ವಿದ್ಯುತ್ ಸರಬರಾಜು ಕೇಂದ್ರದಿಂದ ದೇವಾಪುರಕ್ಕೆ ಪ್ರತ್ಯೇಕ ಲೈನ್‌ಗಳ ಹಾಕಿಸಿ ವಿದ್ಯುತ್ ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಶಾಸಕರು, ಮುಂಬರುವ ದಿನಗಳಲ್ಲಿ ನಿಮ್ಮ ಬೇಡಿಕೆ ಪರಿಶೀಲಿಸಲಾಗುವುದು ಎಂದರು. ನೀರು ಸರಬರಾಜು ಇಲಾಖೆ ಅಧಿಕಾರಿ ಎ.ಇ ಶಂಕರಗೌಡ ಮಾಹಿತಿ ನೀಡಿ, ದೇವಾಪುರ ಗ್ರಾಮಕ್ಕೆ ನೀರು ಸರಬರಾಜು ಮಾಡಲು ವಾಲ್ ಅಳವಡಿಸಲಾಗಿದೆ. ಆದರೆ, ನೀರು ಶುದ್ಧೀಕರಣಕ್ಕೆ ಸ್ಥಳಿಯ ಗ್ರಾಪಂ ವತಿಯಿಂದ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಅನೇಕ ಜನರು ಸದ್ಯಕ್ಕೆ ನದಿ ದಂಡೆಯಲ್ಲಿನ ಜಮೀನುಗಳ ಒಂದಿಷ್ಟು ಬೆಳೆ ಹಾನಿಯಾಗಿದೆ. ಆದರೆ, ಇನ್ನು 2 ಲಕ್ಷ ಕ್ಯುಸೆಕ್ ನೀರು ಬಂದರೆ ಜಮೀನಿನಲ್ಲಿನ ಬೆಳೆಗಳು ಹಾನಿಯಾಗಲಿವೆ ಎಂದು ತಾಲೂಕು ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಚನ್ನಪ್ಪಗೌಡ ಜಕ್ಕನಗೌಡರು ಶಾಸಕರಿಗೆ ವಿವರಿಸಿದರು.

ಗ್ರೇಡ್-2 ತಹಸಿಲ್ದಾರ್ ಮಲ್ಲಯ್ಯ ದಂಡು, ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ಪೊಲೀಸ್ ಇನ್ಸ್ ಪೆಕ್ಟರ್ ಆನಂದ ವಾಘಮೊಡೆ, ಮುಖಂಡರಾದ ವೆಂಕೋಬ ಸಾಹುಕಾರ ಮಂಗಳೂರ, ನಿಂಗರಾಜ ಬಾಚಿಮಟ್ಟಿ, ಬಸನಗೌಡ ಪಾಟೀಲ್ ದೇವಾಪುರ, ಚಂದ್ರಶೇಖರ ದಂಡಿನ್, ಭೀಮರಾಯ ಮೂಲಿಮನಿ, ಸಂತೋಷ ಬಾಗಲಿ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ