ಶಾಸಕ ರಾಯರಡ್ಡಿ ಹೊಸಬರಿಗೆ ಅವಕಾಶ ನೀಡಲಿ

KannadaprabhaNewsNetwork |  
Published : Jun 17, 2026, 02:30 AM IST
16ಕೆಕೆಆರ್1: ಈರಪ್ಪ ಕುಡಗುಂಟಿ, ಜಿಪಂ ಮಾಜಿ ಸದಸ್ಯ | Kannada Prabha

ಸಾರಾಂಶ

ಮೇ ೩,೨೦೨೩ರಲ್ಲಿ ಬಿಜೆಪಿ ತೊರೆದು, ಇಂದಿನ ಸಿಎಂ ಡಿ.ಕೆ.ಶಿವಕುಮಾರ ಸಮ್ಮುಖದಲ್ಲಿಯೇ ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇನೆ

ಕುಕನೂರು: ಶಾಸಕ ಬಸವರಾಜ ರಾಯರಡ್ಡಿ ಅವರು ಕಾಂಗ್ರೆಸ್ ಪಕ್ಷದಿಂದ ಯಲಬುರ್ಗಾ ಕ್ಷೇತ್ರದ ಚುನಾವಣೆಗೆ ಹೊಸಬರಿಗೆ ಅವಕಾಶ ನೀಡಬೇಕು ಎಂದು ಜಿಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಂಗಳವಾರ ಮಾತನಾಡಿದ ಅವರು, ನಾನು ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಇತ್ತೀಚೆಗೆ ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಹಿಂದುಳಿದ ವರ್ಗದ ನಾಯಕ ಬಿ.ಕೆ. ಹರಿಪ್ರಸಾದ ಅವರನ್ನು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಅವರೊಡಗೂಡಿ ಸನ್ಮಾನಿಸಿ ಶುಭ ಕೊರಲಾಗಿತ್ತು. ಆದರೆ, ಇದನ್ನು ಸಹಿಸದ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮುಜುಗರ ಎಂದು ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿದ್ದು ಸರಿಯಲ್ಲ. ಅವರಿಗೆ ಯಾವ ರೀತಿ ಮುಜುಗರವಾಗಿದೆ ಎಂದು ಪ್ರಶ್ನಿಸಿದರು.

ಮೇ ೩,೨೦೨೩ರಲ್ಲಿ ಬಿಜೆಪಿ ತೊರೆದು, ಇಂದಿನ ಸಿಎಂ ಡಿ.ಕೆ.ಶಿವಕುಮಾರ ಸಮ್ಮುಖದಲ್ಲಿಯೇ ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇನೆ. ಅಂದಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿ.ಬಸವರಾಜ ಉಳ್ಳಾಗಡ್ಡಿ, ಶಾಸಕ ಬಸವರಾಜ ರಾಯರಡ್ಡಿ ಸಮ್ಮುಖದಲ್ಲಿ ಸುಮಾರು ೨ ಸಾವಿರಕ್ಕೂ ಅಧಿಕ ಕಾರ್ಯಕರ್ತರೊಂದಿಗೆ ಕ್ಷೇತ್ರದಲ್ಲಿ ಸೇರ್ಪಡೆಗೊಂಡಿದ್ದು, ರಾಯರಡ್ಡಿ ಅವರನ್ನು ಶಾಸಕರನ್ನಾಗಿ ಮಾಡಲು ಸುಮಾರು ೧೪೦ಕ್ಕೂ ಅಧಿಕ ಹಳ್ಳಿಗಳಿಗೆ ತೆರಳಿ ಪಕ್ಷ ಸಂಘಟನೆ ಮಾಡುವ ಮೂಲಕ ಗೆಲ್ಲಿಸುವ ಕೆಲಸ ಮಾಡಲಾಗಿದೆ.

ಕುಕನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಪಾಟೀಲ್, ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂಡಿ ಪ್ರಕಟಣೆ ಮೂಲಕ ಹೇಳಿಕೆ ನೀಡಿ,ಮುಜಗರ ಉಂಟು ಮಾಡಿದ್ದಾರೆ. ವೈಯಕ್ತಿಕ ಲಾಭಕ್ಕೆ ನಾವು ಮುಂದಾಗುವುದಿಲ್ಲ. ಯಾರ ಬಳಿಯು ವೈಯಕ್ತಕ ಲಾಭ ಪಡೆಯುವ ಉದ್ದೇಶವಿಲ್ಲ. ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎಂದರು.

ಕುಕನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಪಾಟೀಲ್, ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂಡಿ ಅವರು ಶಾಸಕ ಬಸವರಾಜ ರಾಯರಡ್ಡಿ ಕಾರ್ ಹತ್ತಿ ಬರೀ ಪೋಸ್ ಕೊಡ್ತಾರೆ. ಯಾರಿಗಾದರೂ ಅಪಘಾತ ಆದವರಿಗೆ ಇಲ್ಲವೇ ಕಷ್ಟದಲ್ಲಿದ್ದವರಿಗೆ ಒಂದು ಸಹಾಯ ಮಾಡಿದ್ದಾರೆಯೇ, ಇವರಿಂದ ಜನರ ಕಷ್ಟಕ್ಕೆ ಸ್ಪಂದನೆ ಹೇಗೆ ಸಿಗುತ್ತದೆ ಎಂದು ಪ್ರಶ್ನಿಸಿದರು.

ಬಿ.ಕೆ. ಹರಿಪ್ರಸಾದ್ ಅವರಿಗೆ ಅಭಿನಂದಿಸಲು ಹೋಗಬಾರದು ಎಂದರೆ ನಮ್ಮ ಯಲಬುರ್ಗಾ ಕ್ಷೇತ್ರಕ್ಕೆ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲವಾ, ನಾವು ನಮ್ಮ ಪಕ್ಷದ ಅಧ್ಯಕ್ಷರನ್ನು ಅಭಿನಂದಿಸಿ ಬಂದಿದ್ದು ಹೇಗೆ ಮುಜುಗರ ಆಗುತ್ತದೆ, ಹಾಗಾದರೆ ಸಿಎಂ ಡಿಕೆಶಿ ಅವರು ಬಿಜೆಪಿ, ಜೆಡಿಎಸ್ ನಾಯಕರಿಗೆ ಸಿಎಂ ಆದ ನಂತರ ಭೇಟಿ ಮಾಡಿದ್ದು ಸರಿನಾ ಎಂದು ಪ್ರಶ್ನಿಸಿದರು.

ಮಾಜಿ ತಾಪಂ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆ ತರುವ ಕೆಲಸ ಮಾಡಲಾಗುವುದು. ಅವರ ಪರ ಕಾಂಗ್ರೆಸ್ ಟಿಕೆಟ್ ನೀಡುವಂತೆ ಒತ್ತಾಯ ಮಾಡುತ್ತೇವೆ. ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ವಯಸ್ಸು ಆಗಿದ್ದು, ಅವರು ಯುವಕರಿಗೆ ಅವಕಾಶ ನೀಡಿ, ಹಿರಿಯರಾಗಿ ಮಾರ್ಗದರ್ಶನ ಮಾಡಲಿ ಎಂದರು.

ಮಾಜಿ ತಾಪಂ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಮಾತನಾಡಿ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ತನ್ನ ಸ್ನೇಹಿತರೊಬ್ಬರ ಸಂಬಂಧಿ. ಅವರನ್ನು ನಾನು ಆತ್ಮೀಯತೆ ಹಾಗೂ ಸೌಜನ್ಯದಿಂದ ಅಭಿನಂದಿಸಲು ಹೋಗಿದ್ದೇನೆ. ಅದು ಕಾಂಗ್ರೆಸ್ ಪಾಳಯದಲ್ಲಿ ಯಾವ ರೀತಿ ಮುಜುಗರ ನೀಡಿದೆ ಎಂದು ಅರ್ಥವಾಗುತ್ತಿಲ್ಲ ಎಂದರು.

ಈ ಸಂದರ್ಭದಲ್ಲಿ ಫಕೀರಪ್ಪ ತಳವಾರ, ನಿಲ್ಲನಗೌಡ ಪೊಲೀಸ್ ಪಾಟೀಲ್, ಷಣ್ಮುಖಪ್ಪ ರಾಂಪೂರ, ಪ್ರಕಾಶ ಚಿನ್ನೂರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಲಡ್ ಡೋನರ್ಸ್ ಕಾರವಾರ ತಂಡದ ದಶಮಾನೋತ್ಸವ
ವಿದ್ಯಾರ್ಥಿ ಸಾವು: ಸಮರ್ಪಕ ತನಿಖೆಗೆ ಆಗ್ರಹಿಸಿ 18ರಂದು ಪ್ರತಿಭಟನೆ