ಕುರುಬರ ಬೆಂಬಲದಿಂದ ಶಾಸಕ ಸ್ಥಾನ: ಗಾಲಿ ಜನಾರ್ದನ ರೆಡ್ಡಿ

KannadaprabhaNewsNetwork |  
Published : Nov 09, 2025, 03:00 AM IST
8ುಲು1 | Kannada Prabha

ಸಾರಾಂಶ

ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ಕುರುಬ ಸಮುದಾಯ ಪ್ರೇರಣೆ

ಗಂಗಾವತಿ: ಕುರುಬ ಸಮಾಜದಿಂದ ನಾನು ಗಂಗಾವತಿ ಶಾಸಕನಾಗಲು ಸಾಧ್ಯವಾಯಿತು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ನಗರದ ಕನಕದಾಸ ವೃತ್ತದಲ್ಲಿ ತಾಲೂಕಾಡಳಿತ ಏರ್ಪಡಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ಕುರುಬ ಸಮುದಾಯ ಪ್ರೇರಣೆಯಾಗಿದ್ದು, ತಾವು ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸಲು ಕುರಬು ಸಮಾಜದ ವ್ಯಕ್ತಿಯೊಬ್ಬರು ಶಕ್ತಿಯಾಗಿ ನಿಂತಿದ್ದಕ್ಕೆ ನನಗೆ ಈ ಸ್ಥಾನ ದೊರೆಯಲು ಕಾರಣವಾಯಿತು ಎಂದರು.

ಕನಕರಿಗೆ ವೆಂಕಟೇಶ್ವರ ಸ್ವಾಮಿ ಮತ್ತು ಶ್ರೀಕೃಷ್ಣ ಒಲಿದಿದ್ದಾರೆ. ಇಂತಹ ದೈವಿ ಪುರುಷರೆನಿಸಿಕೊಂಡಿದ್ದ ಕನಕದಾಸರು ಹಾಕಿ ಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೇಕೆಂದರು.

ಗಂಗಾವತಿ ನಗರದ ಸರ್ವಾಂಗೀಣ ಅಭಿವೃದ್ಧಿಗೆ ₹45 ಕೋಟಿ ಅನುದಾನವನ್ನು 15 ವಾರ್ಡ್‌ಗಳಲ್ಲಿ ರಸ್ತೆ ಸೇರಿದಂತೆ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ತಾಲೂಕಿನ ಐತಿಹಾಸಿಕ ಪ್ರಸಿದ್ಧ ಆನೆಗೊಂದಿ ಗ್ರಾಮದ ಅಭಿವೃದ್ಧಿಗೆ ₹10 ಕೋಟಿ ವೆಚ್ಚ ಮಾಡಲಾಗುತ್ತದೆ. ಗಂಗಾವತಿ ನಗರದ ಹೊರ ವಲಯದಲ್ಲಿ ಬೈಪಾಸ್ ರಸ್ತೆಗೆ ₹150 ಕೋಟಿ ಆಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತದೆ ಎಂದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ದಾಸ ಶ್ರೇಷ್ಠರಲ್ಲಿ ಕನಕದಾಸರು ಒಬ್ಬರಾಗಿದ್ದಾರೆ. ದಾಸ ಸಾಹಿತ್ಯ, ವಚನ ಸಾಹಿತ್ಯದಿಂದ ಸಮಾಜ ವಿಕಸನವಾಗುತ್ತದೆ. ಈ ಹಿಂದೆ ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಕನಕದಾಸ ವೃತ್ತದಲ್ಲಿ ಕನಕದಾಸ ಪುತ್ಥಳಿಗೆ ವೈಯಕ್ತಿಕ ಅನುದಾನ ನೀಡಿರುವದಾಗಿ ತಿಳಿಸಿದರು.

ವಿಪ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ್ ಮಾತನಾಡಿ, ಶಾಸಕರು ರಸ್ತೆ ಸುಂದರೀಕರಣಗೊಳಿಸಿದ್ದಾರೆ. ಕನಕದಾಸರು ದೈವಿ ಭಕ್ತರಾಗಿದ್ದು, ಸಿಎಂ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ಮೇಲೆ ರಾಜ್ಯದಲ್ಲಿ ಸಮೃದ್ಧ ಮಳೆಯಾಗಿದೆ. ನಗರದ ರಸ್ತೆಯಲ್ಲಿರುವ ಗುಂಡಿ ಮುಚ್ಚುವ ಕಾರ್ಯವಾಗಬೇಕಾಗಿದೆ. ಸಮುದಾಯ ಭವನಕ್ಕೆ ಸಿಎಂ ಅನುದಾನಕ್ಕೆ ಮನವಿ ಮಾಡೋಣ ಎಂದರು.

ಉಪನ್ಯಾಸವನ್ನು ಕೇಂದ್ರಿಯ ವಿದ್ಯಾಲಯ ಉಪನ್ಯಾಸಕಿ ಲಕ್ಷ್ಮಿದೇವಿ ಕುರಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕುರಬ ಸಮಾಜದ ಪ್ರತಿಭಾವಂತರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ರಮೇಶ್ ಚೌಡ್ಕಿ, ಯಮನಪ್ಪ ವಿಠಾಲಪುರ, ಶರಣೇಗೌಡ, ತಹಸೀಲ್ದಾರ ಮಹಾಂತಗೌಡ, ಪೌರಾಯುಕ್ತ ವಿರೂಪಾಕ್ಷ ಮೂರ್ತಿ, ಇಓ ರಂಗಪ್ಪ ರಡ್ಡಿ, ಎಫ್, ರಾಘವೇಂದ್ರ, ಪ್ರಕಾಶ್ ಮಾಳೆ. ಇಯಿಯಾಸ್ ಖಾದ್ರಿ, ನಗರಸಭೆ ಮಾಜಿ ಅದ್ಯಕ್ಷ ಮೌಲಾಸಾಬ್‌, ಪತ್ರಕರ್ತ ಕೆ.ನಿಂಗಜ್ಜ, ಹನುಮಂತಪ್ಪ ಗಿಡ್ಡಿ. ಗಿರೇಗೌಡ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ