ಕನ್ನಡಪ್ರಭ ವಾರ್ತೆ ಮಂಡ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಚೆಸ್ಕಾಂ ಅಧ್ಯಕ್ಷ ಹಾಗೂ ಶಾಸಕ ಎ.ಬಿ. ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ಮಂಗಲ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದದಿಂದ 50 ಲಕ್ಷ ರು. ವೆಚ್ಚದಲ್ಲಿ ಲೋಕಸರ ಶಾಖಾ ನಾಲೆಯ ವ್ಯಾಪ್ತಿಗೆ ಬರುವ 13ನೇ ವಿತರಣಾ ನಾಲೆಯ ಕೊನೇ ಭಾಗಕ್ಕೆ ಆರ್‌ಸಿಸಿ ಟ್ರಫ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಈ ಬಾರಿ ಉತ್ತಮವಾಗಿ ಮಳೆಯಾಗುತ್ತಿದ್ದು ರೈತರು ಬಹಳ ವಿಶ್ವಾಸದಿಂದ ವ್ಯವಸಾಯ ಮಾಡಿ, ರೈತರಿಗೆ ಗೊಬ್ಬರ, ಸಾಲ, ಬಿತ್ತನೆ ಬೀಜ ಎಲ್ಲವನ್ನು ಸಮರ್ಪಕವಾಗಿ ವಿತರಣೆ ಮಾಡಲಾಗುತ್ತಿದೆ. ರೈತರು ಉತ್ತಮವಾಗಿ ವ್ಯವಸಾಯ ಮಾಡುವ ಮೂಲಕ ತಮ್ಮ ಬದುಕನ್ನು ಹಸನು ಮಾಡಿಕೊಳ್ಳಬೇಕು. ಜನೋಪಯೋಗಿ ಕೆಲಸ ಯಾವುದನ್ನೂ ಸರ್ಕಾರ ನಿಲ್ಲಿಸುವುದಿಲ್ಲ. ಎಲ್ಲವನ್ನು ಮಾಡುತ್ತೇವೆ ಎಂದರು.ಈ ವೇಳೆ ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಕೆ.ಮಧು, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಜೆ.ಗಿರೀಶ್, ಉಪಾಧ್ಯಕ್ಷ ಬಸವರಾಜು, ಸದಸ್ಯ ಗಿರೀಶ್, ಯುವ ಮುಖಂಡ ಸುರೇಂದ್ರ, ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜೇಶ್, ಸಹಾಯಕ ಎಂಜಿನಿಯರ್ ಪ್ರವೀಣ, ಟಾಸ್ಕ್ ವರ್ಕ್ ನೌಕರರ ಸಂಘದ ಅಧ್ಯಕ್ಷ ಶಿವಲಿಂಗೇಗೌಡ ಇತರರಿದ್ದರು.
ವಾಟರ್ ಟ್ಯಾಂಕ್ ನಿರ್ಮಾಣಕ್ಕೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಗುದ್ದಲಿ ಪೂಜೆಶ್ರೀರಂಗಪಟ್ಟಣ:
ತಾಲೂಕಿನ ಅರಕೆರೆ ಗ್ರಾಮದ ಕೆಳಗಲಪೇಟೆ ಬೀದಿ ನಿವಾಸಿಗಳ ಅನುಕೂಲಕ್ಕೆ ಜೆಜೆಎಂ ಯೋಜನೆಯಡಿಯಲ್ಲಿ 50 ಸಾವಿರ ಲೀಟರ್ ಸಾಮರ್ಥ್ಯದ ವಾಟರ್ ಟ್ಯಾಂಕ್ ನಿರ್ಮಾಣಕ್ಕೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಗುದ್ದಲಿ ಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಅವರು, ಅರಕೆರೆ ಗ್ರಾಮ ಬಹಳ ದೊಡ್ಡ ಗ್ರಾಮವಾಗಿದೆ. ಹಲವು ವರ್ಷಗಳಿಂದ ಕೆಳಗಲಪೇಟೆ ಬೀದಿ ಬಡಾವಣೆಗೆ ನೀರಿನ ಕೊರತೆಯಾದಂತಿತ್ತು. ಸರ್ಕಾರ ಇದೀಗ ನೀಡಿರುವ ಹೊಸ ಜೆಜೆಎಂ ಯೋಜನೆ ಮೂಲಕ ಎಲ್ಲಾ ಬಡಾವಣೆಯ ಬೀದಿ ಬೀದಿಗಳ ಮೂಲಕ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಬಹುದು ಎಂದರು.
ಇನ್ನು ನೀರಿನ ಸಮಸ್ಯೆ ಬರದಂತೆ ನೋಡಿಕೊಳ್ಳಬಹುದು. ತ್ವರಿತವಾಗಿ ಗುಣಮಟ್ಟದ ಕಾಮಗಾರಿ ನಡೆಸಿ ಜನರಿಗೆ ನೀರಿನ ಸಂಪರ್ಕ ಕಲ್ಪಿಸಿ ಎಂದರು ಗುತ್ತಿಗೆದಾರರಿಗೆ ಸೂಚಿಸಿದರು.ಈ ವೇಳೆ ಇಂಜಿನಿಯರ್ ನಾಗರಾಜು , ಗ್ರಾಪಂ ಅಧ್ಯಕ್ಷ ಮಂಜುನಾಥ್, ತಾಪಂ ಮಾಜಿ ಸದಸ್ಯ ಸಂತೋಷ್, ಅಪೆಕ್ಷ ಬ್ಯಾಂಕ್ ಮಾಜಿ ನಿರ್ದೇಶಕ ಶಿವಯ್ಯ, ಸೇರಿದಂತೆ ಗ್ರಾಪಂ ಅಧ್ಯಕ್ಷರು, ಪಿಡಿಒ ಸೇರಿದಂತೆ ಇತರರು ಹಾಜರಿದ್ದರು.