ಕನ್ನಡಪ್ರಭ ವಾರ್ತೆ, ಭದ್ರಾವತಿ
ನಗರದ ವೀರಶೈವ ಸಭಾ ಭವನದಲ್ಲಿ ಭಾನುವಾರ ಅವರು ಕಾರ್ಮಿಕ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಣೆ, ಕಾರ್ಪೆಂಟರ್ ವೃತ್ತಿನಿರತರಿಗೆ ಕಿಟ್ ವಿತರಣೆ ಹಾಗೂ ಜಿ +3 ಗುಂಪು ಮನೆಗಳ ಫಲಾನುಭವಿಗಳ ಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
4 ಚುನಾವಣೆಗಳಲ್ಲಿ ಕ್ಷೇತ್ರದ ಜನರ ವಿಶ್ವಾಸ ಗಳಿಸಿರುವ ಶಾಸಕರು, ಕ್ಷೇತ್ರದ ಇತಿಹಾಸದಲ್ಲೇ ಸುಮಾರು 8 ಸಾವಿರಕ್ಕೂ ಅಧಿಕ ಬಡವರ ಮನೆಗಳಿಗೆ ಹಕ್ಕುಪತ್ರ ಕೊಡಿಸಿರುವ ಏಕೈಕ ಜನನಾಯಕರಾಗಿದ್ದಾರೆ. ಕ್ಷೇತ್ರವನ್ನು ಮುಂದಿನ ಒಂದು ವರ್ಷದಲ್ಲಿ ಮಾದರಿ ಕ್ಷೇತ್ರವನ್ನಾಗಿ ರೂಪಿಸುತ್ತಾರೆಂಬ ವಿಶ್ವಾಸವಿದೆ ಎಂದರು.ದೇಶದಲ್ಲಿ ನುಡಿದಂತೆ ನಡೆದ ಸರ್ಕಾರ ಕಾಂಗ್ರೆಸ್ ಸರ್ಕಾರ. ಕೇವಲ 9 ತಿಂಗಳ ಅವಧಿಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಜನರು ಜನಪರ ಆಡಳಿತವನ್ನು ಆರಿಸುವಷ್ಟು ಬುದ್ಧಿವಂತರಾಗಿದ್ದಾರೆ. ಸುಳ್ಳು ಭರವಸೆಗಳಿಗೆ, ಆಶ್ವಾನೆಗಳಿಗೆ ಮರಳಾಗುವುದಿಲ್ಲ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಲ್ಕೀಷ್ ಬಾನು ಮಾತನಾಡಿ, ಈ ಹಿಂದೆಯೂ ಸರ್ಕಾರಗಳಿತ್ತು. ಆದರೆ, ಭದ್ರಾವತಿಯ ಬಹಳಷ್ಟು ಜನರಿಗೆ ಸೂರು ಒದಗಿಸಿರುವುದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ. ಕಾಂಗ್ರೆಸ್ ಪಕ್ಷ ಜನತೆಗೆ ವಾಗ್ದಾನ ನೀಡಿದಂತೆ ನಡೆದುಕೊಂಡಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನೇಕ ಯೋಜನೆಗಳ ಮೂಲಕ ಸ್ತ್ರೀಯರ ಸಬಲೀಕರಣಕ್ಕೆ ಕಾರಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗಣೇಶ್ ಪ್ರಾರ್ಥಿಸಿದರು. ಎಂ.ಶಿವಕುಮಾರ್ ಮತ್ತು ಅಭಿಲಾಷ್ ನಿರೂಪಿಸಿ, ವಂದಿಸಿದರು.
ಕಾರ್ಮಿಕ ಇಲಾಖೆ ವತಿಯಿಂದ ಭದ್ರಾವತಿ ವೀರಶೈವ ಸಭಾ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಣೆ, ಕಾರ್ಪೆಂಟರ್ ವೃತ್ತಿನಿರತರಿಗೆ ಕಿಟ್ ವಿತರಣೆ ಹಾಗೂ ಜಿ +3 ಗುಂಪು ಮನೆಗಳ ಫಲಾನುಭವಿಗಳ ಸಭೆ ಕಾರ್ಯಕ್ರಮ ಶಾಸಕ ಬಿ.ಕೆ.ಸಂಗಮೇಶ್ವರ್ ಉದ್ಘಾಟಿಸಿದರು.