ರೈತರಿಗೆ ಅದರಲ್ಲೂ ರೈತ ಸಂಘಟನೆಗಳಿಗೆ ಬಹು ನಿರೀಕ್ಷತ ಬಗರ್ ಹುಕುಂ ಸಕ್ರಮೀಕರಣ ಸಾಗುವಳಿ ಸಮಿತಿ ಅಧ್ಯಕ್ಷರೂ ಆದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅಧ್ಯಕ್ಷತೆಯಲ್ಲಿ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸಭೆ ನಡೆದಿದ್ದು,೮ ಸಾಗುವಳಿಗೆ ಸಮಿತಿ ಸಭೆಯಲ್ಲಿ ಶಿಪಾರಸ್ಸು ಮಾಡಿದೆ.
8 ಸಾಗುವಳಿ ಮರು ಸರ್ವೆ, 3 ದಾಖಲಾತಿ ಮತ್ತೆ ಪರಿಶೀಲನೆ |
ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯಲ್ಲಿ ಸೂಚನೆ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ರೈತರಿಗೆ ಅದರಲ್ಲೂ ರೈತ ಸಂಘಟನೆಗಳಿಗೆ ಬಹು ನಿರೀಕ್ಷತ ಬಗರ್ ಹುಕುಂ ಸಕ್ರಮೀಕರಣ ಸಾಗುವಳಿ ಸಮಿತಿ ಅಧ್ಯಕ್ಷರೂ ಆದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅಧ್ಯಕ್ಷತೆಯಲ್ಲಿ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸಭೆ ನಡೆದಿದ್ದು,೮ ಸಾಗುವಳಿಗೆ ಸಮಿತಿ ಸಭೆಯಲ್ಲಿ ಶಿಪಾರಸ್ಸು ಮಾಡಿದೆ.
ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಕಾರ್ಯದರ್ಶಿಗಳೂ ಆದ ತಹಸೀಲ್ದಾರ್ ಎಂ.ಎಸ್.ತನ್ಮಯ್ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯಲ್ಲಿ 19 ಸಾಗುವಳಿ ಮಂಜೂರಾತಿ ಕಡತಗಳನ್ನು ಇಟ್ಟರು.
ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ 19 ಸಾಗುವಳಿ ಮಂಜೂರಾತಿ ಕಡತ ಪರಿಶೀಲನೆ ನಡೆಸಿದ್ದು, 8 ಮಂಜೂರಾತಿ ಕಡತಗಳಿಗೆ ಶಿಪಾರಸ್ಸು ಮಾಡಿದರು. 8 ಸಾಗುವಳಿಗೆ ಮರು ಸರ್ವೆಗೆ ಸೂಚನೆ ನೀಡಿದರು.
ಅಲ್ಲದೆ 3 ಸಾಗುವಳಿ ಕಡತಗಳ ದಾಖಲಾತಿಗಳನ್ನು ಮತ್ತೆ ಪರಿಶೀಲನೆ ನಡೆಸಿ ಮುಂದಿನ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ ಗಮನಕ್ಕೆ ತರಬೇಕು ಎಂದು ಸಮಿತಿ ಕಾರ್ಯದರ್ಶಿ ಹಾಗೂ ತಹಸೀಲ್ದಾರ್ ಎಂ.ಎಸ್.ತನ್ಮಯ್ಗೆ ಸೂಚನೆ ನೀಡಿದರು.ಡಿಸಿಎಫ್ ಸೂಚನೆ:
ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಲ್.ನಂದೀಶ್ಗೆ ಸಭೆಯಲ್ಲಿಯೆ ಮೊಬೈಲ್ ಮೂಲಕ ಸಂಪರ್ಕಿಸಿ, ಅರಣ್ಯ ಇಲಾಖೆಗೆ ಬಂದ ಸಾಗುವಳಿ ಕಡತಗಳ ಪರಿಶೀಲನೆ ನಡೆಸಿ ಬೇಗ ಕಳುಹಿಸಿ ಎಂದು ಸೂಚನೆ ನೀಡಿದರು. ಸಭೆಯಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯ ಪಿ.ಮಹದೇವಪ್ಪ, ರಾಜಸ್ವ ನಿರೀಕ್ಷಕರು, ಗ್ರಾಮ ಅಡಳಿತ ಅಧಿಕಾರಿಗಳು ಇದ್ದರು.-----------
15ಜಿಪಿಟಿ1
ಗುಂಡ್ಲುಪೇಟೆ ತಾಲೂಕು ಕಚೇರಿಯಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ರೈತರೊಂದಿಗೆ ಚರ್ಚಿಸಿದರು. ತಹಸೀಲ್ದಾರ್ ಎಂ.ಎಸ್.ತನ್ಮಯ್ ಇದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.