ಬಾಯಿಮಾತಿನಿಂದ ಪರಿವರ್ತನೆ ಸಾಧ್ಯವಿಲ್ಲ ಎಂದ ಶಾಸಕ ಸುರೇಶ್

KannadaprabhaNewsNetwork |  
Published : Jan 12, 2026, 01:45 AM IST
 ಹಳೇಬೀಡು ಸಮೀಪ ಹಗರೆಯಲ್ಲಿ  ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಬೇಲೂರು ಕ್ಷೇತ್ರದ ಜನ ಪ್ರೀಯ ಶಾಸಕಎಚ್.ಕೆ.ಸುರೇಶ್ ಶಿಬಿರಾರ್ಥಿಗಳಿಗೆ ಮಾಹಿತಿ ನೀಡುತ್ತಿರುವುದು. | Kannada Prabha

ಸಾರಾಂಶ

ಹಳೇಬೀಡು ಸಮೀಪ ಹಗರೆಯ ಶ್ರೀ ಸತ್ಯನಾರಾಯಣ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಮಾತನಾಡುತ್ತ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕ್ರಾಂತಿಕಾರಿ ಪರಿವರ್ತನೆ ಮಾಡಿ ತೋರಿಸಿದ್ದಾರೆ. ಮಹಿಳಾ ಸಬಲೀಕರಣ, ಮದ್ಯವರ್ಜನ ಶಿಬಿರಗಳು, ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸ್ವಾವಲಂಬನೆ, ಸಹಕಾರ, ನಾಯಕತ್ವ, ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿದ್ದಾರೆ. ವ್ಯಸನಮುಕ್ತರು ಇತರ ಮದ್ಯವ್ಯಸನಿಗಳನ್ನೂ ವ್ಯಸನಮುಕ್ತರಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಹಳೇಬೀಡುಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಬಾಯಿಮಾತಿನಿಂದ ಪರಿವರ್ತನೆ ಸಾಧ್ಯವಿಲ್ಲ. ಕಾಯಕದ ಬಗ್ಗೆ ಮಾತು, ಉಪನ್ಯಾಸದ ಅಗತ್ಯವಿಲ್ಲ. ಮಾತಿನಲ್ಲಿ ಹೇಳುವುದನ್ನು ಕಾಯಕದಲ್ಲಿ ಮಾಡಿ ತೋರಿಸಬೇಕು ಎಂದು ಬೇಲೂರು ಕ್ಷೇತ್ರದ ಜನ ಪ್ರೀಯ ಶಾಸಕ ಎಚ್. ಕೆ. ಸುರೇಶ್ ತಿಳಿಸಿದರು.ಹಳೇಬೀಡು ಸಮೀಪ ಹಗರೆಯ ಶ್ರೀ ಸತ್ಯನಾರಾಯಣ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಮಾತನಾಡುತ್ತ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕ್ರಾಂತಿಕಾರಿ ಪರಿವರ್ತನೆ ಮಾಡಿ ತೋರಿಸಿದ್ದಾರೆ. ಮಹಿಳಾ ಸಬಲೀಕರಣ, ಮದ್ಯವರ್ಜನ ಶಿಬಿರಗಳು, ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸ್ವಾವಲಂಬನೆ, ಸಹಕಾರ, ನಾಯಕತ್ವ, ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿದ್ದಾರೆ. ವ್ಯಸನಮುಕ್ತರು ಇತರ ಮದ್ಯವ್ಯಸನಿಗಳನ್ನೂ ವ್ಯಸನಮುಕ್ತರಾಗಿ ಮಾಡಬೇಕು ಎಂದು ಸಲಹೆ ನೀಡಿದರು.ಬೇಲೂರು ತಾ.ವೀ.ಸಂಘದ ಅಧ್ಯಕ್ಷ ಎ.ಎಸ್.ಬಸವರಾಜು ಮಾತನಾಡುತ್ತ ಆಚಾರವೇ ಸ್ವರ್ಗ, ಅನಾಚರವೇ ನರಕ ಎಂದು ಬಸವಣ್ಣ ಹೇಳಿದ ವಚನವನ್ನು ನಾವು ನೆನಪಿನಲ್ಲಿಟ್ಟುಕೊಂಡು ಸತ್ಕಾರ್ಯಗಳನ್ನೇ ಮಾಡಬೇಕು. ಎಲ್ಲರೂ ಜಾಗೃತರಾಗಿ ಅನ್ಯಾಯ, ಅತ್ಯಾಚಾರ ತಡೆಗಟ್ಟಬೇಕು. ಶಾಲಾ ಪಠ್ಯದಲ್ಲಿ ಸಾಮಾಜಿಕ ಪಿಡುಗುಗಳು ಹಾಗೂ ದುಶ್ಚಟಗಳ ಬಗ್ಗೆ ಅರಿವು, ಜಾಗೃತಿ ಮೂಡಿಸುವ ನೀತಿಪಾಠಗಳನ್ನು ಅಳವಡಿಸಬೇಕು. ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹ ನೀಡಬೇಕು. ಅನಧಿಕೃತ ಹಾಗೂ ನಕಲಿ ಮದ್ಯ ಮಾರಾಟ ತಡೆಗಟ್ಟಬೇಕು ಎಂದು ತಿಳಿಸಿದರು.ಸಮಿತಿ ಗೌರವ ಅಧ್ಯಕ್ಷ ಡಿಶಾಂತ್‌ ಕುಮಾರ್ ಮಾತನಾಡುತ್ತ ದುಶ್ಚಟಗಳ ಭಿಕ್ಷೆಗಿಂತ ಸದ್ಗುಣಗಳ ದೀಕ್ಷೆಯಿಂದ(ಶಿಬಿರ) ಜೀವನ ಪಾವನವಾಗುತ್ತದೆ. ವ್ಯಸನಮುಕ್ತರು ಸಾರ್ಥಕ ಜೀವನ ನಡೆಸಬೇಕು ಎಂದು ಹೇಳಿದರು. ಈ ಸಮಾರಂಭದ ವೇದಿಕೆ ಮೇಲೆ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್, ಶೇಖರ್‌ ಗೌಡ, ಗೌ.ಅ. ಕಾಂತರಾಜು, ಹಾಸನ ಜಿಲ್ಲಾ ಜನಜಾಗೃತಿ ಅಧ್ಯಕ್ಷ ಢಾ.ನವೀನ್‌ಶೆಟ್ಟಿ, ಜಿಲ್ಲಾ ನಿರ್ದೇಶಕರಾದ ಸುರೇಶ್ ಮೊಯ್ಲಿ, ಕ್ಷೇತ್ರ ಯೋಜನೆ ಅಧಿಕಾರಿ ಟಿ.ಆರ್‌. ಮಂಜುಳ, ಮೇಲ್ವಿಚಾರಕ ಚಂದ್ರಶೇಖರ್‌ ನಾಯಕ್ ಹಾಗೂ ಎಲ್ಲಾ ಸೇವ ಪ್ರತಿನಿಧಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ