ಬೇಲೂರು: ಚೆನ್ನಕೇಶವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬೇಲೂರು ತಾಲೂಕು ಜೆಡಿಎಸ್ ಪಕ್ಷದ ವತಿಯಿಂದ ಶಾಸಕ ಎಚ್ ಡಿ ರೇವಣ್ಣನವರ ಹುಟ್ಟುಹಬ್ಬವನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಚರಿಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಕೆ ಎಸ್ ಲಿಂಗೇಶ್, ಜಿಲ್ಲೆಯ ಅಭಿವೃದ್ಧಿ ಹರಿಕಾರರಾದ ಶಾಸಕ ರೇವಣ್ಣನವರ ೬೮ನೇ ಜನ್ಮದಿನವನ್ನು ಆಚರಿಸುತ್ತಿದ್ದು, ಇದರ ಜೊತೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರಸಚಿವ ಎಚ್ ಡಿ ಕುಮಾರಸ್ವಾಮಿಯವರ ೬೬ನೇ ಹುಟ್ಟುಹಬ್ಬವನ್ನು ಶ್ರೀ ಚನ್ನಕೇಶವ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಅವರ ಆರೋಗ್ಯ, ಆಯಸ್ಸು ಹಾಗೂ ರಾಜಕೀಯ ಜೀವನ ಇನ್ನು ಯಶಸ್ಸಿನ ಉತ್ತುಂಗಕ್ಕೇರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ.ರೇವಣ್ಣನವರು ಯಾವುದೇ ರೀತಿಯಲ್ಲಿ ದೃತಿಗೆಡದೆ ರಾಜಕೀಯವಾಗಿ ಮುಂದುವರಿದು ಯಾರ ಅಂಜಿಕೆಗೂ ಹೆದರದೆ ತಮ್ಮ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದಾರೆ. ನಿಮ್ಮ ಜೊತೆಯಲ್ಲಿ ನಾವೆಲ್ಲರೂ ನಿಮ್ಮ ನಾಯಕತ್ವದ ಅಡಿಯಲ್ಲಿ ಇದ್ದೇವೆ. ಮುಂದಿನ ದಿನದಲ್ಲಿ ರಾಜ್ಯ ಹಾಗೂ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಮತ್ರೆ ನಮ್ಮ ಕ್ಷೇತ್ರಕ್ಕೆ ಅಭಿವೃದ್ಧಿ ಕೆಲಸಗಳಾಗಲಿ ಎಂದು ಹಾರೈಸಿದರು.
ನಂತರ ಮಾತನಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ ತೊ.ಚ ಅನಂತಸುಬ್ಬರಾಯ, ಅಭಿವೃದ್ಧಿ ಹರಿಕಾರ ಎಚ್ ಡಿ ರೇವಣ್ಣನವರ ಹುಟ್ಟುಹಬ್ಬವನ್ನು ಚನ್ಬಕೇಶವ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಆಚರಿಸಿದ್ದು, ಅವರ ರಾಜಕೀಯ ಜೀವನ ಆರೋಗ್ಯ ಆಯಸ್ಸು ಚೆನ್ನಾಗಿರಲಿ ಅವರ ಮಾರ್ಗದರ್ಶನದಲ್ಲಿ ನಾವು ಅವರ ಜೊತೆ ಇದ್ದು ಕೈಜೋಡಿಸುತ್ತೇವೆ. ಪಕ್ಷವನ್ಬು ಇನ್ನಷ್ಟು ಬಲಪಡಿಸುತ್ತೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರೇಬಗೌಡ, ಎಂಎ ನಾಗರಾಜ್, ನಾಗೇಶ್ ಯಾದವ್, ಉಮೇಶ್, ಅದ್ಧೂರಿ ಕುಮಾರ್ ಮೊದಲಾದವರಿದ್ದರು.
============ಬೇಲೂರು ಚೆನ್ನಕೇಶವ ದೇಗುಲದಲ್ಲಿ ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್ ಡಿ ರೇವಣ್ಣನವರ ಹುಟ್ಟುಹಬ್ಬ ಆಚರಿಸಲಾಯಿತು.